ಕಣ್ಣುಗಳು ಸಾವಿರಾರು ಮನದ ಕನ್ನಡಿಗೆ


ಮೂಲ - ಸಾಹಿರ್ ಲುಧಿಯಾನ್ವಿ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

ಇದೊಂದು ಭಕ್ತಿಗೀತೆ. ಕಾಜಲ್ ಎಂಬ ಹಿಂದಿ ಚಿತ್ರದಲ್ಲಿ ಇದನ್ನು ಬಳಸಿಕೊಳ್ಳಲಾಗಿದೆ.  ಮುಸಲ್ಮಾನ ಧರ್ಮೀಯರಾದ ಸಾಹಿರ್ ಲುಧಿಯಾನ್ವಿ ಈ ಭಕ್ತಿಗೀತೆಯನ್ನು ಬರೆದಿರುವುದು ವಿಶೇಷ.  "ರವಿ" ಎಂಬ ಸಂಗೀತ ನಿರ್ದೇಶಕರ ಮಾರ್ಗದರ್ಶನದಲ್ಲಿ ಈ ಗೀತೆಯನ್ನು ಆಶಾ ಭೋಂಸ್ಲೆ ಹಾಡಿದ್ದಾರೆ. ಈ ಗೀತೆಯಲ್ಲಿ ಮನುಷ್ಯ ಮತ್ತು ಭಗವಂತನ ನಡುವೆ ನಡೆದ ಒಂದು ಸಂವಾದವನ್ನು ಕುರಿತು ಕವಿ ಬರೆದಿದ್ದಾರೆ.  "ಪ್ರಭೂ, ನಿನ್ನನ್ನು ನಾನು ಪಡೆಯುವುದು ಹೇಗೆ?" ಎಂದು ಮನುಷ್ಯ ಭಗವಂತನನ್ನು ಕೇಳಿದಾಗ ಭಗವಂತನು "ನಿನ್ನ ಮನಸ್ಸಿನಲ್ಲಿ ಹುಡುಕಿದರೆ ಸಿಕ್ಕುತ್ತೇನೆ" ಎಂದು ಉತ್ತರಿಸುತ್ತಾನೆ. "ನನ್ನನೆಲ್ಲಿ ಅರಸುವೆ?" ಎಂಬ ಕಬೀರನ ಒಂದು ಭಕ್ತಿಗೀತೆ ನೆನಪಾಗುತ್ತದೆ.  "ತೋರಾ ಮನ್ ದರ್ಪಣ್ ಕಹಲಾಯೇ" ಎಂದು ಪ್ರಾರಂಭವಾಗುವ ಈ ಗೀತೆಯ ಧ್ವನಿಮುದ್ರಿಕೆ ನಿಮಗೆ ಅಂತರಜಾಲದಲ್ಲಿ ಸಿಕ್ಕುತ್ತದೆ. ಈಗ ಕವಿತೆಯ ಅನುವಾದವನ್ನು ಓದಿ. 

 
ಹೇಗೆ ಪಡೆಯಲಿ ನಿನ್ನನ್ನು ಪ್ರಭುವೇ
ಎಂದು ಅವಲತ್ತುಕೊಂಡಾಗ ಪ್ರಾಣಿ
ನಿನ್ನ ಮನದಲ್ಲಿ ಹುಡುಕಿದರೆ ಸಿಕ್ಕುವೆನು
ಎಂದು ಮಾರ್ನುಡಿಯಿತು ಪ್ರಭುವಾಣಿ 
ಅರಿತುಕೋ ನಿನ್ನ ಮನಸ್ಸನ್ನು
ಸೃಷ್ಟಿಸಿದ್ದೇನೆ ಕನ್ನಡಿಯ ಹಾಗೆ
ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ 
ನೋಡುತ್ತದೆ ಮತ್ತು ತೋರುತ್ತದೆ 
ನಿನ್ನ ಮನಸ್ಸೇ ದೇವರು-ದೇವತೆಎಲ್ಲವೂ 
ದೊಡ್ದದೊಂದೂ ಇಲ್ಲ ಮನವನ್ನು ಬಿಟ್ಟು
ಮನವೆಂಬ ಬೆಳಕು ಹರಡಿದಾಗಲೇ 
ಬೆಳಗುವುದು ಸುತ್ತಲೂ ಜಗತ್ತು
ಹೊಳೆವ ಕನ್ನಡಿಯ ಮೇಲೆ ಓ ಮಾನವ,
ನೋಡಿಕೋ ಎಂದೂ ಧೂಳು ಸೇರದಂತೆ! 
ಸುಖದ ಮೊಗ್ಗುಗಳು, ದುಃಖದ ಮುಳ್ಳು
ಹುಟ್ಟುವುದು ಎಲ್ಲವೂ ಮನದಿಂದಲೇ
ಮುಚ್ಚಿಡಲಾಗದು ಮನದಿಂದ ಏನನ್ನೂ
ಕಣ್ಣುಗಳು ಸಾವಿರಾರು ಮನದ ಕನ್ನಡಿಗೆ
ತಪ್ಪಿಸಿಕೊಳ್ಳಬಹುದು ಜಗದಿಂದ ಬೇಕಾದರೆ
ಮನದಿಂದ ತಪ್ಪಿಸಿಕೊಳ್ಳಲಾರೆ
ತನುವಿನ ಸಂಪತ್ತು ಹಿಂಜರಿವ ನೆರಳಂತೆ
ಬೆಲೆ ಕಟ್ಟಲಾರದ್ದು ಮನದ ಸಂಪತ್ತು
ತನುವಿಗಾಗಿ ಮನದ ಬೆಲೆಯನ್ನು ಎಂದೂ 
ಮಾಡದಿರು ಮಣ್ಣುಪಾಲು ದಯವಿಟ್ಟು
ತಿಳಿಯದೇ ಹೋದರೆ ಮನದ ಬೆಲೆಯನ್ನು
ಕಳೆದುಕೊಂಡಂತೆ ಜನ್ಮವೆಂಬ  ಮಾಣಿಕ್ಯವನ್ನು 

ಕಾಮೆಂಟ್‌ಗಳು

  1. (Original poem by Sahir Ludhiyanwi)
    प्रानी अपने प्रभू से पूछे किस बिधि पाऊँ तोहे
    प्रभू कहे तू मन को पा ले पा जाएगा मोहे

    तोरा मन दर्पण कहलाए
    भले, बुरे, सारे कर्मों को देखे और दिखाए

    मन ही देवता, मन ही ईश्वर
    मन से बड़ा ना कोई
    मन उजियारा, जब जब फैले
    जग उजियारा होए
    इस उजले दर्पन पर प्राणी, धूल ना ज़मने पाए

    सुख की कलियाँ, दुःख के काँटे
    मन सब का आधार
    मन से कोई बात छूपे ना
    मन के नैन हजार
    जग से चाहे भाग ले कोई, मन से भाग ना पाए

    तन की दौलत ढ़लती छाया
    मन का धन अनमोल
    तन के कारन मन के धन को मत माटी में रोल
    मन की कदर भूलानेवाला हीरा जनम गँवाए

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)