ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ
ಮೂಲ: ಲೂಯಿ ಕ್ವಿಂಟಾಯ್ಸ್ (ಪೋರ್ಚುಗಲ್)
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
"ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ."
ನನಗೆ ಪ್ರಾಪ್ತವಾದ ನೆನಪಿನಲ್ಲಿ ವ್ಯಾಪಿಸಿದೆ ಬಲಿದಾನ.
ಅಮ್ಮ ನನ್ನ ಕೈ ಹಿಡಿದು ಕರೆದೊಯ್ಯುತ್ತಾಳೆ.
ನಾವು ವಧಾಸ್ಥಾನದ ಅಂಚಿಗೆ ಬಂದಿದ್ದೇವೆ.
ಜೀವನದ ಕೊನೆಯ ಘಳಿಗೆಯನ್ನು ಮುಟ್ಟಿದ ಕೋಳಿಗಳ ಸದ್ದು.
ಮುಗ್ಧತೆಯಿಂದ ಅವು ಕೊಕ್ ಕೊಕ್ ಎನ್ನುತ್ತಿವೆ.
ಅಲ್ಲೇ ಬಿದ್ದಿರುವ ಹೆಣಗಳ ದೃಶ್ಯದಲ್ಲಿ ಹಿಂಸೆ ಮಡುಗಟ್ಟಿದೆ,
ಎಲ್ಲೆಡೆ ಹರಡಿಕೊಂಡಿದೆ ಚೀರುತ್ತಿರುವ ಕರುಳುಗಳ ದುರ್ವಾಸನೆ.
ಕ್ರೋಧ ಮತ್ತು ಶಬ್ದಗಳು ಕುಸಿದುಬಿದ್ದು ಕೊಳೆಯುತ್ತಿವೆ.
ವಧಾಸ್ಥಾನದ ಅಂಚಿನಲ್ಲಿವೆ ಕಟ್ಟೆಗಳು,
ಅಲ್ಲಿ ಕೇಳುತ್ತವೆ ಸತ್ಯ ಮತ್ತು ವ್ಯಾಪಾರದ ಕೂಗುಗಳು.
ದೊಡ್ಡ ಉಕ್ಕಿನ ಕೊಕ್ಕೆಗೆ ತೂಗಿಹಾಕಿದ ದಪ್ಪನೆಯ ಮಾಂಸ ಮೆಲ್ಲನೆ ಅಲ್ಲಾಡುತ್ತದೆ.
ನೆಂದ ಪುಕ್ಕಗಳು ಎಲ್ಲಾ ಕಡೆ ಚೆಲ್ಲಿವೆ.
ಶಿರಚ್ಛೇದವಾದ ಹುಂಜವೊಂದು ಜಗತ್ತನ್ನು ತಬ್ಬಿಕೊಂಡಿದೆ.
ಅಂಚಿನಲ್ಲಿರುವ ಹಳ್ಳದಲ್ಲಿ ಕೂಡಿಕೊಳ್ಳುವ ರಕ್ತ
ಹೋಗಿ ಸೇರಿಕೊಳ್ಳುತ್ತದೆ ಎಲ್ಲೋ ದೂರ -
ನನ್ನ ಕಲ್ಪನೆಯಲ್ಲಿ ಬೇರೊಂದು ದೇಶದಷ್ಟು ದೂರ.
ಕರುಳಿನ ವೇದನೆ ಒಂದಷ್ಟು ಕಡಿಮೆಯಾದಂತೆ ತೋರುತ್ತದೆ.
ಮಂದಿ ತಣ್ಣಗೆ ಕೂಡುತ್ತಿದ್ದಾರೆ ಮಧ್ಯಾಹ್ನದ ಊಟಕ್ಕೆ, ಎಳೆದುಕೊಂಡು ಪರದೆ.
ಹಿನ್ನೆಲೆ: ಕವಿತೆಯ ಪ್ರಾರಂಭದಲ್ಲಿ ಬರುವ "for the animals eternal Treblinka" ಎಂಬುದು ಐಸಾಕ್ ಬಾಷೆವಿಸ್ ಸಿಂಗರ್ ಅವರ ಪ್ರಸಿದ್ಧ ಉಕ್ತಿ.
“What do they know-all these scholars, all these philosophers, all the leaders of the world - about such as you? They have convinced themselves that man, the worst transgressor of all the species, is the crown of creation. All other creatures were created merely to provide him with food, pelts, to be tormented, exterminated. In relation to them, all people are Nazis; for the animals it is an eternal Treblinka.” ― Isaac Bashevis Singer
"ಈ ಪಂಡಿತರು, ದಾರ್ಶನಿಕರು, ಜಗತ್ತಿನ ಮುಂದಾಳುಗಳಿಗೇನು ಗೊತ್ತು, ನಿನ್ನಂತಹವರ ವಿಷಯ? ಎಲ್ಲಾ ಜೀವಜಾತಿಗಳಲ್ಲೂ ಅತ್ಯಂತ ಪಾಪಿಷ್ಟ ಜಂತುವಾದ ಮಾನವನು ಸೃಷ್ಟಿಯ ಮುಕುಟಮಣಿಯೆಂದು ಅವರು ತಿಳಿದುಕೊಂಡಿದ್ದಾರೆ. ಬೇರೆಲ್ಲಾ ಪ್ರಾಣಿಜಾತಿಗಳೂ ಅವನ ಆಹಾರವಾಗಲು, ಅವನಿಗೆ ತಮ್ಮ ಚರ್ಮ ನೀಡಲು ಸೃಷ್ಟಿಯಾಗಿವೆ, ಅವನಿಂದ ಹಿಂಸೆಗೆ ಒಳಗಾಗಿ ನಾಶವಾಗಳೆಂದೇ ಸೃಷ್ಟಿಯಾಗಿವೆ (ಎಂದುಕೊಂಡಿದ್ದಾರೆ). ಪ್ರಾಣಿಗಳಿಗೆ ಹೋಲಿಸಿದರೆ ಎಲ್ಲಾ ಮನುಷ್ಯರೂ ನಾಟ್ಸಿಗಳು; ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ."
FOR ANIMALS
ಪ್ರತ್ಯುತ್ತರಅಳಿಸಿFor animals eternal Treblinka
The memory I’ve been given is rife with martyrdom.
Mother took me by the hand. We had reached the sacrificial perimeter. The
sound of chickens facing the end. Their innocent clucking. The hushed violence of
exposed carcasses. Guts, the stench of screaming guts. Fury and sound collapsed into rottenness. There were stands within the
perimeter calling for truth and commerce. The plump, flayed meats lightly swayed,
hanging from large metal hooks. Soaked feathers littered the ground. A decapitated
chicken embraced the world. Narrow furrows inside the perimeter carried off the blood
to a place I imagined to be far away, as far as a faraway country.
The guttural agony subsided. People were drawing their drapes for the peaceful
midday meal.