ನಗರದಲ್ಲಿ ರಾತ್ರಿ

ಹಿಂದಿ ಕವಿತೆ - ಕೇದಾರನಾಥ್ ಸಿಂಗ್ 
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ 


ಮಿಂಚುತ್ತಿದೆ ನಭದಲ್ಲಿ, ಇನ್ನೇನು ಸುರಿಯಬಹುದು ಮಳೆ
ಮನೆಯಿದ್ದ ಜನರೂ ಓಡುತ್ತಿಹರು ಹೀಗೇಕೆ?

ಭಾಷೆ ಗೊತ್ತಿದ್ದವರು ಮೌನ ಧರಿಸಿಹರೇಕೆ?
ಏನದು ಕಾಣುತ್ತಿದೆ ಧೂಮ್ರದಲ್ಲಿ ಬರೆದಂಥ ರೇಖೆ?

ಹಸಿರು ಹಸಿರಾಗಿ ಅಲ್ಲೇನೋ ಕಾಣುತ್ತಿದೆ ನೋಡು -
ಜೀವನ ಸೂತ್ರಗಳೆಲ್ಲ ಗಂಟಾಗಿವೆ ಸಿಕ್ಕಿಹಾಕಿಕೊಂಡು
 
ಇದು ನಗರವೋ ಅಣ್ಣ! ಇಲ್ಲಿ ವಾಸವಾಗಿವೆ ಆಸೆಗಳು
ಬೊಗಳುತ್ತವೆ ನಾಯಿ ಮನುಷ್ಯರು ಹಾಡುತ್ತವೆ ಅಳಿಲು

ಇದು ನಗರವೋ ಅಣ್ಣ! ಇದರದ್ದು ಒಂದೇ ಸರಳ ಬೇಡಿಕೆ
ಬೇಕು ಸ್ವಾತಂತ್ರ್ಯ ಸಾಧ್ಯವಾದಷ್ಟೂ ಸುಖಾನುಭವಕ್ಕೆ

ಹೊತ್ತುರಿಯುವಾಗ ನೀನು ಇದನ್ನು ನೋಡಬೇಕು
ಬೇರೆ ಬೇರೆ ಕನ್ನಡಿಗಳಲ್ಲಿ ತೋರುವುದು ಬೇರೆ ಬೇರೆ ಝಲಕ್ಕು

ರಾತ್ರಿಯಾಗುತ್ತಿದೆ ಗೆಳೆಯಾ - ಇನ್ನು ಹೋಗಿಬರುತ್ತೇನೆ
ನನಗೆ ಸಂಬಳ ಕೊಡುತ್ತಾರೆ ನೋಡು ಹೀಗೆ ಹೋಗಿಬರುವುದಕ್ಕೇ

ಕೇಳು ನೀರವದಲ್ಲಿ ಕಣ್ಣಿಗೆ ಹತ್ತಿದಾಗ ಜೊಂಪು
ರಾತ್ರಿಯೆಲ್ಲಾ ಕೇಳುವುದು ಶೃಂಖಲೆಗಳ ಸದ್ದು

==
Translation of a Hindi poem by Kedarnath Singh
(c) 2014, C.P. Ravikumar

ಕಾಮೆಂಟ್‌ಗಳು

  1. शहर में रात

    बिजली चमकी, पानी गिरने का डर है
    वे क्यों भागे जाते हैं जिनके घर है
    वे क्यों चुप हैं जिनको आती है भाषा
    वह क्या है जो दिखता है धुँआ-धुआँ-सा
    वह क्या है हरा-हरा-सा जिसके आगे
    हैं उलझ गए जीने के सारे धागे
    यह शहर कि जिसमें रहती है इच्छाएँ
    कुत्ते भुनगे आदमी गिलहरी गाएँ
    यह शहर कि जिसकी ज़िद है सीधी-सादी
    ज्यादा-से-ज्यादा सुख सुविधा आज़ादी
    तुम कभी देखना इसे सुलगते क्षण में
    यह अलग-अलग दिखता है हर दर्पण में
    साथियों, रात आई, अब मैं जाता हूँ
    इस आने-जाने का वेतन पाता हूँ
    जब आँख लगे तो सुनना धीरे-धीरे
    किस तरह रात-भर बजती हैं ज़ंजीरें

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)