ಇಲ್ಲವೋ ಎಲ್ಲಿ ಮನದೊಳಗೆ ಭೀತಿ



ಮೂಲ ಕವಿತೆ: ರಬೀಂದ್ರನಾಥ ಟ್ಯಾಗೋರ್ 

ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ 

ಇಲ್ಲವೋ ಎಲ್ಲಿ  ಮನದೊಳಗೆ ಭೀತಿ, ಎಲ್ಲಿ ನಡೆಯಬಲ್ಲೆವೋ ತಲೆಯೆತ್ತಿ, 
ಜ್ಞಾನವಾಹಿನಿ ಎಲ್ಲಿ ಹರಿವುದೋ ಮುಕ್ತ -
ಮನೆಮಠಗಳ ಕಿರುಗೋಡೆಗಳಿಂದ ಎಲ್ಲಿ 
ವಿಶ್ವ  ಉಳಿದುಕೊಂಡಿದೆಯೋ ಇನ್ನೂ  ಆಗದೆ  ವಿಛಿದ್ರ   - 
ಎಲ್ಲಿ ಆಡುವ ಮಾತು ಬರುವುದೋ ಸತ್ಯದ ಆಳದಿಂದ,
ಎಲ್ಲಿ  ಪೂರ್ಣತೆಗಾಗಿ ಕೈಚಾಚಿ ಶ್ರಮಿಸುವುದೋ ಅವಿರತ ಪ್ರಯತ್ನ,
ಎಲ್ಲಿ ಅಭ್ಯಾಸಬಲವೆಂಬ ಮರಳುಗಾಡಿನಲ್ಲಿ 
ಲುಪ್ತವಾಗಿಲ್ಲವೋ  ವಿವೇಕದ ತಿಳಿಗೊಳ,
ಕಲ್ಪನಾ-ಕೃತಿಗಳ ಬೆಳೆಯುತ್ತಲೇ ಇರುವ ವೈಶಾಲ್ಯದತ್ತ 
ಎಲ್ಲಿ ಮುನ್ನಡೆವುದೋ ನಿನ್ನ ಸಾರಥ್ಯದಲ್ಲಿ  ಮನೋರಥ,
ಅಂಥ  ಸ್ವತಂತ್ರ ಸ್ವರ್ಗದಲ್ಲಿ  ಹೇ ಪ್ರಭೂ ಕಣ್ತೆರೆಯಲಿ ನನ್ನ ದೇಶ 

Kannada translation by C.P. Ravikumar of "Where the mind is without fear" by Rabindranath Tagore 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)