ಮೇಲೇಳುವೆ ನಾನು
2014ರಲ್ಲಿ ನಿಧನರಾದ ಮಾಯಾ ಆಂಜೆಲೋ ಖ್ಯಾತ ಕಪ್ಪು ಅಮೇರಿಕನ್ ಕವಯಿತ್ರಿ. ಅವರ "ಸ್ಟಿಲ್ ಐ ರೈಸ್" ಎಂಬ ಪ್ರಸಿದ್ಧ ಕವಿತೆಯ ಅನುವಾದವನ್ನು ಕೆಳಗೆ ಕೊಟ್ಟಿದ್ದೇನೆ. ಮೂಲ ಅಮೇರಿಕನ್ ಕವಿತೆ - ಮಾಯಾ ಆಂಜೆಲೋ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಚರಿತ್ರೆಯ ಪುಟಗಳಲ್ಲಿ ನನ್ನನ್ನು ಮುಗಿಸಿಬಿಡಬಹುದು ಕಟುವಾದ ನಿನ್ನ ತಿರುಚಿದ ಸುಳ್ಳುಗಳು ಕಸದ ಹಾಗೆ ನನ್ನನ್ನು ಮೂಲೆಗುಂಪು ಮಾಡಿದರೂ ಕಸದ ಹಾಗೆ ಮೇಲೇಳುವೆನು ನಾನು ಕೋಪ ಬರುವುದೇ ನಿನಗೆ ನನ್ನ ಧಾರ್ಷ್ಟ್ಯವನ್ನು ಕಂಡು? ಯಾಕೆ ಹಾಗಿರುವೆ ಆಕಾಶ ಬಿದ್ದಂತೆ ಮೇಲೆ? ಸಹಿಸಲಾಗುತ್ತಿಲ್ಲವೇ ನಾನು ಆಡುವುದನ್ನು ಕಂಡು ನನ್ನ ಹಿತ್ತಲಲ್ಲೇ ಪೆಟ್ರೋಲ್ ಬಾವಿ ಇರುವಂತೆ? ಸೂರ್ಯನ ಹಾಗೆ ನಾನು ಚಂದ್ರಬಿಂಬದ ಹಾಗೆ ಬಿದ್ದು ಮೇಲೇಳುವ ಜಡತ ಭರತಗಳ ಹಾಗೆ ಅದುಮಿದರೂ ಎದ್ದು ಬರುವ ಭರವಸೆಯ ಹಾಗೆ ಹಾಗೂ ಹೀಗೂ ಹೇಗೋ ಮೇಲೇಳುವೆ ಕೊನೆಗೆ ಮುರಿಯಬೇಕೆಂದು ಬಯಸಿದೆಯಾ ಬೊಂಬೆಯ ಹಾಗೆ ಕಣ್ಣು ಕೆಳಗೆ ಹಾಕಿ, ಮುಖ ತಗ್ಗಿಸಿ ನಿಲ್ಲಬೇಕೆ ನಾನು? ಜಾರುವ ಕಂಬನಿಯಂತೆ ಕೆಳಗೆ ಕುಸಿದು ನನ್ನ ಭುಜಗಳು ಆರ್ತನಾದವು ಆತ್ಮದಿಂದ ಹೊಮ್ಮಬೇಕೇನು? ತಾಳು, ಅಷ್ಟೊಂದು ಕೋಪ ಒಳ್ಳೆಯದಲ್ಲ! ನನ್ನ ಗರ್ವವ ಕಂಡು ನಿನಗೆಮುನಿಸಾಯಿತೇ? ಯಾಕೆ? ನಾನು ಹೀಗೆ ಆಡುವುದನ್ನು ಕಂಡ...