ನಿನ್ನ ಚರಣದ ಧೂಳಿ ನನ್ನ ಮಸ್ತಕದ ಮೇಲಿರಲಿ



ಮೂಲ: ರಬೀಂದ್ರನಾಥ ಟ್ಯಾಗೋರ್ 
ಕನ್ನಡಕ್ಕೆ : ಸಿ.ಪಿ. ರವಿಕುಮಾರ್ 

ನಿನ್ನ ಚರಣದ ಧೂಳಿ ನನ್ನ ಮಸ್ತಕದ ಮೇಲಿರಲಿ
ಕೊಚ್ಚಿ ಹೋಗಲಿ ನನ್ನ ಅಹಂಕಾರ ಕಣ್ಣೀರಿನಲ್ಲಿ

ಇಲ್ಲಸಲ್ಲದ ಗೌರವವ ರಕ್ಷಿಸುವ ಭರದಲ್ಲಿ
ನನ್ನ ಅಪಮಾನಕ್ಕೆ ನಾನೇ ಕಾರಣನಾದೆ
ನನ್ನ ವಿಶ್ವದ ಸುತ್ತ ನಾನೇ ಹಾಕುತ್ತ ಪ್ರದಕ್ಷಿಣೆ
ಪ್ರತಿಕ್ಷಣವೂ  ವ್ಯಾಕುಲತಾ-ಚಾರಣನಾದೆ

ಬರಿಯ ಕರ್ತನು ನಾನು, ನನ್ನ ಕೆಲಸಗಳಲ್ಲಿ
ನನ್ನ ಹೆಸರಿನ ಮೇಲ್ಮೆ ಕಾಣದಿರಲಿ
ನನ್ನ ಜೀವನದಲ್ಲಿ ನನ್ನ ಕೆಲಸಗಳಲ್ಲಿ
ಓ ಪೂರ್ಣ! ನಿನ್ನ ಇಚ್ಛಾಪುಷ್ಪ ಹಣ್ಣಾಗಲಿ

ಯಾಚಿಸುವೆನು ದೀನನಾಗಿ ನಿನ್ನ ಚರಮ ಶಾಂತಿಯನ್ನು
ಯಾಚಿಸುವೆನು ಪ್ರಾಣದಲ್ಲಿ ನಿನ್ನ ಪರಮ ಕಾಂತಿಯನ್ನು
ಜಲಬಿಂದು ನಾನಾಗಿ ನಿನ್ನ ಹೃದಯಕಮಲದಲ್ಲಿ
ಕೊಚ್ಚಿ ಹೋಗಲಿ ನನ್ನ ಅಹಂಕಾರ ಕಣ್ಣೀರಿನಲ್ಲಿ

[ಮೂಲ: ಗೀತಾಂಜಲಿ]

Kannada Translation by C.P. Ravikumar of a poem from Geetanjali by Rabindranath Tagore

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)