ಹೇರಿಕೆ
ಸಿ. ಪಿ. ರವಿಕುಮಾರ್
ಹೇರುತ್ತಿರುವರು ಯಾರು ನಮ್ಮ ತಟ್ಟೆಯ ಮೇಲೆ
ಆಲೂಗೋಬಿ, ರಾಜ್ಮಾ ಮತ್ತು ಛೋಲೆ
ಯಾರದು ನಮ್ಮ ರಾಗಿಮುದ್ದೆ ಸಾರು
ಮೆನುವಿನಿಂದ ಅಳಿಸಿ ತಂದಿದ್ದು ಕಡಾಯಿ ಪನೀರು?
ನಿಂಬೆಹಣ್ಣಿನ ಚಿತ್ರಾನ್ನ, ಮೊಸರನ್ನ, ಸಾರು
ಲೆಮನ್ ರೈಸ್ ಕರ್ಡ್ ರೈಸ್ ರಸಂ ಮಾಡಿದವರಾರು?
ಬಾಳೆಲೆ ಮುತ್ತುಗದ ಎಲೆ ಮೇಲೆ ಊಟ
ಬಿಟ್ಟು ಕೈಗೆ ಕೊಟ್ಟವರಾರು ಪ್ಲಾಸ್ಟಿಕ್ ತಟ್ಟೆ ಲೋಟ?
ಕಚ್ಚೆ ಪಂಚೆ ಮತ್ತು ಮೈಸೂರು ರುಮಾಲು
ಕಸಿದುಕೊಂಡವರು ನಮ್ಮಿಂದ ಯಾರು?
ಸೀರೆಗೆ ಎತ್ನಿಕ್ ಡ್ರೆಸ್ ಎಂಬ ಹೆಗ್ಗಳಿಕೆ
ಕೊಟ್ಟು ಹೇರಿದವರು ಯಾರು ಚೂಡಿದಾರು?
ಹಳಗನ್ನಡವನ್ನು ನಮ್ಮಿಂದ ಕಿತ್ತು
ಹಳಸಲು ಕಾವ್ಯವನ್ನು ನಮ್ಮ ಕೈಲಿಟ್ಟು
ಓದಲೇ ಬೇಕೆಂದು 'ಪಥ್ಯ' ಪುಸ್ತಕದಲ್ಲಿ
ಹಾಕಿದವರು ಯಾರು ಮಕ್ಕಳಿಗೆ ಕರಾರು?
ಹೇರುತ್ತಿರುವವರು ಯಾರು ನಮ್ಮ ತಟ್ಟೆಯ ಮೇಲೆ
ಆಲೂಗೋಬಿ, ರಾಜ್ಮಾ ಮತ್ತು ಛೋಲೇ
ನೀನು ಹೇಳು ಬ್ರದರ್, ಸಿಸ್ಟರ್ ನೀನು ಹೇಳೇ
ಆಲೂಗೋಬಿ, ರಾಜ್ಮಾ ಮತ್ತು ಛೋಲೆ
ಯಾರದು ನಮ್ಮ ರಾಗಿಮುದ್ದೆ ಸಾರು
ಮೆನುವಿನಿಂದ ಅಳಿಸಿ ತಂದಿದ್ದು ಕಡಾಯಿ ಪನೀರು?
ನಿಂಬೆಹಣ್ಣಿನ ಚಿತ್ರಾನ್ನ, ಮೊಸರನ್ನ, ಸಾರು
ಲೆಮನ್ ರೈಸ್ ಕರ್ಡ್ ರೈಸ್ ರಸಂ ಮಾಡಿದವರಾರು?
ಬಾಳೆಲೆ ಮುತ್ತುಗದ ಎಲೆ ಮೇಲೆ ಊಟ
ಬಿಟ್ಟು ಕೈಗೆ ಕೊಟ್ಟವರಾರು ಪ್ಲಾಸ್ಟಿಕ್ ತಟ್ಟೆ ಲೋಟ?
ಕಚ್ಚೆ ಪಂಚೆ ಮತ್ತು ಮೈಸೂರು ರುಮಾಲು
ಕಸಿದುಕೊಂಡವರು ನಮ್ಮಿಂದ ಯಾರು?
ಸೀರೆಗೆ ಎತ್ನಿಕ್ ಡ್ರೆಸ್ ಎಂಬ ಹೆಗ್ಗಳಿಕೆ
ಕೊಟ್ಟು ಹೇರಿದವರು ಯಾರು ಚೂಡಿದಾರು?
ಹಳಗನ್ನಡವನ್ನು ನಮ್ಮಿಂದ ಕಿತ್ತು
ಹಳಸಲು ಕಾವ್ಯವನ್ನು ನಮ್ಮ ಕೈಲಿಟ್ಟು
ಓದಲೇ ಬೇಕೆಂದು 'ಪಥ್ಯ' ಪುಸ್ತಕದಲ್ಲಿ
ಹಾಕಿದವರು ಯಾರು ಮಕ್ಕಳಿಗೆ ಕರಾರು?
ಹೇರುತ್ತಿರುವವರು ಯಾರು ನಮ್ಮ ತಟ್ಟೆಯ ಮೇಲೆ
ಆಲೂಗೋಬಿ, ರಾಜ್ಮಾ ಮತ್ತು ಛೋಲೇ
ನೀನು ಹೇಳು ಬ್ರದರ್, ಸಿಸ್ಟರ್ ನೀನು ಹೇಳೇ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ