ದ ಕ್ಯಾಟ್ ಅಂಡ್ ದ ಕ್ಯಾನರೀಸ್ (ಬೆಕ್ಕಿಗೆ ಕನ್ನಡ ಪಾಠ)


(1)
ಅಲ್ಲ, ನೂಡಲ್ ಕುಣಿಗಲ್ ಕೆರೆ ಅಲ್ಲ,
ಮೂಡಲ್! ಮೂಡಲ್ ಕುಣಿಗಲ್ ಕೆರೆ!
ಹೌದು ಹೌದು, ಇನ್ನೂ ಜೋರಾಗಿರ್ತಿತ್ತು i-ಭೋಗ
ನೂಡಲ್ ಕೆರೆ ಇದ್ದಿದ್ದರೆ

(2)
ಹುಗ್ಗಿಯ ಹೊಳೆ ಬದಲು
ನೂಡಲ್ ಕೆರೆ
ನೋಡಲ್ ಅಲ್ಲ ಬರೇ
ತಿನ್ನಲ್ ಕೂಡಾ, ಹುರೇ!

(3)
ಕನ್ನಡಂ ಕತ್ತರಿಯಲ್ತೆ ಅಲ್ಲವೋ!
ಕನ್ನಡಂ ಕತ್ತುರಿಯಲ್ತೆ
ಕತ್ತುರಿ ಈಕ್ವಲ್ಸ್ ಕಸ್ತೂರಿ
ಪಾಠ ಹೇಳ್ತಾ ಯಾಕೋ ಸುಸ್ತೂರೀ
(4)
ಇಲ್ಲ ಮರಿ
ನರಕ್ಕೆ  ಸ್ತ್ರೀಲಿಂಗ ಪದವಲ್ಲ ನರಿ
ನರದ ಸ್ತ್ರೀಲಿಂಗ ನಾರಿ
ಹೌದು ಸ್ವಲ್ಪ ಇಲ್ಲಾಜಿಕಲ್, ಸಾರಿ!

(5)
ಇಲ್ಲ ನನ್ನ ಜಾಣ
ಗೃಹಿಣಿ ಪದಕ್ಕೆ ಪುಲ್ಲಿಂಗವಲ್ಲ ಗ್ರಹಣ
ಗೃ ಈಸ್ ಡಿಫರೆಂಟ್ ಫ್ರಂ  ಗ್ರ
ತಿಳ್ಕೊಂಡವನೇ ಕುಶಾಗ್ರ 

ಕಾಮೆಂಟ್‌ಗಳು

  1. ನನ್ನ ಮಿತ್ರ ಸೀತಾರಾಂ ಇ-ಮೇಲ್ ಮೂಲಕ ಕಳಿಸಿದ ಪ್ರತಿಕ್ರಿಯೆ -

    ನಲ್ಮೆಯ ರವಿಕುಮಾರ್:
    ನಿಮ್ಮ ಪ್ರೋತ್ಸಾಹಕರ ನುಡಿಗಳಿಗಾಗಿ ಕೃತಜ್ಞನಾಗಿದ್ದೇನೆ. ನಿಮ್ಮ "ಬೆಕ್ಕಿಗೆ ಕನ್ನಡ ಪಾಠ" ಸಖತ್ತಾಗಿದೆ. ನಿಮ್ಮ noodles ಕವನವನ್ನು Nestle ಅವರಿಗೆ ಕಳಿಸಿಕೊಡಿ. ಈಚೆಗೆ noolesನಿಂದಾಗಿ ಎಲ್ಲ ಕಡೆಯಿಂದ "ದೂಡಲ್‍" ಪಡುತ್ತಿರುವ ಅವರು "Maggi 2-minute" ತಯಾರಾಗುಷ್ಟರಲ್ಲಿ ಅದನ್ನು ಓದಿ ಸ್ವಲ್ಪ ಧೈರ್ಯ ತಂದುಕೊಳ್ಳಬಹುದು, ಅಥವಾ ಅದರಿಂದಾಗಿ, Koodle-ಸಂಗಮದಲ್ಲಿ noodles ತಯಾರಿಸುವ ಮತ್ತು ಕುಣಿಗಲ್‍ನಲ್ಲಿ ಒಂದು poodles' noodles ತಯಾರಿಸಿ oodles of cash ಬಾಚಿಕೊಳ್ಳುವ, ಯೋಜನೆಗಳಿಗೆ ಅವರಿಗೆ ಪ್ರಚೋದನೆಯೇ ಸಿಗಬಹುದು.
    ನಿಮ್ಮ ಇನ್ನೊಂದು ಕವನದಲ್ಲಿ, "ನರದ ಸ್ತ್ರೀಲಿಂಗ, "ನಾರಿ" ... ಹೌದು, ಸ್ವಲ್ಪ ಇಲ್ಲಾಜಿಕಲ್, ಸಾರಿ" ಎಂದು ಸಾರಿದ್ದೀರಿ. Saree ಎಂಬುದೂ ಈಗ illogical ಎಂದು ಇಲ್ಲಿ ಸ್ವಲ್ಪ ವಿಸ್ತರಿಸಿಕೊಳ್ಳಬಹುದೇ? ನರದ ಸ್ತ್ರೀಲಿಂಗ "ನಾರಿ" ಎಂದಿರುವುದರಿಂದ, "ನರರೋಗಶಾಸ್ತ್ರ"ದ ಸ್ತ್ರೀಲಿಂಗ "ನಾರಿರೋಗಶಾಸ್ತ್ರ" ಎಂದು ಮಾಡಿಕೊಳ್ಳಬಹುದೇ? ನರರೋಗವಿರಲಿ-ನಾರಿರೋಗವಿರಲಿ, ಇಲ್ಲಾಜಿ-ಕಲ್ಲು - Illaji Stone - ಈ ಎಲ್ಲ Illಗಳಿಗೂ ಪರಿಹಾರವಾಗಬಲ್ಲುದೇ? ಅಥವಾ ಇದಕ್ಕೆ "ಇಲ್ಲಾ, ಜೀ" ಎಂಬುದೇ ನಿಮ್ಮ ಉತ್ತರವೇ? ಅದಿರಲಿ, "ನರದ ಸ್ತ್ರೀಲಿಂಗ "ಬೇರೆ ಯಾರು ಅಲ್ಲ; ನಾ, ರೀ" ಎಂದು ಇಲ್ಲಿ ಯಾವುದೋ ಸ್ತ್ರೀ ಮುಂದೆಬಂದು ಹೇಳಿಕೆಯಿತ್ತರೆ ಆಗೇನು?
    ಇವೆಲ್ಲ "ಗೃಹಣ" ಹಿಡಿದವನ ಮಾತುಗಳು, ತನ್ನ "ಗೃಹಚಾರ" ಬಿಡುಗಡೆಯಾಗುವತನಕ ಅವನು ಹೀಗೆಯೇ ಇಲ್ಲಾಜಿ-ಕಲ್ಲಿನ ರೂಪದಲ್ಲೇ ಉಳಿದಿರುವನೆಂಬುದನ್ನು ದಯೆಯಿಟ್ಟು ತಿಳಿಯತಕ್ಕದ್ದು.
    ||ಸಿರಿಗನ್ನdrum ಎಲ್ಲೆಡೆ ಡಿಮ-ಡಿಮ ಎಂದು dim ಆಗದೇ ಕೇಳ್ಗೆ! ಆದೊಡಂ, ಕೇಳುಗರ ಕಿವಿತಮಟೆ-ದೇಹಗುಮ್ಮಟ ಮಾತ್ರಂ safe ಆಗಿ ಇರ್ಗೆ!||

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)