ಲೋಣಾವಲಾ ನಸುಕು

ಮೂಲ ಕವಿತೆ : ಶೇನ್ ಹಾವ್ಬೋ (ಚೈನಾ) 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 
Image result for lonavala river egret wiki

ಹಕ್ಕಿಹಾಡು ಕಿವಿಯಲ್ಲಿ ತೊಟ್ಟಿಕ್ಕುತ್ತದೆ 
ಎಣ್ಣೆಯ ಹನಿಗಳಂತೆ. 
ನಾನು ಮೇಲೆದ್ದು ಬಟ್ಟೆ ಧರಿಸಿ ಹೊರಗೆ ಬರುತ್ತೇನೆ. 
ದೂರದಲ್ಲಿ ಮಂಜಿನ ಪರದೆಯ ಮೂಲಕ ನನಗೆ ಕಾಣಿಸುತ್ತಾನೆ 
ನದೀತೀರದಲ್ಲಿ ಕುಕ್ಕರುಗಾಲಲ್ಲಿ ಬಹಿರ್ದೆಸೆಗೆ ಕುಳಿತ  
ಬಿಳಿಬಟ್ಟೆ ತೊಟ್ಟ ಒಬ್ಬ ಇಂಡಿಯನ್. 
ಈ ದೃಶ್ಯವನ್ನು ನಾನು ಓದಿದ್ದೇನಲ್ಲ 
ಬಹಳ ಹಿಂದೆ
ಇಂಡಿಯಾ ಕುರಿತು ನೈಪಾಲ್ ಅವರ ಕಹಿಬರಹಗಳಲ್ಲಿ -
ಆತ ವರ್ಣಿಸುತ್ತಾನೆ
ನದೀತೀರದಲ್ಲಿ ಸಾಲಾಗಿ ಬಹಿರ್ದೆಸೆಗೆ ಕುಕ್ಕರಿಸಿ 
ಹರಟೆ ಹೊಡೆಯುವ ಇಂಡಿಯನ್ನರ ಸಾಲು. 
ನಾನು ಕಣ್ಣು ಅಗಲಿಸಿ ಕತ್ತೆತ್ತಿ ನೋಡುತ್ತೇನೆ, 
ಬಹಿರ್ದೆಸೆಗೆ ಕುಳಿತ ಇನ್ನಷ್ಟು ಜನರನ್ನು ನೋಡುವ ಸೆಳೆತದಿಂದ. 
ನನಗೆ ನನ್ನ ತಪ್ಪಿನ ಅರಿವಾಗುತ್ತದೆ,
ನದಿಯ ತೀರದಲ್ಲಿ  ಯಾವ ಇಂಡಿಯನ್ನರೂ ಕುಕ್ಕರಿಸಿಲ್ಲ. 
ಅಲ್ಲಿ ಒಂಟಿಯಾಗಿ ಅಲ್ಲಾಡದೆ ನಿಂತಿರುವುದು 
ಒಂದು ಬಿಳಿ ಕೊಕ್ಕರೆ. 
 

ಕಾಮೆಂಟ್‌ಗಳು

  1. Birdsong trickles in like eardrops.
    I get up, get dressed,
    step outside.
    In the distance, through the mist of dawn I see
    an Indian in white squatting by the river taking a shit.
    I read this scene
    in Naipaul’s harsh writings on India
    ages ago -
    he describes
    a row of Indians
    squatting by the river taking a shit,
    shitting while chatting
    as if hobnobbing.
    So I widen my eyes,
    crane my neck,
    keen to see more shitting people,
    only to discover
    I saw wrong.
    There is no Indian in white squatting by the river,
    just a white egret,
    motionless,
    standing there.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)