ಓಜಿಮಾಂಡಿಯಾಸ್




ಓಜಿಮಾಂಡಿಯಾಸ್ 
ಮೂಲ ಕವಿತೆ - ಪಿ ಬಿ ಷೆಲ್ಲಿ
ಕನ್ನಡಕ್ಕೆ - ಸಿ ಪಿ ರವಿಕುಮಾರ್ 
Brown Man Face Figurineದೂರದಾವುದೋ ಪುರಾತನ ನೆಲದಿಂದ
ಊರುತ್ತಾ ಕೋಲನ್ನು ಬಂದ ಯಾತ್ರಿಕನೊಬ್ಬ
ಅರುಹಿದನು - ಮುಂಡವಿಲ್ಲದ ಕಲ್ಲಿನ ದೊಡ್ಡ ಕಾಲುಗ-
ಳೆರಡು ನಿಂತಿವೆ ಮರಳುಗಾಡಲ್ಲಿ; ಬದಿಯಲ್ಲಿ
ಅರೆಬರೆ ಹೂತುಹೋದ ಭಗ್ನ ಮುಖದಲ್ಲಿ
ಕೆರಳಿದೆ ಮುಂಗೋಪ, ತಿರುಚಿದ ತುಟಿಯಲ್ಲಿ
ಮರಗಟ್ಟಿದೆ ಯಾವುದೋ ಆದೇಶ; ಶಿಲ್ಪಿ
ಯಾರೋ ಗ್ರಹಿಸಿ ಸೆರೆ ಹಿಡಿದಿದ್ದಾನೆ
ಕ್ರೂರ ಹೃದಯದ ಸೊಕ್ಕು; ಪೀಠದ ಮೇಲೆ
ಬರೆದಿದೆ - "ಓ ನೋಡಿ, ನನ್ನ ಹೆಸರು ಓಜಿಮಾಂಡಿಯಾಸ್,
ಅರಸರ ಅರಸ, ಇಗೋ ನಾನು ಸೃಷ್ಟಿಸಿದ ಸಾಮ್ರಾಜ್ಯ,
ಹಿರಿಯರಸರೆಲ್ಲಾ ನೋಡಿ ಹಲುಬಿ!"
ಬೇರೇನೂ ಉಳಿದಿಲ್ಲ ಮುರುಕಲು ಕಲ್ಲುಶಿಲೆ ಬಿಟ್ಟರೆ,
ಮರಳು ಹರಡಿದೆ ಕಣ್ ದೃಷ್ಟಿ ಹರಿವವರೆಗೆ.



(c) C.P. Ravikumar, 2014
Kannada Translation of 'Ozymandias' - English poem by P.B. Shelley

ಕಾಮೆಂಟ್‌ಗಳು

  1. Original Poem:

    I met a traveller from an antique land
    Who said: "Two vast and trunkless legs of stone
    Stand in the desert....Near them, on the sand,
    Half sunk a shattered visage lies, whose frown,
    And wrinkled lip, and sneer of cold command,
    Tell that its sculptor well those passions read
    Which yet survive, stamped on these lifeless things,
    The hand that mocked them and the heart that fed;
    And on the pedestal these words appear:
    My name is Ozymandias, King of Kings;
    Look on my works, ye mighty, and despair!
    Nothing beside remains. Round the decay
    Of that colossal wreck, boundless and bare,
    The lone and level sands stretch far away."

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)