ಸುಳ್ಳು ಹೇಳುವ ಕನ್ನಡಿ
ಕನ್ನಡ ಅನುವಾದ - ಸಿ ಪಿ ರವಿಕುಮಾರ್
ಬಣ್ಣದ ರನ್ನದ ಕನ್ನಡಿಯೇ
ತೋರಲಾರೆಯಾ ನನ್ನನ್ನು ತೆಳ್ಳಗೆ, ಆರಡಿ ಎತ್ತರ?
ಬಣ್ಣದ ರನ್ನದ ಕನ್ನಡಿಯೇ
ಅವಮಾನ ಮಾಡಲೇಬೇಕೇ ಬಂದಾಗ ನಿನ್ನ ಹತ್ತಿರ?
ಬಣ್ಣದ ರನ್ನದ ಕನ್ನಡಿಯೇ
ನನ್ನ ನಡು ದಪ್ಪಗಿಲ್ಲ ನೀನು ತೋರುವಷ್ಟು
ಬಣ್ಣದ ರನ್ನದ ಕನ್ನಡಿಯೇ
ನನ್ನ ಮುಖವಿಲ್ಲ ಅಷ್ಟೊಂದು ಎಡವಟ್ಟು
ಬಣ್ಣದ ರನ್ನದ ಕನ್ನಡಿಯೇ
ನನಗಿದೆಯೇ ಜೋತು ಬೀಳುವ ಗದ್ದ?
ಬಣ್ಣದ ರನ್ನದ ಕನ್ನಡಿಯೇ
ಹಲ್ಲು ಕಿರಿದರೆ ನಾನು ಹೀಗೇಕೆ ಅಸಂಬದ್ಧ?
ಬಣ್ಣದ ರನ್ನದ ಕನ್ನಡಿಯೇ
ನನ್ನ ಚೆಲುವನ್ನು ಮೀರಿಸುವರಾರಿಹರು?
ಸರಿ, ಬದಲಾಯಿಸಿ ಕೇಳುವೆನು ಪ್ರಶ್ನೆಯನ್ನು:
ಇರುವರೇ ಹೇಳು ನನಗಿಂತ ವಕ್ರರೂ !
ಬಣ್ಣದ ರನ್ನದ ಕನ್ನಡಿಯೇ
ನಿನಗೆ ತೆತ್ತು ತಂದಿದ್ದೇನೆ ಸಾಕಷ್ಟು ಹಣ
ಬಣ್ಣದ ರನ್ನದ ಕನ್ನಡಿಯೇ
ಎರಡು ಒಳ್ಳೆಯ ಮಾತು ನೀನು ತೆರಬೇಕಾದ ಋಣ
ಬಣ್ಣದ ರನ್ನದ ಕನ್ನಡಿಯೇ
ನನ್ನ ಚೆಲುವನ್ನು ಮೀರುಸುವರಾರಿಹರು?
ಯಾರಿಲ್ಲ ಎನ್ನುವೆಯಾ? ಭೇಷಾಗಿದೆ ಉತ್ತರ!
ನಿನ್ನಿಂದ ಕಲಿಯಬೇಕು ಸುಳ್ಳು ಬೊಗಳುವುದು!
Original poem by Mark R Saughter
ಪ್ರತ್ಯುತ್ತರಅಳಿಸಿMirror Mirror, Bloody Fibber
Mirror, mirror, on the wall,
Can't you show me tall and slim?
Mirror, mirror, on the wall,
Must I look so bloody grim?
Mirror, mirror, on the wall,
You're distorting my poor waist!
Mirror, mirror, on the wall,
And why the heck am I defaced?
Mirror, mirror, on the wall,
Why have I a double chin?
Mirror, mirror, on the wall,
And what's the stupid, goofy grin?
Mirror, mirror, on the wall,
Pointless asking ‘Who’s the fairest? –
More bloody likely, 'Who’s the queerest? ’
Now look, I paid a big bucks for thee,
So why can’t you be nice to me?
Mirror, mirror, on the wall,
Who’s the fairest of them all?
Me, you say? Ah, that's better –
Mirror, mirror, bloody fibber!