ಮುಖವಾಡ



ಮೂಲ ಹಿಂದಿ ಪದ್ಯ - ಗುಲ್ಜಾರ್ 
ಕನ್ನಡಕ್ಕೆ - ಸಿ ಪಿ ರವಿಕುಮಾರ್


ನಾಚಿಕೆಗೆಟ್ಟ ಬೆತ್ತಲೆ ಹಗಲಿನಲ್ಲಿ
ಇಡೀ ದಿವಸ
ನನ್ನ ಜೀತದಾಳುಗಳಿಗೆ
ಹುಣಸೆ ಬರಲಿನಿಂದ
ಏಟು ಬಿಗಿಯುತ್ತೇನೆ.
ಕೊಳ್ಳುತ್ತೇನೆ, ಮಾರುತ್ತೇನೆ
ನನ್ನ ಗುಲಾಮರನ್ನು.  
ನನ್ನ ಬೇಕುಗಳಿಗಾಗಿ
ನನ್ನನ್ನೇ ಹರಾಜು ಹಾಕುತ್ತೇನೆ
ನಾಚಿಕೆಗೆಟ್ಟ ಬೆತ್ತಲೆ ಹಗಲಿನಲ್ಲಿ
ಒಪ್ಪಂದ ಮಾಡಿಕೊಳ್ಳುತ್ತೇನೆ,
ರಾಜಿ ಮಾಡಿಕೊಳ್ಳುತ್ತೇನೆ. 
ಆದರೆ
ರಾತ್ರಿಯ ಖಾಲೀತನದಲ್ಲಿ
ಮುಖ ಮುಚ್ಚಿಕೊಂಡು ಬಿಕ್ಕುತ್ತೇನೆ.
ಒಂದು ಮುಖ
ಎಷ್ಟೊಂದು ಮುಖಗಳಿಗೆ
ಹಾಕುತ್ತದೆ ತೆರೆ. 

---
ಕವಿತೆಯ ನವಿರು:

"ಬೆತ್ತಲೆ ಹಗಲು" ಎಂದು ಬರೆಯುವ ಸ್ವಾರಸ್ಯ ಏನು?
ಕವಿ ಇಲ್ಲಿ ಪ್ರಸ್ತಾಪ ಮಾಡುವ ಜೀತದಾಳುಗಳು ಯಾರು?
ಯಾರ ಜೊತೆ ರಾಜಿ ಮಾಡಿಕೊಳ್ಳುಬೇಕಾಗಿದೆ ಎಂದು ಕವಿ ಹೇಳುತ್ತಾನೆ?


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)