ಎದೆಯ ಬಡಿತದ ಕಾರಣವು ನೆನಪಾಯಿತು
ಮೂಲ ಉರ್ದೂ ಗಜಲ್ - ನಾಸಿರ್ ಕಾಜ್ಮಿ
ಕನ್ನಡಕ್ಕೆ - ಸಿ ಪಿ ರವಿಕುಮಾರ್
ಎದೆಯ ಬಡಿತದ ಕಾರಣವು ನೆನಪಾಯಿತು
ನಿನ್ನ ನೆನಪು ಅದೆಂದು ಇಂದು ನೆನಪಾಯಿತು
ಸಾವರಿಸಿಕೊಳ್ಳುವುದು ಕಷ್ಟವಾದಾಗ ಗೆಳೆಯಾ
ವೈಚಿತ್ರ್ಯವೆಂಬಂತೆ ನಿನ್ನ ನೆನಪಾಯಿತು
ಎದೆಯ ತಲ್ಲಣ ಹೇಳಿಕೊಳ್ಳಬಹುದಾಗಿತ್ತು ನಾನೂ
ಅವರು ಮರೆಯಾದ ಮೇಲೆ ನೆನಪಾಯಿತು
ದಿನವನ್ನು ಹೇಗೋ ದೂಡಿದೆ ಬಹಳ ಕಷ್ಟದಿಂದ
ಬಳಿಕ ನಿನ್ನ ರಾತ್ರಿಯ ವಾದ ನೆನಪಾಯಿತು
ಉಪವನದ ನೆರಳಲ್ಲಿ ಕುಳಿತು ಓ ನಾಸಿರ್
ಕಣ್ಣೀರು ಸುರಿಸಿದ್ದೇಕೆಂದರೆ ಅವನ ನೆನಪಾಯಿತು
ಕನ್ನಡಕ್ಕೆ - ಸಿ ಪಿ ರವಿಕುಮಾರ್
ನಾಸಿರ್ ಕಾಜ್ಮಿ ಅವರು ಪಾಕೀಸ್ತಾನದ ಉರ್ದೂ ಕವಿ. ಅವರ ಈ ಗಜಲ್ (ದಿಲ್ ಧಡಕನೇ ಕಾ ಸಬಾಬ್ ಯಾದ್ ಆಯಾ) ಪ್ರಸಿದ್ಧ ಪಾಕೀಸ್ತಾನೀ ಗಾಯಕಿ ನೂರ್ ಜಹಾನ್ ಹಾಡಿದ್ದಾರೆ. ಹೃದಯಸ್ಪರ್ಶಿಯಾದ ಗಾಯನ. ಇದೇ ಗಜಲ್ ಅನಂತರ ಆಶಾ ಭೋಂಸ್ಲೆ ಕೂಡಾ ಹಾಡಿದ್ದಾರೆ. ಈ ಗಜಲಿನಲ್ಲಿ ತನ್ನ ಗೆಳೆಯನನ್ನು (ಗೆಳತಿಯನ್ನು) ನೆನೆದು ದುಃಖಿಸುತ್ತಿರುವ ಒಬ್ಬಳ(ನ) ಅಳಲು ಬಿಂಬಿತವಾಗಿದೆ. ಯಾವುದೋ ಕಾರಣಕ್ಕಾಗಿ ಈ ಗೆಳೆಯ ದೂರನಾಗಿದ್ದಾನೆ. ಅವನ ನೆನಪಿನಲ್ಲೇ ಜೀವನ ಕಳೆಯುತ್ತಿದೆ - ವಿಚಿತ್ರವೆಂದರೆ ಸಾವರಿಸಿಕೊಳ್ಳಲು ಕಷ್ಟವಾದಾಗ ಊರುಗೋಲಾಗುವ ನೆನಪೇ ಉಪವನದ ನೆರಳಿನಲ್ಲಿ ನೆನೆಯುತ್ತಿರುವವರ ಕಣ್ಣೀರಿಗೂ ಕಾರಣವಾಗುತ್ತದೆ. ಭಾರತ ಮತ್ತು ಪಾಕೀಸ್ತಾನ ಎಂದು ಎರಡು ಭಾಗಗಳಾದಾಗ ವಿಭಿನ್ನ ದೇಶಗಳಲ್ಲಿ ಹಂಚಿಹೋದ ಬಂಧು-ಮಿತ್ರರು ಹೀಗೇ ಒಬ್ಬರನ್ನೊಬ್ಬರು ನೆನೆದು ದುಃಖಿಸುತ್ತಿರಬಹುದು.
ಎದೆಯ ಬಡಿತದ ಕಾರಣವು ನೆನಪಾಯಿತು
ನಿನ್ನ ನೆನಪು ಅದೆಂದು ಇಂದು ನೆನಪಾಯಿತು
ಸಾವರಿಸಿಕೊಳ್ಳುವುದು ಕಷ್ಟವಾದಾಗ ಗೆಳೆಯಾ
ವೈಚಿತ್ರ್ಯವೆಂಬಂತೆ ನಿನ್ನ ನೆನಪಾಯಿತು
ಎದೆಯ ತಲ್ಲಣ ಹೇಳಿಕೊಳ್ಳಬಹುದಾಗಿತ್ತು ನಾನೂ
ಅವರು ಮರೆಯಾದ ಮೇಲೆ ನೆನಪಾಯಿತು
ದಿನವನ್ನು ಹೇಗೋ ದೂಡಿದೆ ಬಹಳ ಕಷ್ಟದಿಂದ
ಬಳಿಕ ನಿನ್ನ ರಾತ್ರಿಯ ವಾದ ನೆನಪಾಯಿತು
ಉಪವನದ ನೆರಳಲ್ಲಿ ಕುಳಿತು ಓ ನಾಸಿರ್
ಕಣ್ಣೀರು ಸುರಿಸಿದ್ದೇಕೆಂದರೆ ಅವನ ನೆನಪಾಯಿತು
ಪ್ರತ್ಯುತ್ತರಅಳಿಸಿदिल धड़कने का सबब याद आया
वो तेरी याद थी अब याद आया
आज मुश्किल था संभलना ऐ दोस्त
तू मुसिबत में अजब याद आया
हाल-ए-दिल हम भी सुनाते लेकिन
जब वो रुखसत हुए तो याद आया
दिन गुजारा था बड़ी मुश्किल से
फिर तेरा वादा-ए-शब याद आया
बैठ कर साया-ए-गुल में नासिर
हम बहोत रोये वो जब याद आया
Mashallah 😍
ಪ್ರತ್ಯುತ್ತರಅಳಿಸಿ