ವಾಜಪೇಯಿ ಅವರ ಎರಡು ಕವಿತೆಗಳು

 ಮೂಲ ಹಿಂದಿ ಕವಿತೆ: ಅಟಲ್ ಬಿಹಾರಿ ವಾಜಪೇಯಿ 
ಕನ್ನಡಕ್ಕೆ: ಸಿ ಪಿ ರವಿಕುಮಾರ್ 


ಕ್ಷಮಾಯಾಚನೆ 


ನಮ್ಮನ್ನು ಕ್ಷಮಿಸು ಬಾಪೂ!
ನಾವು ವಚನ ಮುರಿದ ಅಪರಾಧಿಗಳು,
ರಾಜಘಾಟ್ ನಮ್ಮಿಂದ ಅಪವಿತ್ರವಾಯಿತು,
ಯಾತ್ರೆ ಮಧ್ಯದಲ್ಲೇ ಗುರಿಯನ್ನು ಮರೆತೆವು.
ಜಯಪ್ರಕಾಶ್ ಜೀ! ನಂಬಿಕೆ ನಮ್ಮಲ್ಲಿರಲಿ,
ಭಗ್ನ ಸ್ವಪ್ನಗಳ ಪುನಃ ಜೋಡಿಸಿ
ಉರಿದ ಚಿತೆಯ ಭಸ್ಮದ ಕಿಡಿಯಿಂದ
ಕತ್ತರಿಸುವೆವು ಕತ್ತಲ ಬಂಧ!
ಸ್ವಾತಂತ್ರ್ಯ 

ಸ್ವಾತಂತ್ರ್ಯೋತ್ಸವ  ಆಚರಿಸುವೆವು
ಹೊಸ ಗುಲಾಮಗಿರಿ ನಡುವೆ;
ಒಣಗಿದೆ ನೆಲ, ಅಂಬರ ಬರಿದಾಗಿದೆ,
ಮನಸಿನಲ್ಲಿ ಬರಿ ಕೊಚ್ಚೆ; -
ಮನಸಿನಲ್ಲಿ ಬರಿ ಕೊಚ್ಚೆ,
ಒಣಗಿಹವು ಕೆಂದಾವರೆ ಒಂದೊಂದೂ,
ಆರಿಹೋಗಿ ಒಂದೊಂದೇ ದೀಪ,
ಎಲ್ಲೆಡೆ ಕತ್ತಲು ಕವಿದು.
ಕೈದಿಯಾಗಿರುವ ಕವಿಯ ಉವಾಚ,
ಕಳೆದುಕೊಳ್ಳದಿರು ಸ್ಥೈರ್ಯ,
ನಿಶಾರಕ್ಕಸಿಯ ಎದೆಯ ಸೀಳಿ
ಕಂಗೊಳಿಸಿ ಮಿನುಗುವನು ಸೂರ್ಯ!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)