ಸಾಸರ್ ನಾಮ
ಅನೇಕ ಸ್ವಾರಸ್ಯಕರ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇವುಗಳಿಗೆ ಕವಿತಾರೂಪದ ಪ್ರತಿಕ್ರಿಯೆ.
ಸಾಸರ್ ನಾಮ
(ಹಾರಾಡುವ ತಟ್ಟೆಗಳು ಇರಬಹುದೆಂದು ನಾಸಾ ಒಪ್ಪಿದೆ - ಸುದ್ದಿ.)
ನಾಸಾ ಹೇಳುತ್ತಿದೆ ಈಗ, ತಡವಾಗಿ,
“ಇರಬಹುದು ಹಾರಾಡುವ ಸಾಸರು”
ಸಾಸರ ನಾಮದ ವೆಂಕಟರಮಣನ್ನ
ಎಂದೋ ಕೊಂಡಾಡಿದರು ದಾಸರು
"ಸಹಸ್ರ" ತದ್ಭವವಾಗಿ ಸಾಸರವಾಗದೆ,
ಸಾಸಿರ ಹೇಗಾಯಿತು?
ಸಾಸಿರ ಇದ್ದಿದ್ದರೆ ಪರವಾಗಿರಲಿಲ್ಲ,
ಸಾವಿರ ಹೇಗಾಯಿತು?
“ಇರಬಹುದು ಹಾರಾಡುವ ಸಾಸರು”
ಸಾಸರ ನಾಮದ ವೆಂಕಟರಮಣನ್ನ
ಎಂದೋ ಕೊಂಡಾಡಿದರು ದಾಸರು
ಸಾವಿರದ ಪ್ರಶ್ನೆ
"ಸಹಸ್ರ" ತದ್ಭವವಾಗಿ ಸಾಸರವಾಗದೆ,
ಸಾಸಿರ ಹೇಗಾಯಿತು?
ಸಾಸಿರ ಇದ್ದಿದ್ದರೆ ಪರವಾಗಿರಲಿಲ್ಲ,
ಸಾವಿರ ಹೇಗಾಯಿತು?
ಪರವಾಹ್-1
(ಹಿಂದಿ ಮಾತಾಡುವವರು ಕನ್ನಡಿಗರನ್ನು ಅವಮಾನಿಸಿದರು ಇತ್ಯಾದಿ ಜಗಳ - ಸುದ್ದಿ.)
ಹಿಂದಿ ಬರಲ್ಲ ಕನ್ನಡ ಪರವಾಗಿಲ್ವಾ ಅಂತ ಇವನು ಪರವಾಹ್ ನಹೀ ಬೋಲೋ ಅಂತ ಅವನು
ಕಾರಣವೇನು ಬೆಂದಕಾಳೂರಲ್ಲಿ ಪರರಿಗೇ ವಾಹ್ ಎಂಬುದಕ್ಕೆ?
ಇರಬಹುದೇ ಬೆಂದಕಾಳು ತಿಂದೂ ತಿಂದೂ ವಾಹ್ ಕರಿಕೆ
ನ-ಕಲಿ
(ತನಿಖೆಗೆ ಹೆದರಿ ಬಿಹಾರದಲ್ಲಿ ನಕಲಿ ಡಿಗ್ರಿ ಪಡೆದ ಶಿಕ್ಷಕರ ರಾಜೀನಾಮೆ - ಸುದ್ದಿ)
(ತನಿಖೆಗೆ ಹೆದರಿ ಬಿಹಾರದಲ್ಲಿ ನಕಲಿ ಡಿಗ್ರಿ ಪಡೆದ ಶಿಕ್ಷಕರ ರಾಜೀನಾಮೆ - ಸುದ್ದಿ)
ಇದು ಕಲಿಯುಗವೋ ನಕಲಿಯುಗವೋ
ನ-ಕಲಿ ಯುಗವೋ ರೀ?
ಮಕ್ಕಳಿಗೆ ಏನು ಕಲಿಸುತ್ತಾರೆ ಪಾಠ?
ಇವರದ್ದೇ ನ-ಕಲಿ ಡಿಗ್ರಿ.
ನ-ಕಲಿ ಯುಗವೋ ರೀ?
ಮಕ್ಕಳಿಗೆ ಏನು ಕಲಿಸುತ್ತಾರೆ ಪಾಠ?
ಇವರದ್ದೇ ನ-ಕಲಿ ಡಿಗ್ರಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ