ಅತಿ ಅಚಾರ




ಸಿ ಪಿ ರವಿಕುಮಾರ್ 


ಕೂಗಿ ಹೇಳುತ್ತಿದೆ ಪತ್ರಿಕೆ
ದೊಡ್ಡ ದೊಡ್ಡ ಅಕ್ಷರಗಳಲ್ಲಿ
ಅತ್ಯಾಚಾರ, ಬಂಧನ, ಬಂದ್ ಆಚರಣೆ
ಇವನು ಓದುತ್ತಾನೆ
ಹೆಣ್ಣಿನ ಶೋಷಣೆ
ವಿರುದ್ಧ ಸಚಿವಾದಿಗಳ ಘೋಷಣೆ

ಇವನು ಯೋಚಿಸುತ್ತಾನೆ
ಯಾವತ್ತು ಬರುವುದೋ ಬದಲಾವಣೆ

ಪ್ರಶ್ನೆಗೆ  ಉತ್ತರ ಆಗಲೇ ಪ್ರಕಟವಾಗಿದೆ
ಬದಲಾಗಿದೆ ತನಿಖೆ ಮಾಡುವ ಪೋಲೀಸ್ ಪಡೆ

ತೆರೆದು ಓದುತ್ತಾನೆ ಇಂದಿನ ಕಲರ್ ಸಪ್ಲಿಮೆಂಟ್
ಅಲ್ಲಿದೆ ಇಡೀ ಫ್ಯಾಮಿಲಿಗೆ ಇನ್ಫೋಟೇನ್ ಮೆಂಟ್:
ದೊಡ್ಡ ಡೆವಲೆಪ್ ಮೆಂಟ್!
ದೊಡ್ಡ ಡೆವಲೆಪ್ ಮೆಂಟ್!
ಜಪಾನೀ ಎಣ್ಣೆ ಬಳಸಿದರೆ ಫಲಿತಾಂಶ ಖಚಿತ
ಒಂದು ಬಾಟಲ್ ಜೊತೆಗೆ ಇನ್ನೊಂದು ಉಚಿತ

ಕೂಗಿ ಹೇಳುತ್ತಿದೆ ಪತ್ರಿಕೆ
ದೊಡ್ಡ ದೊಡ್ಡ ಅಕ್ಷರಗಳಲ್ಲಿ
ಅತ್ಯಾಚಾರ, ಬಂಧನ, ಬಂದ್ ಆಚರಣೆ
ಮೈಮುಚ್ಚಲೂ ಬಟ್ಟೆಯಿಲ್ಲದ
ಸಿನಿಮಾ ತಾರೆಯ ಬವಣೆ
ಮುಂಬರುವ ಚಿತ್ರದ ಸ್ವಾರಸ್ಯದ ಒಗ್ಗರಣೆ

ಪ್ರಕಟವಾಗಿದೆ ಮತ್ತೆ ಅದೂ ಇದೂ ಸಪ್ಪೆ ವಿಚಾರ
ನಡುವೆ ಕಾರದ ಜಾಹೀರಾತು  "ಮಾವಿನಕಾಯಿ ಅಚಾರ"


ಕೊನೆಗೆ ಪ್ರಕಟವಾಗಿದೆ ಮೂಲೆಯಲ್ಲಿ ಸುದ್ದಿ
ಅಷ್ಟು ಸುಲಭವಲ್ಲವಂತೆ ಗಂಗಾ ನದಿಯ ಶುದ್ಧಿ





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ