ಪೋಸ್ಟ್‌ಗಳು

ಜುಲೈ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅತಿ ಅಚಾರ

ಇಮೇಜ್
ಸಿ ಪಿ ರವಿಕುಮಾರ್  ಕೂಗಿ ಹೇಳುತ್ತಿದೆ ಪತ್ರಿಕೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅತ್ಯಾಚಾರ, ಬಂಧನ, ಬಂದ್ ಆಚರಣೆ ಇವನು ಓದುತ್ತಾನೆ ಹೆಣ್ಣಿನ ಶೋಷಣೆ ವಿರುದ್ಧ ಸಚಿವಾದಿಗಳ ಘೋಷಣೆ ಇವನು ಯೋಚಿಸುತ್ತಾನೆ ಯಾವತ್ತು ಬರುವುದೋ ಬದಲಾವಣೆ ಪ್ರಶ್ನೆಗೆ  ಉತ್ತರ ಆಗಲೇ ಪ್ರಕಟವಾಗಿದೆ ಬದಲಾಗಿದೆ ತನಿಖೆ ಮಾಡುವ ಪೋಲೀಸ್ ಪಡೆ ತೆರೆದು ಓದುತ್ತಾನೆ ಇಂದಿನ ಕಲರ್ ಸಪ್ಲಿಮೆಂಟ್ ಅಲ್ಲಿದೆ ಇಡೀ ಫ್ಯಾಮಿಲಿಗೆ ಇನ್ಫೋಟೇನ್ ಮೆಂಟ್: ದೊಡ್ಡ ಡೆವಲೆಪ್ ಮೆಂಟ್! ದೊಡ್ಡ ಡೆವಲೆಪ್ ಮೆಂಟ್! ಜಪಾನೀ ಎಣ್ಣೆ ಬಳಸಿದರೆ ಫಲಿತಾಂಶ ಖಚಿತ ಒಂದು ಬಾಟಲ್ ಜೊತೆಗೆ ಇನ್ನೊಂದು ಉಚಿತ ಕೂಗಿ ಹೇಳುತ್ತಿದೆ ಪತ್ರಿಕೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅತ್ಯಾಚಾರ, ಬಂಧನ, ಬಂದ್ ಆಚರಣೆ ಮೈಮುಚ್ಚಲೂ ಬಟ್ಟೆಯಿಲ್ಲದ ಸಿನಿಮಾ ತಾರೆಯ ಬವಣೆ ಮುಂಬರುವ ಚಿತ್ರದ ಸ್ವಾರಸ್ಯದ ಒಗ್ಗರಣೆ ಪ್ರಕಟವಾಗಿದೆ ಮತ್ತೆ ಅದೂ ಇದೂ ಸಪ್ಪೆ ವಿಚಾರ ನಡುವೆ ಕಾರದ ಜಾಹೀರಾತು  "ಮಾವಿನಕಾಯಿ ಅಚಾರ" ಕೊನೆಗೆ ಪ್ರಕಟವಾಗಿದೆ ಮೂಲೆಯಲ್ಲಿ ಸುದ್ದಿ ಅಷ್ಟು ಸುಲಭವಲ್ಲವಂತೆ ಗಂಗಾ ನದಿಯ ಶುದ್ಧಿ

ಟಾರ್ಚ್

ಇಮೇಜ್
ಮೂಲ ಹಿಂದಿ ಕವಿತೆ - ಮಂಗಲೇಶ್ ಡಬರಾಲ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಇಂದು ಬಹಳ ದಿನಗಳ ನಂತರ ನೆನಪಾಗುತ್ತಿದೆ  ಅಪ್ಪ ಮನೆಗೊಂದು ಟಾರ್ಚ್ ಕೊಂಡು ತಂದ ಘಟನೆ ಎಷ್ಟು ಸುಂದರವಾಗಿತ್ತು, ಕಾರ್ ಹೆಡ್ ಲೈಟ್ ನಂತೆ ಅದರ ಚಹರೆ  ಇಡೀ ಓರಗೆಯಲ್ಲಿ ಇಂಥದ್ದೊಂದೂ  ಇರಲಿಲ್ಲ ಹಿಂದೆ ರಾತ್ರಿಯ ಕತ್ತಲನ್ನು ಇಬ್ಭಾಗ ಮಾಡಿ  ಸೀಳುವ ಬೆಳಕಿನ ಕೋಲಿನದೇ ಮೋಡಿ  ಹೀಗಿರುತ್ತ ಪಕ್ಕದ ಮನೆ ಅಜ್ಜಿ ಬಂತು ಒಂದುದಿನ  ಒಂದಷ್ಟು ಬೆಂಕಿ ಕೇಳಿ ಪಡೆಯಲೆಂದು ಟಾರ್ಚ್ ನಿಂದ! ನಗು ಬಂತು ಅಪ್ಪನಿಗೆ ಅವಳ ಪ್ರಶ್ನೆ ಕೇಳಿ  "ಅಜ್ಜೀ - ಇದು ಬರೀ ಬೆಳಕು ಕೊಡುವ ದೊಂದಿ!  ಕತ್ತಲಲ್ಲಿ ಹೇಗೆ ಉರಿಯುತ್ತದೆ ನೋಡಿ:  ಬೆಳಗುತ್ತದೆ ದೂರಕ್ಕೂ ಬೆಟ್ಟಗುಡ್ಡಗಳ ಹಾದಿ" "ಒಂದಿಷ್ಟು ಬೆಂಕಿಯೂ ಕೊಟ್ಟಿದ್ದರೆ ಚೆನ್ನಾಗಿತ್ತು ಮಗೂ,  ರಾತ್ರಿಯೆಲ್ಲಾ ನನಗೆ ನಿದ್ದೆಯೇ ಬರದು  ಬೆಳಗ್ಗೆ ಹೇಗೆ ಹೊತ್ತಿಸಲಿ ಇದ್ದಿಲ ಒಲೆ ಎನ್ನುವ ಯೋಚನೆಯಲ್ಲೇ ಕೆಡುತ್ತದೆ ತಲೆ! ಇಷ್ಟಕ್ಕೂ ನಮ್ಮಂಥ ಸಂಸಾರಿಗರಿಗೆ ಯಾಕಪ್ಪಾ ಬೇಕು ರಾತ್ರಿಯಲ್ಲೂ ಬೆಳಗಿನಂತೆ ಬೆಳಗೋದಕ್ಕೆ ಬೆಳಕು? ಅದೆಲ್ಲ ದೊಡ್ಡವರಿಗೆ ಹೇಳಿ ಮಾಡಿಸಿದ್ದು  ಕತ್ತಲಲ್ಲಿ ನೋಡಲು ಅವರಿಗೆ ಏನಾದರೂ ಇದ್ದೀತು." ಅಜ್ಜಿಯ ಮಾತಿಗೆ ಅಪ್ಪ ಉತ್ತರಿಸಲಿಲ್ಲ  ಬಹಳ ಹೊತ್ತು ಆವರಿಸಿತ್ತು ಮೌನ.  ಬಹಳ ವರ್ಷಗಳ ಅನಂತರ ಈ ನಡುವೆ  ನೆನಪಿನಲ್ಲಿ ಸ

ನಗರದಲ್ಲಿ ರಾತ್ರಿ

ಇಮೇಜ್
ಹಿಂದಿ ಕವಿತೆ - ಕೇದಾರನಾಥ್ ಸಿಂಗ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಮಿಂಚುತ್ತಿದೆ ನಭದಲ್ಲಿ, ಇನ್ನೇನು ಸುರಿಯಬಹುದು ಮಳೆ ಮನೆಯಿದ್ದ ಜನರೂ ಓಡುತ್ತಿಹರು ಹೀಗೇಕೆ? ಭಾಷೆ ಗೊತ್ತಿದ್ದವರು ಮೌನ ಧರಿಸಿಹರೇಕೆ? ಏನದು ಕಾಣುತ್ತಿದೆ ಧೂಮ್ರದಲ್ಲಿ ಬರೆದಂಥ ರೇಖೆ? ಹಸಿರು ಹಸಿರಾಗಿ ಅಲ್ಲೇನೋ ಕಾಣುತ್ತಿದೆ ನೋಡು - ಜೀವನ ಸೂತ್ರಗಳೆಲ್ಲ ಗಂಟಾಗಿವೆ ಸಿಕ್ಕಿಹಾಕಿಕೊಂಡು   ಇದು ನಗರವೋ ಅಣ್ಣ! ಇಲ್ಲಿ ವಾಸವಾಗಿವೆ ಆಸೆಗಳು ಬೊಗಳುತ್ತವೆ ನಾಯಿ ಮನುಷ್ಯರು ಹಾಡುತ್ತವೆ ಅಳಿಲು ಇದು ನಗರವೋ ಅಣ್ಣ! ಇದರದ್ದು ಒಂದೇ ಸರಳ ಬೇಡಿಕೆ ಬೇಕು ಸ್ವಾತಂತ್ರ್ಯ ಸಾಧ್ಯವಾದಷ್ಟೂ ಸುಖಾನುಭವಕ್ಕೆ ಹೊತ್ತುರಿಯುವಾಗ ನೀನು ಇದನ್ನು ನೋಡಬೇಕು ಬೇರೆ ಬೇರೆ ಕನ್ನಡಿಗಳಲ್ಲಿ ತೋರುವುದು ಬೇರೆ ಬೇರೆ ಝಲಕ್ಕು ರಾತ್ರಿಯಾಗುತ್ತಿದೆ ಗೆಳೆಯಾ - ಇನ್ನು ಹೋಗಿಬರುತ್ತೇನೆ ನನಗೆ ಸಂಬಳ ಕೊಡುತ್ತಾರೆ ನೋಡು ಹೀಗೆ ಹೋಗಿಬರುವುದಕ್ಕೇ ಕೇಳು ನೀರವದಲ್ಲಿ ಕಣ್ಣಿಗೆ ಹತ್ತಿದಾಗ ಜೊಂಪು ರಾತ್ರಿಯೆಲ್ಲಾ ಕೇಳುವುದು ಶೃಂಖಲೆಗಳ ಸದ್ದು == Translation of a Hindi poem by Kedarnath Singh (c) 2014, C.P. Ravikumar

ಸುಳ್ಳು ಹೇಳುವ ಕನ್ನಡಿ

ಇಮೇಜ್
ಮೂಲ ಅಮೇರಿಕನ್ ಕವಿತೆ - ಮಾರ್ಕ್ ಸ್ಲಾಟರ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಬಣ್ಣದ ರನ್ನದ ಕನ್ನಡಿಯೇ ತೋರಲಾರೆಯಾ ನನ್ನನ್ನು ತೆಳ್ಳಗೆ, ಆರಡಿ ಎತ್ತರ? ಬಣ್ಣದ ರನ್ನದ ಕನ್ನಡಿಯೇ ಅವಮಾನ ಮಾಡಲೇಬೇಕೇ ಬಂದಾಗ ನಿನ್ನ ಹತ್ತಿರ? ಬಣ್ಣದ ರನ್ನದ ಕನ್ನಡಿಯೇ ನನ್ನ ನಡು ದಪ್ಪಗಿಲ್ಲ ನೀನು ತೋರುವಷ್ಟು ಬಣ್ಣದ ರನ್ನದ ಕನ್ನಡಿಯೇ ನನ್ನ ಮುಖವಿಲ್ಲ ಅಷ್ಟೊಂದು ಎಡವಟ್ಟು ಬಣ್ಣದ ರನ್ನದ ಕನ್ನಡಿಯೇ ನನಗಿದೆಯೇ ಜೋತು ಬೀಳುವ ಗದ್ದ? ಬಣ್ಣದ ರನ್ನದ ಕನ್ನಡಿಯೇ ಹಲ್ಲು ಕಿರಿದರೆ ನಾನು ಹೀಗೇಕೆ ಅಸಂಬದ್ಧ? ಬಣ್ಣದ ರನ್ನದ ಕನ್ನಡಿಯೇ ನನ್ನ ಚೆಲುವನ್ನು ಮೀರಿಸುವರಾರಿಹರು? ಸರಿ, ಬದಲಾಯಿಸಿ ಕೇಳುವೆನು ಪ್ರಶ್ನೆಯನ್ನು: ಇರುವರೇ ಹೇಳು ನನಗಿಂತ ವಕ್ರರೂ ! ಬಣ್ಣದ ರನ್ನದ ಕನ್ನಡಿಯೇ ನಿನಗೆ ತೆತ್ತು ತಂದಿದ್ದೇನೆ ಸಾಕಷ್ಟು ಹಣ ಬಣ್ಣದ ರನ್ನದ ಕನ್ನಡಿಯೇ ಎರಡು ಒಳ್ಳೆಯ ಮಾತು ನೀನು ತೆರಬೇಕಾದ ಋಣ ಬಣ್ಣದ ರನ್ನದ ಕನ್ನಡಿಯೇ ನನ್ನ ಚೆಲುವನ್ನು ಮೀರುಸುವರಾರಿಹರು? ಯಾರಿಲ್ಲ ಎನ್ನುವೆಯಾ? ಭೇಷಾಗಿದೆ ಉತ್ತರ! ನಿನ್ನಿಂದ ಕಲಿಯಬೇಕು ಸುಳ್ಳು ಬೊಗಳುವುದು!

ಕನ್ನಡಿ

ಇಮೇಜ್
ಮೂಲ ಅಮೇರಿಕನ್ ಕವಿತೆ -  ಸಿಲ್ವಿಯಾ ಪ್ಲಾತ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್   ನಾ ನು ಬೆಳ್ಳಿ, ನಾನು ಕರಾರುವಾಕ್ಕು, ನನಗಿಲ್ಲ ಯಾವ ಪೂರ್ವಾಗ್ರಹ ನನ್ನ ಕಣ್ಣಿಗೆ ಕಂಡಿದ್ದೆಲ್ಲಾ ಕೂಡಲೇ ಹಾಗೇ ಇಡಿಇಡಿಯಾಗಿ ಸ್ವಾಹಾ ಒಲವಿನ ಒಗ್ಗರಣೆಯಿಲ್ಲ, ದ್ವೇಷದ ಉಪ್ಪುಕಾರವಿಲ್ಲ. ಸತ್ಯ ಹೇಳುತ್ತೇನೆ ಅಷ್ಟೇ, ನಾನು ಕ್ರೂರಿಯೇನಲ್ಲ, ಯಾವುದೋ ಕ್ಷುದ್ರ ದೇವತೆಯ ನಾಲ್ಕು ಮೂಲೆಯ ಕಣ್ಣು. ದಿನದ ಬಹುಭಾಗ ಧ್ಯಾನಿಸುತ್ತೇನೆ ಮುಂದಿರುವ ಗೋಡೆಯನ್ನು. ಅದು ನಸುಗೆಂಪು, ಮೇಲೆ ಕಲೆಗಳು; ನೋಡುತ್ತಾ ಅದೆಷ್ಟು ಕಾಲ ಕಳೆದಿರುವೇನೋ, ಈಗದು ಹೊಕ್ಕಿದೆ ನನ್ನ ಅಂತರಾಳ; ಮೇಲಿಂದಮೇಲೆ ನಮ್ಮ ನಡುವೆ ಹಾಯುತ್ತವೆ ಮುಖಗಳು, ಕತ್ತಲು. ನಾನೊಂದು ಕೊಳವಾಗುತ್ತೇನೆ. ನನ್ನೊಳಗೆ ಇಣುಕುತ್ತಾಳೆ ಒಬ್ಬ ಹೆಣ್ಣು, ತಾನು ನಿಜವಾಗಿ ಯಾರೆಂದು ಹುಡುಕುತ್ತಾಳೆ ನನ್ನೊಳಗೆ ತಿಂಗಳ ಬೆಳಕು ಮೇಣದ ಬತ್ತಿಗಳು ಸುಳ್ಳುಹೇಳುತ್ತವೆ ಅವಳಿಗೆ ನನ್ನತ್ತ ನೋಡಿದರೆ ಸಿಕ್ಕುವುದು ಸಾಚಾ ಪ್ರತಿಫಲ ಅವಳು ಬಿಕ್ಕಳಿಸಿ ಮುಖ ಮುಚ್ಚಿ ಉದುರಿಸುವಳು ದೃಗ್ ಜಲ. ನಾನವಳಿಗೆ ಬೇಕು; ಬರುತ್ತಾಳೆ ನನ್ನತ್ತ ಮತ್ತೆ ಮತ್ತೆ. ಕತ್ತಲು ಹರಿದಾಗ ಅವಳ ಮುಖವೇ ಕಾಣುವುದು ಪ್ರತಿಬೆಳಗ್ಗೆ. ಇವಳು ನನ್ನಲ್ಲಿ ಮುಳುಗಿಸಿದ್ದಾಳೆ ಒಬ್ಬ ಯುವತಿಯನ್ನು; ಒಬ್ಬ ಮುದುಕಿ ಪ್ರತಿನಿತ್ಯ ನನ್ನೊಳಗಿನಿಂದ ಮೇಲೇಳುತ್ತಾಳೆ ಭಯಾನಕ ಮೀನಿನಂತೆ  ಅವಳತ್ತ. == ಫೋಟೋ ಕೃಪೆ -

ಗಂಗೆಯ ಸುದ್ದೀಕರಣ

ಇಮೇಜ್

ಹೆಣ್ಣು ಕೆಲಸ

ಇಮೇಜ್
ಮೂಲ ಅಮೇರಿಕನ್  ಕವಿತೆ - ಮಾಯಾ ಆಂಜೆಲೋ  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ನನಗಿವೆ ನೋಡಿಕೊಳ್ಳಲು ಮಕ್ಕಳು ಮರಿ ಬಟ್ಟೆ ಬರೆ ಹೊಲಿಗೆ ರಿಪೇರಿ  ನೆಲ ಉಜ್ಜಿ ಸಾರಿಸಬೇಕು  ಬುಟ್ಟಿಯಿಂದ ಒಳ್ಳೆಯ ಕಾಯಿ ಆರಿಸಬೇಕು ಒಲೆ ಮೇಲೆ ಬೇಯಿಸಬೇಕು ಮುದ್ದೆ  ಒರೆಸಬೇಕು ಮಗು ಮಾಡಿದ ಒದ್ದೆ  ಅಡುಗೆ ಮಾಡಬೇಕು ಬರಲಿರುವ ಅತಿಥಿಗೆ  ನೀರು ಹಣಿಸಬೇಕು ತೋಟದಲ್ಲಿ ಪಾತಿಗೆ  ಇಸ್ತ್ರಿ ಮಾಡಬೇಕು, ಬಟ್ಟೆಗಳು ಕಾದಿವೆ   ಬಟ್ಟೆ ಹಾಕಬೇಕು ಪುಟ್ಟ ಮಕ್ಕಳಿಗೆ  ನಾಜೂಕಾಗಿ ತರಕಾರಿ ಹೆಚ್ಚಬೇಕು  ಅಂದವಾಗಿಡಬೇಕು ಧೂಳಿಲ್ಲದೆ ಎಲ್ಲೂ  ನಂತರ ಜಡ್ದಾದವರ ಶುಶ್ರೂಷೆ  ಬಿಡಿಸಿ ತಂದು ಕಟ್ಟಬೇಕು ಮಲ್ಲಿಗೆ ಮಾಲೆ  ಓ ಎಳೆಬಿಸಿಲೇ, ನನ್ನ ಮೇಲೆ ಬೆಳಗು  ಓ ಮಳೆಯೇ, ನನ್ನ ಮೇಲೆ ಸುರಿ  ಓ ತಂಗಾಳಿಯೇ ಬೀಸು ನನ್ನತ್ತ  ತಣಿಸು ಒಂದಷ್ಟು ನನ್ನೆದೆಯ ಉರಿ  ಓ ಬಿರುಗಾಳಿಯೇ ಬೀಸಬಾರದೆ ಒಮ್ಮೆ   ಸುಯ್ಯೆಂದು ಹಾರಿಸಿ ಕರೆದೊಯ್ದು ದೂರ ಕೆಳಗಿಳಿಸಬಾರದೇ ಒಂದೆರಡು ತಾಸು ಇಳಿಸಿಕೊಳ್ಳುವೆ ಕಾಲ ಮೇಲಿನ ಭಾರ ಓ ಮಂಜುಹನಿಗಳೇ ಮೆಲ್ಲಮೆಲ್ಲನೆ  ಸಿಂಚನಗೊಳ್ಳಿ  ನನ್ನ ಮೇಲೆ ತಂಪಾದ ಚುಂಬನವಿತ್ತು ನನ್ನ ಬಳಲಿದ ಶರೀರಕ್ಕೆ  ಬರುವವರೆಗೂ ನನಗೆ ಮತ್ತೆ ಸುಖನಿದ್ರೆ   ಸೂರ್ಯನೇ, ಮಳೆಯೇ, ಬಾಗಿದ ಆಕಾಶವೇ , ಬೆಟ್ಟವೇ, ಕಡಲೇ, ಎಲೆಗಳೇ, ಶಿಲೆಗಳೇ, ತಾರೆಗಳ ಬೆಳಕೇ, ಬೆಳದಿಂಗಳ ಸೆಳಕೇ, ನನ್ನವರೆಂದು ನನಗಿಲ

ಗಟ್ಟಿಯಾದ ಮೌನ

ಗಟ್ಟಿಯಾದ ಮೌನ  ಸಿ. ಪಿ. ರವಿಕುಮಾರ್  ಇವನು ಗಟ್ಟಿಯಾಗಿ ಮಾತಾಡುತ್ತಾನೆ ಮೊಬೈಲ್ ಕೈಯಲ್ಲಿ ಹಿಡಿದಾಗ ಬಸ್ ನಲ್ಲಿ ಕುಳಿತಾಗ ಕೈಯಲ್ಲಿ ಕೆಲಸವಿಲ್ಲದೆ ಮೈ ಪರಚಿಕೊಳ್ಳುವ ಹಾಗಾದಾಗ ಅಕ್ಕಪಕ್ಕದವರ ಪರಿವೆಯಿಲ್ಲದೆ ಗಟ್ಟಿಯಾಗಿ ಮಾತಾಡುತ್ತಾನೆ ಕೊಂಡ ಮನೆಯ ಸಾಲದ ಬಗ್ಗೆ ಕೊಳ್ಳಬೇಕಿನಿಸಿದ ಕ್ಯಾಮೆರಾ ಬಗ್ಗೆ ಸ್ನೇಹಿತನ ಮದುವೆಯ ಬಗ್ಗೆ ಇನ್ನೊಬ್ಬನ ವಿಚ್ಛೇದನದ ಬಗ್ಗೆ ಸಿಹಿಕಹಿ ನೊರೆಂಟು ಮಾತಾಡುತ್ತಾನೆ ಗಟ್ಟಿಯಾಗಿ ಮಾತಾಡುತ್ತಾನೆ. ನೋಡಿದ ಸಿನಿಮಾ ಕನಸಿನ ನಾಯಕಿ ಊಟಕ್ಕೆ ಹೋಗಿದ್ದ ರೆಸ್ಟೊರಾಂ ತಿಂದ ಖಾದ್ಯ ಕುಡಿದ ಪಾನೀಯದ ಇವುಗಳ ಬಗ್ಗೆ ಉಪ್ಪು ಕಾರವಾಗಿ ಗಟ್ಟಿಯಾಗಿ ಮಾತಾಡುತ್ತಾನೆ. ಮಧ್ಯೆ ಮಧ್ಯೆ ಧ್ವನಿ ತಗ್ಗಿಸಿ ಏನೋ ಪಿಸುಗುಟ್ಟಿ ಮೈ ಕುಲುಕಿಸಿ ನಗುತ್ತಾನೆ. ಯಾವುದೋ ಅಸಭ್ಯ ಜೋಕಿಗೆ ಗಟ್ಟಿಯಾಗಿ ನಗುತ್ತಾನೆ. ಇವನ ಪಕ್ಕದಲ್ಲಿ ಕುಳಿತವನು ಪತ್ರಿಕೆಯನ್ನು ಹರಡಿಕೊಂಡು ಓದುತ್ತಾ ಸಂಭಾಷಣೆಗೆ ಪೀಠಿಕೆ ಹಾಕುತ್ತಾನೆ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಿಮಗೇನು ಅನ್ನಿಸುತ್ತೆ? ಸುಪ್ರೀಂ ಕೋರ್ಟ್ ತೀರ್ಪು ಸರಿಯೆ? ಎಂದು ಇವನ ಕಡೆ ನೋಡುತ್ತಾನೆ. ಇವನ ಮೊಬೈಲ್ ನಿಶಬ್ದವಾಗಿದೆ. ತರಂಗಾಂತರವನ್ನು ಗುರುತಿಸದಂತೆ. ಇವನು ಹಠಾತ್ ಮೌನಿಯಾಗಿದ್ದಾನೆ. ಗಟ್ಟಿಯಾಗಿ ಮೌನಿಯಾಗಿದ್ದಾನೆ. (c) 2014, C.P. Ravikumar