ನೀನಿಲ್ಲದೆ

ಮೂಲ ಹಿಂದಿ ಪದ್ಯ - ಗುಲ್ಜಾರ್ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 



ಗಾಜಿನ ಕಿಟಕಿಯ ಹಿಂದೆ
ಮರಗಳ ಬಲಿಷ್ಠ ರೆಂಬೆಗಳ ನಡುವೆ
ಬೀಳುತ್ತಿದೆ ಶ್ರಾವಣದ ಮಳೆ.  
ಶಬ್ದವಿದೆ,
ಜನರಿದ್ದಾರಲ್ಲ,
ಮಾತಾಡುತ್ತಿದ್ದಾರೆ. 
ಇವರ ಮಾತುಗಳಿಗೂ ಆಚೆ
ನನ್ನೊಳಗೆಲ್ಲೋ
ಬೇರೊಂದು ಸಮತಲದಲ್ಲಿ
ನಿನ್ನ ಗೈರುಹಾಜರಿ
ಬೀಳುತ್ತಿದೆ
ಮೆಲ್ಲಗೆ, ಬಹುಮೆಲ್ಲಗೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)