ನಮ್ಮ ಆಸ್ತಿಯ ಬೆಲೆ
ಸಿ ಪಿ ರವಿಕುಮಾರ್ ಜೂ ನ್ 6 "ಕನ್ನಡದ ಆಸ್ತಿ" ಎಂದೇ ಪ್ರಸಿದ್ಧರಾದ ದಿವಂಗತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ. ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದು "ಚಿಕವೀರ ರಾಜೇಂದ್ರ" ಕಾದಂಬರಿಗಾದರೂ ಅವರು ತಮ್ಮ ಸಣ್ಣ ಕತೆಗಳಿಗಾಗಿ ಪ್ರಸಿದ್ಧರು. ನಾನು ಹತ್ತನೇ ತರಗತಿ ಓದುತ್ತಿದ್ದಾಗ ನಮಗೆ ಅವರ ಕತೆ "ನಿಜಗಲ್ಲಿನ ರಾಣಿ" ಪಾಠವಾಗಿತ್ತು. ಇದೊಂದು ಐತಿಹಾಸಿಕ ಕತೆ. ಕತೆಯಲ್ಲಿ ಬರುವ ರಾಮರಸ ನಾಯಕ, ಲಕುಮವ್ವೆ, ಗಿರಿಜವ್ವೆ, ಕಸ್ತೂರಿ - ಈ ಪಾತ್ರಗಳು ಎಂದಿಗೂ ನೆನಪಿನಲ್ಲಿ ಉಳಿಯುವಂಥವು. ಈ ಕತೆಯನ್ನು ನಾನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದು ನನ್ನ ಬ್ಲಾಗ್ ನಲ್ಲಿ ಲಭ್ಯವಾಗಿದೆ ( ಇಲ್ಲಿ ಓದಿ ). ಮಾಸ್ತಿ ಅವರನ್ನು ಭೇಟಿ ಮಾಡಿದ ಸುಸಂದರ್ಭ ನನ್ನ ಜೀವನದಲ್ಲೂ ಬಂದಿತ್ತು! ನಾನು ನವಕರ್ನಾಟಕ ಪಬ್ಲಿಕೇಷನ್ಸ್ ಅವರು ಹೊರತಂದ ವಿಶ್ವಕಥಾಕೋಶ ಎಂಬ ದೊಡ್ಡ ಪ್ರಾಜೆಕ್ಟ್ ನಲ್ಲಿ "ಕಾಡಿನಲ್ಲಿ ಬೆಳದಿಂಗಳು" ಎಂಬ ವಿಯೆಟ್ನಾಮ್ ಕಥೆಗಳ ಸಂಕಲನವನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಈ ಪ್ರಾಜೆಕ್ಟ್ ನನಗೆ ಕೊಟ್ಟವರು ದಿವಂಗತ ನಿರಂಜನ. ಆಗ ನಾನು ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತಿದ ಹೊಸದು. "ಕುರಿ" ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ವಿಷಯ ನಿರಂಜನ ಅವರಿಗೆ ತಿಳಿದಿತ್ತು. ಹೀಗಾಗಿ ಅವರಿಗೆ ನಾನು ಈ ಕೆಲಸ ಮಾಡಬಲ್ಲೆ ಎಂಬ ವಿಶ್ವಾಸ ಬಂದಿ