ಪೋಸ್ಟ್‌ಗಳು

ನವೆಂಬರ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಂತಿ (ಅನುವಾದಿತ ಕವಿತೆ)

ಇಮೇಜ್
ಕೆನಡಾ ಗಡಿಯಲ್ಲೊಂದು ಅ-ರಾಷ್ಟ್ರೀಯ ಸ್ಮಾರಕ  ಮೂಲ: ವಿಲಿಯಮ್ ಸ್ಟಾಫರ್ಡ್ (ಅಮೆರಿಕಾ ಸಂಸ್ಥಾನ)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಇದು ಯಾವ ಯುದ್ಧವೂ ನಡೆಯದ ಮೈದಾನ, ಯಾವ ಅನಾಮಧೇಯ ಸೈನಿಕನೂ ಇಲ್ಲಿ ಬಿಡಲಿಲ್ಲ ಪ್ರಾಣ, ಇಲ್ಲಿ ಕೈ ಹಿಡಿದವು ಎರಡೂ ಕಡೆ ಬೆಳೆದ ಹುಲ್ಲುಗರಿಕೆ, ಯಾವುದೇ ಸ್ಮಾರಕವನ್ನೂ ಕಟ್ಟಿಲ್ಲ ಅದಕ್ಕೆ, ಇಲ್ಲಿ ಕಾಣುವ ಏಕಮಾತ್ರ ವೀರ ಚಿಹ್ನೆ ಮುಕ್ತಗಗನ.   ಹಕ್ಕಿಗಳು ಹಾರಾಡುತ್ತವೆ ನಿಶ್ಶಬ್ದವಾಗಿ ಇಲ್ಲಿ  ರೆಕ್ಕೆ ಬಿಚ್ಚಿ ಮುಕ್ತವಾಗಿ ತೆರೆದ ಬಾನಿನಲ್ಲಿ, ಯಾರೊಬ್ಬರೂ ಸಾಯಲಿಲ್ಲ ಈ ಬಯಲಿನ ಮೇಲೆ, ಎಷ್ಟು ಪಳಗಿದೆ ಬಯಲುಗಾಳಿ, ನಿರ್ಲಕ್ಷ್ಯದಿಂದೆಷ್ಟು ಪವಿತ್ರವಾಗಿದೆ ಬಯಲೆಂದರೆ, ಇದರ ಹೆಸರನ್ನು ಮರೆಯುವುದೇ ಜನರು ಕೊಟ್ಟ ಬಳುವಳಿ.  At the Un-National Monument Along the Canadian Border Birds fly here without any sound, unfolding their wings across the open. No people killed — or were killed — on this ground hallowed by neglect and an air so tame that people celebrate it by forgetting its name. —William E. Stafford

ನಿನ್ನುಲಿಗೇ ಕಾದಿರಬಹುದು ಗದ್ದಲದ ಸಂತೆ!

ಇಮೇಜ್
  ಎಲ್ಲಿ ಕಾಣಲೇ ಇಲ್ಲವಲ್ಲ ಬಹಳ ದಿನ ಎಲ್ಲಿ ಹಾರಲು ಪ್ರೇರೇಪಿಸಿತು ಮನ! ಒಮ್ಮೊಮ್ಮೆಯಾದರೂ ಹಾಕುತ್ತಿರು ಸ್ವಂತಿ ಲೈಕ್ ಹಾಕಲಿ ಬಿಡಲಿ ಜನರು! ಏನಂತೀ? ಗೆಳೆಯರಾದ ಮೇಲೆ ಸ್ನೇಹ ಯಾಚಿಸಿ ಬಂದು ಕಾಣೆಯಾಗುವರಲ್ಲ ಕೆಲವು ಫೇಸ್ಬುಕ್ ಬಂಧು ಅವರಂತೆ ನೀನೂ ತಲೆ ಮರೆಸಿಕೊಂಡು ಹೋಗಿಬಿಟ್ಟೆಯೋ ಏನೋ ಮಾಡಿ ಅನ್ಫ್ರೆಂಡು! ಟ್ವೀಟ್ ಮಾಡುತ್ತಿರುವುದೆಲ್ಲ ಗೂಗೆ-ರಣಹದ್ದು ಎಂದು ನಿಲ್ಲಿಸಿಬಿಟ್ಟೆಯಾ ನಿನ್ನ ಚಿಲಿಪಿಲಿ ಸದ್ದು! ಯಾರೂ ಕಿವಿ ಮುಚ್ಚುವುದಿಲ್ಲ, ನಿನಗೇಕೆ ಚಿಂತೆ ನಿನ್ನುಲಿಗೇ ಕಾದಿರಬಹುದು ಗದ್ದಲದ ಸಂತೆ!

ಟಿ.ವಿ. (ರೋಆಲ್ಡ್ ಡಾಲ್ ಅವರ ರಚನೆ)

ಇಮೇಜ್
ಮೂಲ: ರೋಆಲ್ಡ್ ಡಾಲ್  ಅನುವಾದ: ಸಿ ಪಿ ರವಿಕುಮಾರ್  ಏನಪ್ಪಾ ಅಂದ್ರೆ ನಾವು ತಿಳಕೊಂಡ ಅತಿಮುಖ್ಯ ಸಂಗ್ತಿ  ಮಕ್ಕಳ ವಿಷಯದಲ್ಲಿ ನಾವು ಹಾಕಬೇಕಾದ ಮೇಲ್ಪಂಕ್ತಿ  ಅವರನ್ನು ಬಿಡಬಾರ್ದು ಬಿಲ್ಕುಲ್ ಖಡಾಖಂಡಿತ ಟೆಲಿವಿಷನ್ ಸೆಟ್ ಹತ್ತಿರವೂ ಗೊತ್ತಾಯ್ತ? ಅದಕ್ಕಿಂತಲೂ ಕೊಡ್ಲಾ ಇನ್ನೊಂದು ಸಲಹೆ? ತರಲೇ ಬೇಡಿ ಹಾಳಾದ್ದನ್ನು ಮನೆಗೆ. ನಾವು ಹೋಗಿ ನೋಡಿದ ಪ್ರತಿಯೊಂದು ಮನೆಯಲ್ಲೂ  ಕೂತಿದ್ದರು ಜನ ಸುರಿಸುತ್ತಾ ಜೊಲ್ಲು  ಚಪ್ಪರಿಸುತ್ತಾ ಬಾಯಿ ಕಣ್ಣು ಮಿಟುಕಿಸದೇ  ಹೊರಕ್ಕೆ ಬಂದು ಬಿಡುವಂತೆ ಕಣ್ಣುಗಳ ಗುಡ್ಡೆ - (ನೋಡಿದೆವು ಹೋದವಾರ ಒಬ್ಬರ ಮನೆಯಲ್ಲಿ  ನೆಲದ ಮೇಲೆ ಕಣ್ಗುಡ್ಡೆ ಹತ್ತಾರು ಚೆಲ್ಲಾಪಿಲ್ಲಿ) ಕುಳಿತು ದುರುಗುಟ್ಟುತ್ತಾರೆ, ಕೂಡುತ್ತಾರೆ ದುರುಗುಡ್ತಾ   ಹಾಗೇ ಅದರ ಮೋಡಿಗೆ ಒಳಗಾಗಿಬಿಡ್ತಾ  ಟೈಟ್ ಆಗುತ್ತಾರೆ ಕುಡಿ ಕುಡಿದು ಕುಡಿದು ಅದರಲ್ಲಿ ಬರುವ ಹೊಲಸು ಪ್ರತಿಯೊಂದೂ.  ಅವರೇಕೆ ಸ್ತಬ್ಧರಾಗಿದ್ದಾರೆ ನಮಗೀಗ ಗೊತ್ತು  ಹೊರಗೇ ಬರುವುದಿಲ್ಲ ಅವರು ಸಂಜೆ ಹೊತ್ತು  ಕೂತಿದ್ದಾರೆ ಕಬಡ್ಡಿ ಗಿರಗಿಟ್ಲೆ ಮರೆತು  ಅಡುಗೆ ಕೆಲಸವನ್ನೆಲ್ಲಾ ನಿಮಗೇ ಬಿಟ್ಬಿಟ್ಟು    ತೊಳೆ-ಬಳೆವ ಕೆಲಸವೂ ನಿಮ್ಮದೇ ಸ್ವತ್ತು  ಯೋಚಿಸಿದ್ದೀರಾ ಯಾವತ್ತಾದ್ರೂ ಸ್ವಲ್ಪ ಹೊತ್ತು  ಇದರ ಪರಿಣಾಮ ಮ...