ಮಹಾಹಸಿವು


ಮೂಲ ಕವಿತೆ: ಸಾಂಗ್ ಕ್ಷಿಯಾವ್ ಕ್ಷಿಯಾನ್  (ಚೈನಾ)
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 


ಉತ್ತರ ಚೈನಾದ ಮಹಾಮಾರ್ಗಗಳ ಮೇಲೆ  ಓಡಾಡುವ ಟ್ರಕ್ಕುಗಳಲ್ಲಿ  
ದಕ್ಷಿಣದ ಗ್ವಾಂಗ್ ಷೌ ಪ್ರಾಂತಕ್ಕೆ ಸಾಗಿಸಲಾಗುತ್ತವೆ -
ಹುನಾನ್ ಪ್ರಾಂತದಿಂದ ಬಂದ ಕೋಳಿ,
ಜಿಯಾಂಗ್ ಷಿಯಿಂದ ಬಂದ ದನಗಳು, 
ಮತ್ತು ಸಿಚುಆನ್ ಪ್ರಾಂತದಿಂದ ಬಂದ ಹಂದಿಗಳನ್ನು. 

ಅಲ್ಲಿರುವ ಪರ್ಲ್ ನದಿಯ ತಟವು 
ತಳವಿರದ ಪೀಪಾಯಿಯಂತೆ 
ಅಲ್ಲಿಂದ ಇಲ್ಲಿಂದ ಬಂದ ಪ್ರಾಣಿಗಳನ್ನು 
ನುಂಗಿಬಿಡುತ್ತದೆ ಒಂದೇ ತುತ್ತಿಗೆ. 
 
ನುಂಗುತ್ತಲೇ ಇರುತ್ತದೆ ನಿರಂತರವಾಗಿ 
ಬಾಯಿ ಮುಚ್ಚದೇ. 
ಮಹಾಮಾರ್ಗಗಳನ್ನೇ ಮಾಡಿಕೊಂಡು ಹೊಟ್ಟೆ. 
ಗೊತ್ತಿರುವುದೇ ಒಂದು ಅದಕ್ಕೆ,
ನುಂಗು, ನುಂಗು, ನುಂಗು. 
ದಟ್ಟ ಹೊಗೆಯ ಹೊದ್ದಿಕೆಯ ಹಿಂದೆ
ನಾವು ಜೀರ್ಣಿಸಿಕೊಳ್ಳುತ್ತೇವೆ
ಜೀರ್ಣಿಸಿಕೊಳ್ಳುತ್ತಲೇ ಇರುತ್ತೇವೆ,
ಕೆಟ್ಟಹಸಿವು ನಮಗೂ. 

ಪ್ರಾಣಿಗಳನ್ನೆಲ್ಲಾ ತಿಂದುಹಾಕಿದ ನಂತರ ಮುಂದೇನು?
ಆಗ ನಾವು ಕೊಲ್ಲೋಣ ಕಾರುಗಳನ್ನು,
ಏಡಿ ಮೀನುಗಳಂತೆ ಅವುಗಳನ್ನು ಗಟ್ಟಿಯಾಗಿ ಹಿಡಿದು,
ಅದರ ಬೆಂಬದಿಯ ಚಿಪ್ಪನ್ನು ಕಿತ್ತು 
ಹೀರೋಣ ಒಳಗಿರುವ ಘೃತವನ್ನು.  

ಕಾಮೆಂಟ್‌ಗಳು

  1. ENORMOUS APPETITE
    on highways in the north of China
    trucks loaded with chickens from Hunan
    beef cattle from Jiangxi and pigs from Sichuan
    make their way south to Guangzhou

    there, the Pearl River delta
    is like a bottomless pit
    swallowing in one gulp
    the animals of several provinces

    swallowing in a steady stream
    never shutting its mouth
    the highways
    are its guts

    its only thought is to devour, devour
    in a blanket of thick smoke
    and we digest, digest
    with our enormous appetites

    but what will we do when we have eaten all the animals?
    we’ll kill the cars, tackling them like crabs:
    ripping off the carapace
    and sucking out the grease

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)