ಪೋಸ್ಟ್‌ಗಳು

ಸೆಪ್ಟೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಿಗ್ನಲ್ ಮತ್ತು ನಾಯ್ಸ್

ಹಿಂದೆಂದೂ ಇಲ್ಲದಷ್ಟು ಜಾತಿ ರಾಜಕೀಯ ಈಗ ಕರ್ನಾಟಕದಲ್ಲಿ ನಡೆಯುತ್ತಿದೆ. ಇದನ್ನು ಸಾಹಿತಿಗಳು ಹುಟ್ಟುಹಾಕುತ್ತಿದ್ದಾರೆ ಎನ್ನುವುದು ಅತ್ಯಂತ ದುರದೃಷ್ಟಕರ ಸಂಗತಿ. ಇದನ್ನು ಕನ್ನಡ ಮೀಡಿಯಾ ದೊಡ್ಡದು ಮಾಡಿ ತೋರಿಸುತ್ತಿದೆ ಎನ್ನುವುದು ಇನ್ನೂ ದೊಡ್ಡ ದುರದೃಷ್ಟ. ಅನೇಕ ಯುವಕರು (ಸಾಹಿತಿಗಳು/ಇತರರು) ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರುವುದು ದುರದೃಷ್ಟ. ಇದು ಅಪಾಯಕಾರಿ. ದಾರಿಯಲ್ಲಿ ಹೋಗುತ್ತಿರುವಾಗ ಯಾರೋ ಒಬ್ಬ ಕಿರುಚಾಡಿ ಯಾರನ್ನೋ ಬೈದಾಡುತ್ತಿದ್ದರೆ ನೀವು ಅಲ್ಲೇ ನಿಂತು ಜಗಳ ನೋಡುತ್ತಾ ನಿಲ್ಲುತ್ತೀರಾ? ನಿಮ್ಮ ಕೆಲಸ ಮರೆತುಬಿಡುತ್ತೀರಾ? ನೋಡಲು ಜನ ನಿಂತಷ್ಟೂ ಅವರ ಮಾತುಗಳಿಗೆ  ರಂಗೇರುತ್ತದೆ. ಈ ವಾಯರಿಸಂ ಕೊನೆಗೊಳ್ಳದಿದ್ದರೆ ಕನ್ನಡ ಹಾದಿ ತಪ್ಪುತ್ತದೆ. ಯಾರಿಗೆ ಎಷ್ಟು ಗಮನ ಕೊಡಬೇಕೋ ಅಷ್ಟೇ ಕೊಡುವುದು ಒಳಿತು. ಮುಂದಕ್ಕೆ ಹೋಗೋಣ. ಇದು ಮಕ್ಕಳ ಭವಿಷ್ಯದ ಪ್ರಶ್ನೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವರಿಗೆ ಜಾತಿ ಖಂಡಿತ ನೆರವಾಗುವುದಿಲ್ಲ. ನಿಮಗೆ ಅವರು ಹೇಳುತ್ತಿರುವುದು ಕೇಳಲು ಕಷ್ಟವಾಗುತ್ತಿದೆಯೇ? ಚಾನೆಲ್ ಬದಲಾಯಿಸಿ. ಹಿಂದೂ ದೇವತೆಗಳ ಬಗ್ಗೆ ಯಾರೋ ಕೀಳಾಗಿ ಮಾತಾಡಿದರೆ? ನೀವು ಒಳ್ಳೆಯ ದೇವರನಾಮವನ್ನು ಕೇಳಿ - ಇತರರೊಂದಿಗೂ ಹಂಚಿಕೊಳ್ಳಿ. ಸಿಗ್ನಲ್ ಮತ್ತು ನಾಯ್ಸ್ ಎಂಬ ಎರಡು ವಿಧಗಳಿವೆ - ನಾವು ಯಾಕೆ ಸದ್ದನ್ನು ದೊಡ್ಡದು ಮಾಡುತ್ತಿದ್ದೇವೆ? ನಮಗೆ ಬೇಕಾದ್ದನ್ನು ತಾನೇ ನಾವು ದೊಡ್ಡದು ಮಾಡಬೇಕು?

ಬಿರುಕು

ಇಮೇಜ್
ಸಿ ಪಿ ರವಿಕುಮಾರ್ ಎಲ್ಲಾದರೂ ಬಿರುಕು ಕಂಡಿತೇ? ಮಧ್ಯ ಇದು ಒಂದು ಬೆಣೆ ಸಾಧ್ಯವಾದಾಗೆಲ್ಲಾ ಸಮಯ ಸಿಕ್ಕಾಗೆಲ್ಲಾ ಹಾಕುತ್ತಿರು ಏಟು ಒಂದು ದಿನ ಎರಡು ಭಾಗವಾಗುತ್ತದೆ ಎಲ್ಲಾದರೂ ಬಿರುಕು ಕಂಡಿತೇ? ಹುಡುಕು, ಸಿಕ್ಕುತ್ತದೆ ಅಂಟು ಕಷ್ಟವಾಗಬಹುದು, ಜೋಡಿಸು ಮೊದಲು ಗೆರೆ ಕಾಣಬಹುದು ಆದರೆ ಸೋರುವುದಿಲ್ಲ ಎಲ್ಲಾದರೂ ಸೀಳು ಕಂಡಿತೇ? ಎಡ ಬಲವೆಂದು ಎರಡೂ ಕೈಯಲ್ಲಿ ಹಿಡಿದು ವಿರುದ್ಧ ದಿಕ್ಕುಗಳಲ್ಲಿ ಎಳೆದುಬಿಡು ಹರಿದು ಎರಡು ಭಾಗವಾಗುತ್ತದೆ ಎಲ್ಲಾದರೂ ಸೀಳು ಕಂಡಿತೇ? ಹುಡುಕಿ ತಾ ಒಂದು ಸೂಜಿ ಮತ್ತು ನೂಲಿನ ಎಳೆ ಕಷ್ಟವಾಗಬಹುದು, ಹಾಕು ಹೊಲಿಗೆ ಮೊದಲು ಗೆರೆ ಕಾಣಬಹುದು ಆದರೆ ಮಾನ ಮುಚ್ಚುತ್ತದೆ ನೆನಪಿಡು ನಿನ್ನ ಕೈಕಾಲು, ನಿನ್ನ ಹಲ್ಲು, ನಿನ್ನ ಅಂಗಾಂಗಗಳಲ್ಲಿ ಎಂದು ಬೇಕಾದರೂ ಕಾಣಿಸಿಕೊಳ್ಳಬಹುದು ಬಿರುಕುಗಳು,  ಸೀಳು ಎಲ್ಲಿಗೆ ಓಡುತ್ತೀಯಾ? ಕಸಾಯಿಖಾನೆಗೋ ದವಾಯಿಖಾನೆಗೋ ಸಮಾಜದ ನೋವು ನಿನ್ನದೇ ನಿನ್ನ ಹೆಬ್ಬೆಟ್ಟಿನ ನೋವನ್ನು ನಿನ್ನ ನರಮಂಡಲ ನಿನಗೆ ಹೇಳುತ್ತಿಲ್ಲವೇ? ನಿನಗೆ ಏನು ಬೇಕು ಹೇಳು ಸರ್ಜರಿಯೋ ಬ್ಯಾಂಡೇಜೋ ನೆನಪಿಡು ಇದ್ದೇ ಇರುತ್ತದೆ ಎಲ್ಲಾ ಕಡೆ ಇಂದಲ್ಲ ಮುಂದೆ ಒಂದಲ್ಲ ಒಂದು ಬಿರುಕು ಮುಲಾಮು ಹಚ್ಚುತ್ತಾ ನೋವು ಮರೆತು ಮುಂದೆ ಸಾಗುವುದೇ ಬದುಕು 

ಯಾರು ದಲಿತರು?

ಇಮೇಜ್
ಸಿ ಪಿ ರವಿಕುಮಾರ್  ಈಗಾಗಲೇ ಜಗತ್ತಿನ ಜನಸಂಖ್ಯೆ ಏಳು ನೂರು ಕೋಟಿಯ ಸಮೀಪವಾಗಿದೆ. ಇದರಲ್ಲಿ ಭಾರತೀಯರೇ ೧೨೫ ಕೋಟಿ ಇದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಜನಸಂಖ್ಯೆಯ ದೇಶವಾಗುವತ್ತ ಭಾರತ ದಾಪುಗಾಲು ಹಾಕುತ್ತಿದೆ. ಮನುಷ್ಯರಲ್ಲದೆ ಮೃಗಗಳಿಗೂ ಆಹಾರ-ನೀರು ಬೇಕು ಎನ್ನುವುದನ್ನು ಮರೆಯಬೇಡಿ. ನೀರಿಗಾಗಿ ಈಗಾಗಲೇ ಹೋರಾಟಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ನೀರನ್ನು ಅತ್ಯಂತ ಕಡಿಮೆ ಉಪಯೋಗಿಸಿ ಬೆಳೆಯುವ ಆಹಾರಗಳು ನಮಗೆ ಮುಖ್ಯವಾಗಬೇಕು ಎನ್ನುವುದು ಎಲ್ಲರ ಹಿತದ ದೃಷ್ಟಿಯಿಂದ ಸರಿಯಾದ ಮಾತು. ನೀರಿನ ಬಳಕೆಯಲ್ಲಿ ಮಾಂಸಾಹಾರ ಉತ್ಪಾದನೆಯದೇ ಹಿರಿಯ ಪಾಲು. ಹೀಗಾಗಿ ಸಸ್ಯಾಹಾರ ಬಳಸಿ ಎಂದು ವಿಜ್ಞಾನಿಗಳು ಕೂಗುತ್ತಲೇ ಇದ್ದಾರೆ. ಕೆಳಗೆ ನಾನು ಹಿಂದೆ ಬರೆದ ಲೇಖನವೊಂದನ್ನು ಕೊಟ್ಟಿದ್ದೇನೆ. ನೆನಪಿರಲಿ - ಯಾವುದೇ ವಸ್ತು ಸೀಮಿತವಾಗಿದ್ದಾಗ ಅದನ್ನು ಜೋಕೆಯಿಂದ ಬಳಸುವುದು ಎಲ್ಲರ ಹಿತ. "ಇಲ್ಲ, ನಾನು ನನಗೆ ಹೇಗೆ ಬೇಕೋ ಬಳಸುತ್ತೇನೆ" ಎಂದು ಹೊರಡುವುದು ಕೇವಲ ಕೆಲವರಿಗೆ ಹಿತ - ಹೀಗಾದಾಗ ಆರ್ಥಿಕವಾಗಿ-ದೈಹಿಕವಾಗಿ ದುರ್ಬಲರಾದವರು ("ದಲಿತರು") ನಾಶವಾಗದೇ ಉಳಿಯುತ್ತಾರಾ ಯೋಚಿಸಿ. ಹೀಗಿರುವಾಗ ಜನರನ್ನು ತಪ್ಪು ಹಾದಿಗೆ ಎಳೆದು ಅವರಿಗೆ ದನದ ಮಾಂಸವನ್ನೂ ತಿನ್ನಿ ಎಂದು ಬೋಧಿಸಿದವರಿಗೆ ಅಕಾಡೆಮಿ ಪ್ರಶಸ್ತಿಯ ಗೌರವ ಸಿಕ್ಕಿದ್ದು ದುರ್ದೈವದ ವಿಷಯ. ದಲಿತ ಎಂದರೆ ಜಾತಿಯಲ್ಲ, ಧರ್ಮವಲ್ಲ .  ಮಾತು ಬಾರದ ಮೃಗಗಳು ನಿಜ...

ಅಯ್ಯೋ ವ್ಯಾಕರಣ ಕ್ಯಾಕರನಾ?

ಇಮೇಜ್
(ಒಂದು ಹರಟೆ) ಸಿ ಪಿ ರವಿಕುಮಾರ್  ಈಚೆಗೆ ಮಿತ್ರರೊಬ್ಬರು ಹಂಚಿಕೊಂಡ ಫೇಸ್ ಬುಕ್ ಚಿತ್ರಪಟದಲ್ಲಿದ್ದ ಬ್ಯಾನರಿನಲ್ಲಿ ಅರಸೀಕೆರೆ ಅನ್ನುವುದನ್ನು ARSIKERE ಅಂತ ಬರೆದಿದ್ದರು. ಅರಸಿಯ+ಕೆರೆ ಎನ್ನುವ ಪ್ರತ್ಯಯವುಳ್ಳ ಸಮಾಸಪದ ಅರಸೀಕೆರೆ . ARASIKERE ಎಂದು ಬರೆಯುವುದೇ ಸರಿ ಎಂದು ನಾನು ಕಾಮೆಂಟ್ ಹಾಕೋಣವೇ ಎಂದು ಯೋಚಿಸಿದೆ.  ಈನಡುವೆ "ಅಯ್ಯೋ ವ್ಯಾಕರಣ ಕ್ಯಾಕರನಾ?" ಎನ್ನುವ ಹಾಗೆ ಭಾಷೆಯನ್ನು ಬಳಸುತ್ತಿರುವವರಿಗೆ ನಾನು ಕಾಗುಣಿತ ದೋಷಗಳ ಬಗ್ಗೆ ಹೇಳಿದರೆ ಖಂಡಿತ ನನಗೆ ಸಾಕಷ್ಟು ಡಿಸ್ಲೈಕ್ ಬರುತ್ತವೆ ಎಂದು ಸುಮ್ಮನಾದೆ. ಅರಸೀಕೆರೆಯನ್ನು ಅರಸಿಕೆರೆ ಎಂದು ಬರೆಯುವುದು ಕೂಡಾ ಸರಿಯಲ್ಲವೆಂದು ನನ್ನ ಅಭಿಪ್ರಾಯ - ಹಾಗೆ ಬರೆದಾಗ ಜನ ಅರ+ಸಿಕೆರೆ ಎನ್ನಲು ಪ್ರಾರಂಭಿಸುವುದು ಖಂಡಿತ! ಅಂದಹಾಗೆ ಅರಸೀಕೆರೆಯಲ್ಲಿ ಕೆರೆ ಇದೆಯೇ, ಆ ಕೆರೆ ಯಾವ ಅರಸಿಯದು, ಇವೆಲ್ಲಾ ತಿಳಿದುಕೊಳ್ಳಲು ಯೋಗ್ಯವಾದ ವಿಷಯಗಳು! ಗೊತ್ತಿದ್ದರೆ ತಿಳಿಸಿ. ಬೆಂಗಳೂರಿನಲ್ಲೂ ಅರಕೆರೆ ಇದೆ. ಎಷ್ಟೋ ಜನ ಕನ್ನಡಿಗರಿಗೇ ಅರಕೆರೆ ಎಂದರೆ ಅರಸನ+ಕೆರೆ ಎನ್ನುವುದು ಗೊತ್ತಿಲ್ಲ. ಹಿಂದೆ ಅರಸ-ಅರಸಿಯರು ತಮಗಾಗಿ ಕೆರೆಗಳನ್ನು ಕಟ್ಟಿಸಿಕೊಂಡು ಸಾಮಾನ್ಯರಿಗೆ ಬಾವಿಗಳನ್ನು ತೋಡುತ್ತಿದ್ದರು ಎಂದು ಕಾಣುತ್ತದೆ. "ಕೆರೆಯಂ ಕಟ್ಟಿಸು ಬಾವಿಯಂ ಸವೆಸು" ಎನ್ನುವಾಗ "ಸ್ವಂತಕ್ಕಾಗಿ ಕೆರೆ ಕಟ್ಟಿಸಿಕೋ, ಜನರಿಗಾಗಿ ಬಾವಿಯನ್ನು ಸವೆಸು" ಎಂಬ ನ...

ಕಣ್ಣುಗಳು ಸಾವಿರಾರು ಮನದ ಕನ್ನಡಿಗೆ

ಇಮೇಜ್
ಮೂಲ - ಸಾಹಿರ್ ಲುಧಿಯಾನ್ವಿ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಇದೊಂದು ಭಕ್ತಿಗೀತೆ. ಕಾಜಲ್ ಎಂಬ ಹಿಂದಿ ಚಿತ್ರದಲ್ಲಿ ಇದನ್ನು ಬಳಸಿಕೊಳ್ಳಲಾಗಿದೆ.  ಮುಸಲ್ಮಾನ ಧರ್ಮೀಯರಾದ ಸಾಹಿರ್ ಲುಧಿಯಾನ್ವಿ ಈ ಭಕ್ತಿಗೀತೆಯನ್ನು ಬರೆದಿರುವುದು ವಿಶೇಷ.  "ರವಿ" ಎಂಬ ಸಂಗೀತ ನಿರ್ದೇಶಕರ ಮಾರ್ಗದರ್ಶನದಲ್ಲಿ ಈ ಗೀತೆಯನ್ನು ಆಶಾ ಭೋಂಸ್ಲೆ ಹಾಡಿದ್ದಾರೆ. ಈ ಗೀತೆಯಲ್ಲಿ ಮನುಷ್ಯ ಮತ್ತು ಭಗವಂತನ ನಡುವೆ ನಡೆದ ಒಂದು ಸಂವಾದವನ್ನು ಕುರಿತು ಕವಿ ಬರೆದಿದ್ದಾರೆ.  "ಪ್ರಭೂ, ನಿನ್ನನ್ನು ನಾನು ಪಡೆಯುವುದು ಹೇಗೆ?" ಎಂದು ಮನುಷ್ಯ ಭಗವಂತನನ್ನು ಕೇಳಿದಾಗ ಭಗವಂತನು "ನಿನ್ನ ಮನಸ್ಸಿನಲ್ಲಿ ಹುಡುಕಿದರೆ ಸಿಕ್ಕುತ್ತೇನೆ" ಎಂದು ಉತ್ತರಿಸುತ್ತಾನೆ. "ನನ್ನನೆಲ್ಲಿ ಅರಸುವೆ?" ಎಂಬ ಕಬೀರನ ಒಂದು ಭಕ್ತಿಗೀತೆ ನೆನಪಾಗುತ್ತದೆ.  "ತೋರಾ ಮನ್ ದರ್ಪಣ್ ಕಹಲಾಯೇ" ಎಂದು ಪ್ರಾರಂಭವಾಗುವ ಈ ಗೀತೆಯ ಧ್ವನಿಮುದ್ರಿಕೆ ನಿಮಗೆ ಅಂತರಜಾಲದಲ್ಲಿ ಸಿಕ್ಕುತ್ತದೆ. ಈಗ ಕವಿತೆಯ ಅನುವಾದವನ್ನು ಓದಿ.    ಹೇಗೆ ಪಡೆಯಲಿ ನಿನ್ನನ್ನು ಪ್ರಭುವೇ ಎಂದು ಅವಲತ್ತುಕೊಂಡಾಗ ಪ್ರಾಣಿ ನಿನ್ನ ಮನದಲ್ಲಿ ಹುಡುಕಿದರೆ ಸಿಕ್ಕುವೆನು ಎಂದು ಮಾರ್ನುಡಿಯಿತು ಪ್ರಭುವಾಣಿ  ಅರಿತುಕೋ ನಿನ್ನ ಮನಸ್ಸನ್ನು ಸೃಷ್ಟಿಸಿದ್ದೇನೆ ಕನ್ನಡಿಯ ಹಾಗೆ ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ  ನೋಡುತ್ತದ...

ಎದೆಯ ಬಡಿತದ ಕಾರಣವು ನೆನಪಾಯಿತು

ಇಮೇಜ್
ಮೂಲ ಉರ್ದೂ ಗಜಲ್ - ನಾಸಿರ್ ಕಾಜ್ಮಿ ಕನ್ನಡಕ್ಕೆ - ಸಿ ಪಿ ರವಿಕುಮಾರ್ ನಾಸಿರ್ ಕಾಜ್ಮಿ ಅವರು ಪಾಕೀಸ್ತಾನದ ಉರ್ದೂ ಕವಿ. ಅವರ ಈ ಗಜಲ್ (ದಿಲ್ ಧಡಕನೇ ಕಾ ಸಬಾಬ್ ಯಾದ್ ಆಯಾ) ಪ್ರಸಿದ್ಧ ಪಾಕೀಸ್ತಾನೀ ಗಾಯಕಿ ನೂರ್ ಜಹಾನ್ ಹಾಡಿದ್ದಾರೆ.  ಹೃದಯಸ್ಪರ್ಶಿಯಾದ ಗಾಯನ. ಇದೇ ಗಜಲ್ ಅನಂತರ ಆಶಾ ಭೋಂಸ್ಲೆ ಕೂಡಾ ಹಾಡಿದ್ದಾರೆ. ಈ ಗಜಲಿನಲ್ಲಿ ತನ್ನ ಗೆಳೆಯನನ್ನು (ಗೆಳತಿಯನ್ನು) ನೆನೆದು ದುಃಖಿಸುತ್ತಿರುವ ಒಬ್ಬಳ(ನ) ಅಳಲು ಬಿಂಬಿತವಾಗಿದೆ.  ಯಾವುದೋ ಕಾರಣಕ್ಕಾಗಿ ಈ ಗೆಳೆಯ ದೂರನಾಗಿದ್ದಾನೆ. ಅವನ ನೆನಪಿನಲ್ಲೇ ಜೀವನ ಕಳೆಯುತ್ತಿದೆ - ವಿಚಿತ್ರವೆಂದರೆ ಸಾವರಿಸಿಕೊಳ್ಳಲು ಕಷ್ಟವಾದಾಗ ಊರುಗೋಲಾಗುವ ನೆನಪೇ ಉಪವನದ ನೆರಳಿನಲ್ಲಿ ನೆನೆಯುತ್ತಿರುವವರ ಕಣ್ಣೀರಿಗೂ ಕಾರಣವಾಗುತ್ತದೆ.  ಭಾರತ ಮತ್ತು ಪಾಕೀಸ್ತಾನ ಎಂದು ಎರಡು ಭಾಗಗಳಾದಾಗ ವಿಭಿನ್ನ ದೇಶಗಳಲ್ಲಿ ಹಂಚಿಹೋದ ಬಂಧು-ಮಿತ್ರರು ಹೀಗೇ ಒಬ್ಬರನ್ನೊಬ್ಬರು ನೆನೆದು ದುಃಖಿಸುತ್ತಿರಬಹುದು.   ಎದೆಯ ಬಡಿತದ ಕಾರಣವು ನೆನಪಾಯಿತು ನಿನ್ನ ನೆನಪು ಅದೆಂದು ಇಂದು ನೆನಪಾಯಿತು ಸಾವರಿಸಿಕೊಳ್ಳುವುದು ಕಷ್ಟವಾದಾಗ ಗೆಳೆಯಾ ವೈಚಿತ್ರ್ಯವೆಂಬಂತೆ ನಿನ್ನ ನೆನಪಾಯಿತು ಎದೆಯ ತಲ್ಲಣ ಹೇಳಿಕೊಳ್ಳಬಹುದಾಗಿತ್ತು ನಾನೂ ಅವರು ಮರೆಯಾದ ಮೇಲೆ ನೆನಪಾಯಿತು ದಿನವನ್ನು ಹೇಗೋ ದೂಡಿದೆ ಬಹಳ ಕಷ್ಟದಿಂದ ಬಳಿಕ ನಿನ್ನ ರಾತ್ರಿಯ ವಾದ ನೆನಪ...

ವಿಚಿತ್ರ ವಿಡಂಬನೆ ವಿಧಿಯು ಬರೆದ ಹಣೆಬರಹ!

ಇಮೇಜ್
ಮೂಲ ಭೋಜಪುರಿ - ಮೀರಾಬಾಯಿ  ಕನ್ನಡಕ್ಕೆ - ಸಿ ಪಿ ರವಿಕುಮಾರ್   "ಕರಮ್ ಕೀ ಗತಿ ನ್ಯಾರೀ ಸಂತೋ ..." ಎಂಬ ಮೀರಾ ಭಜನೆಯನ್ನು ನೀವು ಕೇಳಿರಬಹುದು.  ಹೃದಯನಾಥ್ ಮಂಗೇಶ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್  ಈ ಭಜನೆಯನ್ನು  ಹಾಡಿದ್ದಾರೆ.  ಅಂತರ್ಜಾಲದಲ್ಲಿ ಲಭ್ಯವಾಗಿದೆ, ನೀವೂ ಕೇಳಬಹುದು. ಈ ಭಜನೆಯಲ್ಲಿ ಮೀರಾಬಾಯಿ ವಿಧಿಯ ವಿಪರ್ಯಾಸವನ್ನು ಕುರಿತು ಹೇಳುತ್ತಿದ್ದಾಳೆ. ದೊಡ್ಡ ದೊಡ್ಡ ಕಣ್ಣುಗಳನ್ನು ಪಡೆದ ಜಿಂಕೆಯ ಕರ್ಮ ಒಣಕಲು ಕಾಡಿನಲ್ಲಿ ಅಲೆದಾಡುವುದು! ಮೀರಾಬಾಯಿಗೆ ತನ್ನ ಜೀವನದ ಬಗ್ಗೆ ಕೂಡಾ ಹೀಗೇ ಅನ್ನಿಸಿರಬಹುದು. ತಾನು ಹುಟ್ಟಿದ್ದು ಗಿರಿಧರ ಗೋಪಾಲನಿಗಾಗಿ - ಆದರೆ  ರಾಜನೊಬ್ಬ ತನ್ನನ್ನು ಬಲವಂತದಿಂದ ಮದುವೆಯಾಗಿದ್ದಾನೆ.  ಇದೂ ಕರ್ಮದ ಆಟವೆಂದೇ ಅವಳಿಗೆ ತೋರುತ್ತದೆ.    ವಿಚಿತ್ರ ವಿಡಂಬನೆ ವಿಧಿಯು ಬರೆದ ಹಣೆಬರಹ! ಸಂತರೇ ಹೇಳುವೆ ಕೇಳಿ, ನಾ ಕಂಡ ತರಹ ಮೃಗಕ್ಕೆ ಕೊಟ್ಟದ್ದೇಕೆ ದೊಡ್ಡ ಬಟ್ಟಲುಗಣ್ಣು ? ಅಲೆಯುತ್ತದೆ ನೋಡುತ್ತ ಒಣಕಲು ಕಾಡನ್ನು! ಕೊಕ್ಕರೆಗೆ ಕೊಟ್ಟದ್ದೇಕೆ ಉಜ್ವಲ ಬಿಳಿ ಬಣ್ಣ? ಕೋಗಿಲೆಗೆ ಬಳಿದು ಬರಿಯ ಕಪ್ಪನ್ನ! ಸಿಹಿನೀರು ತುಂಬಿ ಪುಟ್ಟ ನದಿಗಳೊಡಲಲ್ಲಿ  ತುಂಬಿದ್ದೇಕೆ  ಉಪ್ಪುನೀರು  ಕಡಲಲ್ಲಿ! ಮೂರ್ಖನ ಕೈಯಲ್ಲಿ ರಾಜ್ಯಭಾರವನಿತ್ತು ಪಂಡಿತನನ್ನಲಸುವೆ ಭಿ...

ಮುಗ್ಧ ಪ್ರಶ್ನೆಗಳು

ಇಮೇಜ್
ಮಾಸೂಮ್ (ಮುಗ್ಧ) ಹಿಂದಿಚಿತ್ರದಲ್ಲಿ ಬಳಸಿಕೊಳ್ಳಲಾದ ಈ ಹಾಡನ್ನು ಬರೆದವರು ಗುಲ್ಜಾರ್.  ಮೊದಲು ಫ್ರೆಂಚ್ ಭಾಷೆಯಲ್ಲಿ ಅನಂತರ ಇಂಗ್ಲಿಷ್ ಭಾಷೆಯಲ್ಲಿ ತಯಾರಾದ "ಮ್ಯಾನ್, ವುಮನ್ ಅಂಡ್ ಚೈಲ್ಡ್" ಚಿತ್ರದಿಂದ ಪ್ರಭಾವಿತವಾದ ಮಾಸೂಮ್ ಚಿತ್ರವನ್ನು ನಿರ್ದೇಶಿಸಿದವರು ಶೇಖರ್ ಕಪೂರ್.  ಈ ಚಿತ್ರದಲ್ಲಿ ಅನ್ಯೋನ್ಯದಿಂದ ಸಂಸಾರ ಮಾಡಿಕೊಂಡಿರುವ ಗಂಡ-ಹೆಂಡಿರ ಕಥೆ ಇದೆ (ಅಭಿನಯ - ನಸೀರುದ್ದೀನ್ ಶಾಹ್ ಮತ್ತು ಶಬಾನಾ ಆಜ್ಮಿ).  ಇವರಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು.  ಈ ಮಕ್ಕಳು ಹಾಡುವ "ಲಕಡೀ ಕೀ ಕಾಠೀ" ಹಾಡನ್ನು  ನೀವು ಕೇಳಿರಬಹುದು. ಇವರೆಲ್ಲರ ಸುಂದರ ಜೀವನದಲ್ಲಿ ಒಮ್ಮೆಲೇ ಬಿರುಗಾಳಿ ಬೀಸುತ್ತದೆ. ಗಂಡ ಹಿಂದೆ ಒಮ್ಮೆ ಜೀವನದಲ್ಲಿ ಎಡವಿದ್ದಾನೆ - ಅವನ ಹಳೆಯ ಸಂಬಂಧದಿಂದ ಅವನಿಗೊಬ್ಬ ಮಗನಿದ್ದಾನೆ ಎಂದು ಅವನಿಗೇ ತಿಳಿದಿಲ್ಲ.  ಇದ್ದಕ್ಕಿದ್ದಂತೆ ಅವನಿಗೊಂದು ಪತ್ರ ಬರುತ್ತದೆ. ಅವನ ಹಿಂದಿನ ಗೆಳತಿ ಈ ವಿಷಯ ತಿಳಿಸಿ ತಾನು ಸಾವಿನ ಅಂಚಿನಲ್ಲಿದ್ದೇನೆಂದು ಬರೆದಿದ್ದಾಳೆ. ತನ್ನ ಮಗನನ್ನು ಅವನು ಕರೆದುಕೊಂಡು ಬರುತ್ತಾನೆ.  ಅವನ ಹೆಂಡತಿ-ಮಕ್ಕಳಿಗೆ ಇದರಿಂದ ಆಘಾತವಾಗುತ್ತದೆ. ಮುದ್ದಾದ ಮಗುವನ್ನು ಪ್ರೀತಿಸಬೇಕೋ ದ್ವೇಷಿಸಬೇಕೋ ತಿಳಿಯದೆ ಹೆಂಡತಿ ತೊಳಲಾಡುತ್ತಾಳೆ. ಗಂಡನೂ ಅಪರಾಧೀ ಪ್ರಜ್ಞೆಯಿಂದ ತೊಳಲಾಡುತ್ತಾನೆ. ತಮ್ಮ ಬದುಕಿನಲ್ಲಿ ಒಮ್ಮೆಲೇ ಪ್ರವೇಶಿಸಿದ...

ಅರಳುತ್ತವೆ ಒಮ್ಮೊಮ್ಮೆ ನಗುವ ಬಿಡಿಹೂವು

ಇಮೇಜ್
ಮೂಲ ಉರ್ದು - ನಕ್ಷ್ ಲಾಲ್ ಪುರಿ ಕನ್ನಡಕ್ಕೆ - ಸಿ ಪಿ ರವಿಕುಮಾರ್ "ಅಹ್ಲ್-ಎ-ದಿಲ್ ಯೂಂ ಹೀ ನಿಭಾ ಲೇತೇ ಹೈನ್" ಎಂಬ ಗಜಲ್ ಬರೆದವರು ನಕ್ಷ್ ಲಾಲ್ ಪುರಿ.  ಇದನ್ನು ದರ್ದ್ ಎಂಬ ಹಿಂದಿ ಚಿತ್ರದಲ್ಲಿ ಬಳಸಲಾಗಿದೆ. ಖಯ್ಯಾಮ್ ಅವರ ಸಂಗೀತ ನಿರ್ದೇಶನದಲ್ಲಿ ಈ ಗೀತೆಯನ್ನು ಇಬ್ಬರು ಗಾಯಕರು ಪ್ರತ್ಯೇಕವಾಗಿ ಹಾಡಿದ್ದಾರೆ - ಭೂಪೇಂದ್ರ ಮತ್ತು ಲತಾ ಮಂಗೇಶ್ಕರ್. ಎರಡೂ ಅವತರಣಿಕೆಗಳು ಮನಮುಟ್ಟುವಂತಿವೆ. ಇಂಟರ್ನೆಟ್ ಮೇಲೆ ಸಿಕ್ಕುತ್ತವೆ - ನೀವು ಕೇಳಬಹುದು. ಮನಸ್ಸಿನ ಆಳದಲ್ಲಿ ನೋವನ್ನು ಇಟ್ಟುಕೊಂಡೂ ಮೇಲೆ ನಗುವಿನ ಸೋಗು ಹಾಕಿಕೊಂಡು ಜೀವನ ನಡೆಸುವ ಜೀವಿಯ ಆತ್ಮವನ್ನು ಈ ಹಾಡು ಧ್ವನಿಸುತ್ತದೆ.    ಹೇಗೋ ನಿಭಾಯಿಸುವೆ ಹಾಳು ಮನಸನ್ನು ಎದೆಯೊಳಗೆ ಬಚ್ಚಿಟ್ಟು ಎದೆಯ ನೋವನ್ನು ಉತ್ಸವಕ್ಕೆಂದು ಬೇಡಿದಾಗ ಎದೆ ಬೆಳಕು ಹಚ್ಚಿಡುವೆನು ನೆನಪುಗಳ ದೀಪವನ್ನು ಸುಡುವ ಋತುವಿನಲ್ಲೂ ಈ ಹುಚ್ಚು ಮನದಲ್ಲಿ ಅರಳುತ್ತವೆ ಒಮ್ಮೊಮ್ಮೆ ನಗುವ ಬಿಡಿಹೂವು ನನ್ನ ಕಣ್ಣನ್ನೇ ಮಾಡಿಕೊಳ್ಳುತ್ತ ನಾಲಗೆ ಹೇಳಿಕೊಳ್ಳುತ್ತೇನೆ ಎಷ್ಟೋ ಹಳೆಯ ಕತೆಯನ್ನು ಪ್ರೀತಿಗಾಗಿ ಬಾಳುತ್ತಾರಲ್ಲ ಅವರು ಹೀಗೇ ಅಳಿಸಿಬಿಡುತ್ತಾರೆ ತಮ್ಮ ಅಸ್ತಿತ್ವವನ್ನು ಸಿಕ್ಕಿದ್ದು ಗಾಯಗಳು, ಇರಲಿ, ಗಾಯಗಳನ್ನೇ ಹೂವೆಂದು ಮುಂದೊಡ್ಡಿ ತುಂಬುವೆ ಸೆರಗನ್ನು ಪ್ರೀತಿಸಿದವರು ಹೀಗೇ, ತಮ್ಮ ಹೆಜ್ಜೆಗಳಿಗಾಗಿ ಕೆಳಗೆ ಬಗ್ಗಿಸಿಕೊಳ್ಳುತ್ತಾರೆ ಗಗ...