ಅದ್ಭುತ ವಿಜಯ
ಸ್ಫೂರ್ತಿ: ರಾಬರ್ಟ್ ಸದೇ ಬರೆದ ಬ್ಯಾಟಲ್ ಆಫ್ ಬ್ಲೆನ್ ಹೈಮ್ ಎಂಬ ಇಂಗ್ಲಿಷ್ ಕವಿತೆ ಸಿ.ಪಿ. ರವಿಕುಮಾರ್ ಬೇಸಗೆಯ ಸಂಜೆ ನಂಜಪ್ಪ ಕುಳಿತಿದ್ದ ಮನೆ ಹೊರಗೆ ಕೆಲಸ ಮುಗಿಸಿ ಮುಸ್ಸಂಜೆ ಬಿಸಿಲಲ್ಲಿ ಆಡುವ ಮೊಮ್ಮಕ್ಕಳು ನದಿಯ ಬಳಿ ಹರಡಿರುವ ಮರಳ ರಾಶಿ ರಾಜಣ್ಣನಿಗೆ ಸಿಕ್ಕಿ ಏನೋ ಗುಂಡಗಿನ ವಸ್ತು ತಳ್ಳುತ್ತ ಬರುವುದನು ನೋಡಿ ಏನಜ್ಜ ಎಂದು ಬೆರಳು ಮಾಡಿದಳು ಲಕ್ಷ್ಮಿ ಅಣ್ಣ ಬರುತಿದ್ದ ಕಡೆಗೆ ಓಡಿ ಬೆಳ್ಳಗಿನ ನುಣುಪಾದ ಗೋಲವನು ಮೆಲ್ಲಗೆ ಎತ್ತಿಕೊಂಡನು ಅಜ್ಜ ಕೈಯಲ್ಲಿ ನತದೃಷ್ಟ ಯಾರದೋ ತಲೆಬುರುಡೆ! ಎಂದನು ತಲೆ ಕೊಡವಿ ನಿಟ್ಟುಸಿರು ಚೆಲ್ಲಿ ತೋಟದಲಿ ಗುದ್ದಲಿಗೆ, ಹೊಲದಲ್ಲಿ ನೇಗಿಲಿಗೆ ಆಗಾಗ ಸಿಗುವಂಥ ವಸ್ತು ದೊಡ್ಡಕಾಳಗದಲ್ಲಿ ಸತ್ತವರ ಕುರುಹುಗಳು ಎಷ್ಟು ಜನ ಸತ್ತರೋ, ಯಾರಿಗೆ ಗೊತ್ತು? ಕೆರಳಿತು ಮಕ್ಕಳ ಕುತೊಹಲ, ಕಥೆಯನ್ನು ಹೇಳಲೇಬೇಕೆಂದು ಗೋಗರೆದರು ಯಾರಲ್ಲಿ ನಡೆಯಿತು ಯುದ್ಧ? ಯಾವಾಗ? ಯಾಕೆ ನಡೆಯಿತು? ನಮಗೆ ಹೇಳಲೇಬೇಕು ತಾಳಿಕೋಟೆಯ ಯುದ್ಧ ಕೇಳಿಲ್ಲದವರಾರು ನೂರಾರು ವರ್ಷಗಳು ಕಳೆದಿದ್ದರೂ ವಿಜಯನಗರ ಅರಸರನು ಸೋಲಿಸಿದರಂತೆ ದಕ...