ಕೋಳಿಗೆ ಕಾಳು



ಸಿ ಪಿ ರವಿಕುಮಾರ್ 
ನನ್ನ ಮುದ್ದಿನ ಕೋಳಿಗಳೇ ಬನ್ನಿ
ನಿಮಗೊಂದು ಕಟ್ಟಿದ್ದೇನೆ ಚಂದದ ಗೂಡು
ಪ್ರತಿನಿತ್ಯ ನಿಮಗೆ ತಂದು ಹಾಕುತ್ತೇನೆ
ಎಷ್ಟು ಬೇಕಾದರೂ ತಿನ್ನಿ ಬಿಟ್ಟಿಕಾಳು
ಬದಲಿಗೆ ನಾನು ಕೇಳುವುದಿಷ್ಟೇ
ಓಡಿ ಬರಬೇಕು ನಾನು ಕರೆದಾಗ
ಕೊಕ್ ಕೊಕ್ ಎಂದು ಮಾರ್ನುಡಿಯಬೇಕು
ನಗಬೇಕು ನಾನು ನಕ್ಕಾಗ
ಅಳಬೇಕು ನಾನು ಮುಖ ಹಿಂಡಿದಾಗ
ಮೊಟ್ಟೆ ಇಡಬೇಕು ನಾನು ಬೇಡಿದಾಗ
ಕಾವು ಕೊಡಬೇಕು ಮರಿ ಮಾಡಬೇಕು
ನಿಮ್ಮ ಮರಿಮೊಮ್ಮರಿಗಳಿಗೂ
ಕೊಡುತ್ತೇನೆ ಕಾಳು
ಬೇಕಾಗಿಲ್ಲ ಕಿಂಚಿತ್ತೂ ಚಿಂತೆ
ದೊಡ್ಡ ಸ್ಕ್ರೀನ್ ಟಿ.ವಿ. ಹಾಕಿಸಿದ್ದೇನೆ
ನಿಮ್ಮ ಮನರಂಜನೆಗಾಗಿ 24 ಗಂಟೆ
ನೋಡುತ್ತಾ ಕಳೆಯಿರಿ ಕಾಲ
ಮರಿ ಮಾಡುವಾಗ, ಕಾವು ಕೂತಾಗ
ಒಮ್ಮೆಮ್ಮೆ ತರುವೆನು ಚೂರಿ
ನನಗಿಷ್ಟ ಚಿಕನ್ ಮಂಚೂರಿ
ಹಬ್ಬ ಮಾಡಿದರೆ ಒಮ್ಮೊಮ್ಮೆ ಏನಾಯಿತೀಗ?


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)