ಅರಳುತ್ತವೆ ಒಮ್ಮೊಮ್ಮೆ ನಗುವ ಬಿಡಿಹೂವು
ಮೂಲ ಉರ್ದು - ನಕ್ಷ್ ಲಾಲ್ ಪುರಿ
ಹೇಗೋ ನಿಭಾಯಿಸುವೆ ಹಾಳು ಮನಸನ್ನು
ಎದೆಯೊಳಗೆ ಬಚ್ಚಿಟ್ಟು ಎದೆಯ ನೋವನ್ನು
ಉತ್ಸವಕ್ಕೆಂದು ಬೇಡಿದಾಗ ಎದೆ ಬೆಳಕು
ಹಚ್ಚಿಡುವೆನು ನೆನಪುಗಳ ದೀಪವನ್ನು
ಸುಡುವ ಋತುವಿನಲ್ಲೂ ಈ ಹುಚ್ಚು ಮನದಲ್ಲಿ
ಅರಳುತ್ತವೆ ಒಮ್ಮೊಮ್ಮೆ ನಗುವ ಬಿಡಿಹೂವು
ನನ್ನ ಕಣ್ಣನ್ನೇ ಮಾಡಿಕೊಳ್ಳುತ್ತ ನಾಲಗೆ
ಹೇಳಿಕೊಳ್ಳುತ್ತೇನೆ ಎಷ್ಟೋ ಹಳೆಯ ಕತೆಯನ್ನು
ಪ್ರೀತಿಗಾಗಿ ಬಾಳುತ್ತಾರಲ್ಲ ಅವರು ಹೀಗೇ
ಅಳಿಸಿಬಿಡುತ್ತಾರೆ ತಮ್ಮ ಅಸ್ತಿತ್ವವನ್ನು
ಸಿಕ್ಕಿದ್ದು ಗಾಯಗಳು, ಇರಲಿ, ಗಾಯಗಳನ್ನೇ
ಹೂವೆಂದು ಮುಂದೊಡ್ಡಿ ತುಂಬುವೆ ಸೆರಗನ್ನು
ಪ್ರೀತಿಸಿದವರು ಹೀಗೇ, ತಮ್ಮ ಹೆಜ್ಜೆಗಳಿಗಾಗಿ
ಕೆಳಗೆ ಬಗ್ಗಿಸಿಕೊಳ್ಳುತ್ತಾರೆ ಗಗನವನ್ನು
ಕನ್ನಡಕ್ಕೆ - ಸಿ ಪಿ ರವಿಕುಮಾರ್
"ಅಹ್ಲ್-ಎ-ದಿಲ್ ಯೂಂ ಹೀ ನಿಭಾ ಲೇತೇ ಹೈನ್" ಎಂಬ ಗಜಲ್ ಬರೆದವರು ನಕ್ಷ್ ಲಾಲ್ ಪುರಿ. ಇದನ್ನು ದರ್ದ್ ಎಂಬ ಹಿಂದಿ ಚಿತ್ರದಲ್ಲಿ ಬಳಸಲಾಗಿದೆ. ಖಯ್ಯಾಮ್ ಅವರ ಸಂಗೀತ ನಿರ್ದೇಶನದಲ್ಲಿ ಈ ಗೀತೆಯನ್ನು ಇಬ್ಬರು ಗಾಯಕರು ಪ್ರತ್ಯೇಕವಾಗಿ ಹಾಡಿದ್ದಾರೆ - ಭೂಪೇಂದ್ರ ಮತ್ತು ಲತಾ ಮಂಗೇಶ್ಕರ್. ಎರಡೂ ಅವತರಣಿಕೆಗಳು ಮನಮುಟ್ಟುವಂತಿವೆ. ಇಂಟರ್ನೆಟ್ ಮೇಲೆ ಸಿಕ್ಕುತ್ತವೆ - ನೀವು ಕೇಳಬಹುದು. ಮನಸ್ಸಿನ ಆಳದಲ್ಲಿ ನೋವನ್ನು ಇಟ್ಟುಕೊಂಡೂ ಮೇಲೆ ನಗುವಿನ ಸೋಗು ಹಾಕಿಕೊಂಡು ಜೀವನ ನಡೆಸುವ ಜೀವಿಯ ಆತ್ಮವನ್ನು ಈ ಹಾಡು ಧ್ವನಿಸುತ್ತದೆ.
ಹೇಗೋ ನಿಭಾಯಿಸುವೆ ಹಾಳು ಮನಸನ್ನು
ಎದೆಯೊಳಗೆ ಬಚ್ಚಿಟ್ಟು ಎದೆಯ ನೋವನ್ನು
ಉತ್ಸವಕ್ಕೆಂದು ಬೇಡಿದಾಗ ಎದೆ ಬೆಳಕು
ಹಚ್ಚಿಡುವೆನು ನೆನಪುಗಳ ದೀಪವನ್ನು
ಸುಡುವ ಋತುವಿನಲ್ಲೂ ಈ ಹುಚ್ಚು ಮನದಲ್ಲಿ
ಅರಳುತ್ತವೆ ಒಮ್ಮೊಮ್ಮೆ ನಗುವ ಬಿಡಿಹೂವು
ನನ್ನ ಕಣ್ಣನ್ನೇ ಮಾಡಿಕೊಳ್ಳುತ್ತ ನಾಲಗೆ
ಹೇಳಿಕೊಳ್ಳುತ್ತೇನೆ ಎಷ್ಟೋ ಹಳೆಯ ಕತೆಯನ್ನು
ಪ್ರೀತಿಗಾಗಿ ಬಾಳುತ್ತಾರಲ್ಲ ಅವರು ಹೀಗೇ
ಅಳಿಸಿಬಿಡುತ್ತಾರೆ ತಮ್ಮ ಅಸ್ತಿತ್ವವನ್ನು
ಸಿಕ್ಕಿದ್ದು ಗಾಯಗಳು, ಇರಲಿ, ಗಾಯಗಳನ್ನೇ
ಹೂವೆಂದು ಮುಂದೊಡ್ಡಿ ತುಂಬುವೆ ಸೆರಗನ್ನು
ಪ್ರೀತಿಸಿದವರು ಹೀಗೇ, ತಮ್ಮ ಹೆಜ್ಜೆಗಳಿಗಾಗಿ
ಕೆಳಗೆ ಬಗ್ಗಿಸಿಕೊಳ್ಳುತ್ತಾರೆ ಗಗನವನ್ನು
अहल-ए-दिल यूँ भी निभा लेते हैं
ಪ್ರತ್ಯುತ್ತರಅಳಿಸಿदर्द सीने में छुपा लेते हैं
दिल की महफ़िल में उजालों के लिये
याद की शम्मा जला लेते हैं
दर्द सीने में...
जलते मौसम में भी ये दीवाने
कुछ हसीं फूल खिला लेते हैं
दर्द सीने में...
अपनी आँखों को बनाकर ये ज़ुबाँ
कितने अफ़साने सुना लेते हैं
दर्द सीने में...
जिनको जीना है मोहब्बत के लिये
अपनी हस्ती को मिटा लेते हैं
दर्द सीने में...