ಯಾರು ದಲಿತರು?

ಸಿ ಪಿ ರವಿಕುಮಾರ್ 

Animals by Nightrosi

ಈಗಾಗಲೇ ಜಗತ್ತಿನ ಜನಸಂಖ್ಯೆ ಏಳು ನೂರು ಕೋಟಿಯ ಸಮೀಪವಾಗಿದೆ. ಇದರಲ್ಲಿ ಭಾರತೀಯರೇ ೧೨೫ ಕೋಟಿ ಇದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಜನಸಂಖ್ಯೆಯ ದೇಶವಾಗುವತ್ತ ಭಾರತ ದಾಪುಗಾಲು ಹಾಕುತ್ತಿದೆ. ಮನುಷ್ಯರಲ್ಲದೆ ಮೃಗಗಳಿಗೂ ಆಹಾರ-ನೀರು ಬೇಕು ಎನ್ನುವುದನ್ನು ಮರೆಯಬೇಡಿ. ನೀರಿಗಾಗಿ ಈಗಾಗಲೇ ಹೋರಾಟಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ನೀರನ್ನು ಅತ್ಯಂತ ಕಡಿಮೆ ಉಪಯೋಗಿಸಿ ಬೆಳೆಯುವ ಆಹಾರಗಳು ನಮಗೆ ಮುಖ್ಯವಾಗಬೇಕು ಎನ್ನುವುದು ಎಲ್ಲರ ಹಿತದ ದೃಷ್ಟಿಯಿಂದ ಸರಿಯಾದ ಮಾತು. ನೀರಿನ ಬಳಕೆಯಲ್ಲಿ ಮಾಂಸಾಹಾರ ಉತ್ಪಾದನೆಯದೇ ಹಿರಿಯ ಪಾಲು. ಹೀಗಾಗಿ ಸಸ್ಯಾಹಾರ ಬಳಸಿ ಎಂದು ವಿಜ್ಞಾನಿಗಳು ಕೂಗುತ್ತಲೇ ಇದ್ದಾರೆ. ಕೆಳಗೆ ನಾನು ಹಿಂದೆ ಬರೆದ ಲೇಖನವೊಂದನ್ನು ಕೊಟ್ಟಿದ್ದೇನೆ.

ನೆನಪಿರಲಿ - ಯಾವುದೇ ವಸ್ತು ಸೀಮಿತವಾಗಿದ್ದಾಗ ಅದನ್ನು ಜೋಕೆಯಿಂದ ಬಳಸುವುದು ಎಲ್ಲರ ಹಿತ. "ಇಲ್ಲ, ನಾನು ನನಗೆ ಹೇಗೆ ಬೇಕೋ ಬಳಸುತ್ತೇನೆ" ಎಂದು ಹೊರಡುವುದು ಕೇವಲ ಕೆಲವರಿಗೆ ಹಿತ - ಹೀಗಾದಾಗ ಆರ್ಥಿಕವಾಗಿ-ದೈಹಿಕವಾಗಿ ದುರ್ಬಲರಾದವರು ("ದಲಿತರು") ನಾಶವಾಗದೇ ಉಳಿಯುತ್ತಾರಾ ಯೋಚಿಸಿ. ಹೀಗಿರುವಾಗ ಜನರನ್ನು ತಪ್ಪು ಹಾದಿಗೆ ಎಳೆದು ಅವರಿಗೆ ದನದ ಮಾಂಸವನ್ನೂ ತಿನ್ನಿ ಎಂದು ಬೋಧಿಸಿದವರಿಗೆ ಅಕಾಡೆಮಿ ಪ್ರಶಸ್ತಿಯ ಗೌರವ ಸಿಕ್ಕಿದ್ದು ದುರ್ದೈವದ ವಿಷಯ.

ದಲಿತ ಎಂದರೆ ಜಾತಿಯಲ್ಲ, ಧರ್ಮವಲ್ಲ.  ಮಾತು ಬಾರದ ಮೃಗಗಳು ನಿಜವಾದ ದಲಿತವರ್ಗ.  ಮನುಷ್ಯನ ದಬ್ಬಾಳಿಕೆಗೆ ನಲುಗುತ್ತಿರುವ ಕಾಡು-ನೆಲ-ಜಲಗಳು ಇಂದು ದಲಿತವರ್ಗ. ದೈಹಿಕ/ಆರ್ಥಿಕವಾಗಿ ದುರ್ಬಲರಾದವರು ದಲಿತವರ್ಗ. ಮನುಷ್ಯನಿಗೆ ಬಿಟ್ಟರೆ ಅವನು ಮೃಗಗಳನ್ನು ಸರ್ವನಾಶ ಮಾಡುತ್ತಾನೆ ಎಂಬ ಮುಂದಾಲೋಚನೆಯಿಂದಲೋ ಏನೋ ಕೆಲವು ಧರ್ಮಗಳಲ್ಲಿ ಪ್ರಾಣಿಗಳಿಗೆ ದೇವರ ಸ್ಥಾನ ನೀಡಲಾಗಿದೆ. ಜಲ-ನೆಲ-ಬೆಟ್ಟ-ಗುಡ್ಡ ಎಲ್ಲವನ್ನೂ  ದೇವರೆಂದು ಬಗೆಯಲಾಗಿದೆ. ಇದು ನಮ್ಮ ಪರಿಸರವನ್ನು ಮತ್ತು ತನ್ಮೂಲಕ ನಮ್ಮನ್ನು ನಾವೇ ಕಾಪಾಡಿಕೊಳ್ಳುವ ಜಾಣ್ಮೆ. 


 ಯಾವುದು/ಯಾರು ದಲಿತರ ಪರ ಎನ್ನುವುದನ್ನು ನೀವೇ ಯೋಚಿಸಿ ನಿರ್ಧರಿಸಿ. ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳಿ - ಆದರೆ ಅವರು ತಮ್ಮ ಸ್ವಾರ್ಥಕ್ಕಾಗಿ ಕೂಡಾ ಹೇಳುತ್ತಿರಬಹುದು ಎನ್ನುವ ಎಚ್ಚರ ಇರಲಿ. ನಮಗೆ ದೇವರು ಕೊಟ್ಟ ಬುದ್ಧಿ ಉಪಯೋಗಿಸಿದಾಗಲೇ ನಾವು "ಬುದ್ಧಿಜೀವಿ"ಗಳಾಗುತ್ತೇವೆ.




ಕಾಮೆಂಟ್‌ಗಳು

  1. You can sign this petition to record your opposition to the selection of a man who propagated beef and meat consumption for the award of Karnataka Sahitya Academy.
    https://www.change.org/p/president-of-karnataka-sahitya-academy-chief-minister-of-karnataka-india-karnataka-sahitya-academy-awardees-list-must-be-reconsidered-for-changes-and-rectification/share?after_sign_exp=default&just_signed=true

    ಪ್ರತ್ಯುತ್ತರಅಳಿಸಿ
  2. ಬಹಳ ಒಳ್ಳೆಯ ಲೇಖನ. Global warming ಗೆ ಮಾಂಸಾಹಾರದ ಕೊಡುಗೆ ಬಹಳ.

    ಪ್ರತ್ಯುತ್ತರಅಳಿಸಿ
  3. ಈ ಪ್ರತಿಕ್ರಿಯೆ ನನಗೆ ಕಳಿಸಿದ್ದು ಶ್ರೀ ಸೀತಾರಾಂ:

    "ಯಾರು ದಲಿತರು?" ಮತ್ತು ಅದರೊಡನಿರುವ ’ಶುದ್ಧ ಶಾಕಾಹಾರ" ಎರಡೂ ಚಿಂತನೆಗೆ ಒಳ್ಳೆಯ ಕಾಯಿಪಾಳ್ಯ - sorry, ಕಾಯಿಪಲ್ಯ - ಊಟವನ್ನು ಒದಗಿಸುತ್ತವೆ. ಶ್ರೀಮಾನ್ ವೇಗನ್ ಅವರ (ರೇಗನ್ ಅವರ ದಾಯಾದಿ; ಆದರೆ ರೇಗುವ ಜಾತಿಯವರಲ್ಲ)ಸಸ್ಯಾಗ್ರಹವು ಬೇಗಬೇಗನೇ ಹರಡುತ್ತಿರುವುದರಿಂದಾಗಿ, ಬರುವ ದಿನಗಳಲ್ಲಿ "ಮಾಂಸಿಕ ರೋಗಗಳು" ಕಡಿಮೆಯಾಗಿ, ಜನರು ಕಡೆಗೂ ಸಸ್ಯಾಂಶವನ್ನು ಅರಿಯುವಂತೆ ಆಗಬಹುದು. ಯಾರಿಗೆ ಗೊತ್ತು, ವೇಗನ್ ವೇಗದಲ್ಲಿ "ಅರ್ಬುದ" ಹುಲಿಯೂ "ಪುಣ್ಯಕೋಟಿ" ಹಸು ಆಗಿಬಿಡಬಹುದು?! "ದಂಡುಪಾಳ್ಯ" ಜೀವಿಗಳೂ "ದಂಟುಪಲ್ಯ" ತಿಂದು, "ಶಾಂತಿದಳ" ಆಗಿ ಮಾರ್ಪಾಡಾಗಬಹುದು! ಹಾಗೇನಾದರೂ ಆದಲ್ಲಿ, ಅವರಲ್ಲಿ ಪ್ರತಿಯೊಬ್ಬರಿಗೂ ಒಂದು "ಸಸ್ಯಾಹಾರ ಮಂದಿರದಲ್ಲಿ" "ಸಸ್ಯ-ಹಾರ" ಅಥವಾ "ಫಲ-ಹಾರ" ಹಾಕಿ ಮರ್ಯಾದೆ ಮಾಡಬಹುದು.
    "ದಲಿತ" ಎಂಬುದು "ದಲ" ಎಂಬುದರಿಂದ ಬಂದಿದ್ದು, "split" ಎಂಬ ಅರ್ಥವನ್ನು ಕೊಡುವುದಾದ್ದರಿಂದ, ದ್ವಿದಳಧಾನ್ಯಗಳನ್ನು ತಿನ್ನುವವರೆಲ್ಲರೂ "ದಳಿತ" ವರ್ಗದವರೇ! ಮೂಲ ರಾಜಕೀಯ ಪಕ್ಷಗಳನ್ನು ಜನತಾದಳ-ಲೋಕದಳ-ಕ್ರಾಂತಿದಳ ಇತ್ಯಾದಿ ದಳ-ದಳವಾಗಿ ಒಡೆಯುತ್ತಿರುವವರೂ ಥಳಥಳಿಸುವ "ದಳಿತ" ವರ್ಗದವರೇ! ಈಗೇನಿದ್ದರೂ, ಇವರಿಗೆ "ಧಾನ್ಯ ಧ್ಯಾನ" ಎಷ್ಟರ ಮಟ್ಟಿಗಿದೆ ಎಂಬ ಬಗ್ಗೆ ಒಂದು ಸಮೀಕ್ಷೆ ಮಾಡಿ, ಅಂಥವರಿಗೆ ವಿದ್ಯೆ-ಉದ್ಯೋಗಗಳಲ್ಲಿ ಆದ್ಯತೆ ನೀಡುವ ಸಲುವಾಗಿ ಒಂದು "ದಳಿತ ಸಹಸ್ರನಾಮ" ರಚಿಸಬೇಕಿದೆ ಅಷ್ಟೆ. ಇದಕ್ಕೆ Chairman ಆಗಲು "ದಲಿತ್ ಮೋದಿ" ಸಿದ್ಧರಿದ್ದಾರೆಯೇ, ಅವರಿಗೆ ಯಾವ ದ್ವಿದಳ-ತ್ರಿದಳ ಧಾನ್ಯ ಇಷ್ಟ ಎಂಬುದನ್ನು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳುವುದು ಉಪಯುಕ್ತವಾಗಬಹುದು. [ಮಾಂಸ vs. ಸಸ್ಯ ಮಾತನಾಡಲು ಇಂದಿನ "ಬಕ್ರೀದ್" ಹಬ್ಬಕ್ಕಿಂತ ಉತ್ತಮ ಅವಕಾಶ ಸಿಗಲಾರದು. "ಸೌದಿ" ಒಂದರಲ್ಲೇ ಲಕ್ಷಾಂತರ ಕುರಿಗಳು ಇಂದು ರಕ್ತದ ಮಡುವಿನಲ್ಲಿ ಬಿದ್ದಿರುತ್ತವೆ. ಅಲ್ಲೇ, "ಕುರಿಗಳು ಸಾರ್" ಎಂಬುವಂತೆ "ದೆವ್ವಕ್ಕೆ ಕಲ್ಲು" ಹೊಡೆಯಲು ಮುನ್ನುಗ್ಗಿ ಸತ್ತ ನೂರಾರು ಭಕ್ತಾತಿರೇಕಿಗಳನ್ನು ಕಂಡು, ಅಲ್ಲಿ ಇನ್ನೂ ಉಳಿದಿರಬಹುದಾದ ಕುರಿಗಳು ಏನಂದುಕೊಂಡಿರುತ್ತವೋ!]

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)