ಸಿಗ್ನಲ್ ಮತ್ತು ನಾಯ್ಸ್

ಹಿಂದೆಂದೂ ಇಲ್ಲದಷ್ಟು ಜಾತಿ ರಾಜಕೀಯ ಈಗ ಕರ್ನಾಟಕದಲ್ಲಿ ನಡೆಯುತ್ತಿದೆ. ಇದನ್ನು ಸಾಹಿತಿಗಳು ಹುಟ್ಟುಹಾಕುತ್ತಿದ್ದಾರೆ ಎನ್ನುವುದು ಅತ್ಯಂತ ದುರದೃಷ್ಟಕರ ಸಂಗತಿ. ಇದನ್ನು ಕನ್ನಡ ಮೀಡಿಯಾ ದೊಡ್ಡದು ಮಾಡಿ ತೋರಿಸುತ್ತಿದೆ ಎನ್ನುವುದು ಇನ್ನೂ ದೊಡ್ಡ ದುರದೃಷ್ಟ. ಅನೇಕ ಯುವಕರು (ಸಾಹಿತಿಗಳು/ಇತರರು) ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರುವುದು ದುರದೃಷ್ಟ. ಇದು ಅಪಾಯಕಾರಿ. ದಾರಿಯಲ್ಲಿ ಹೋಗುತ್ತಿರುವಾಗ ಯಾರೋ ಒಬ್ಬ ಕಿರುಚಾಡಿ ಯಾರನ್ನೋ ಬೈದಾಡುತ್ತಿದ್ದರೆ ನೀವು ಅಲ್ಲೇ ನಿಂತು ಜಗಳ ನೋಡುತ್ತಾ ನಿಲ್ಲುತ್ತೀರಾ? ನಿಮ್ಮ ಕೆಲಸ ಮರೆತುಬಿಡುತ್ತೀರಾ? ನೋಡಲು ಜನ ನಿಂತಷ್ಟೂ ಅವರ ಮಾತುಗಳಿಗೆ ರಂಗೇರುತ್ತದೆ. ಈ ವಾಯರಿಸಂ ಕೊನೆಗೊಳ್ಳದಿದ್ದರೆ ಕನ್ನಡ ಹಾದಿ ತಪ್ಪುತ್ತದೆ. ಯಾರಿಗೆ ಎಷ್ಟು ಗಮನ ಕೊಡಬೇಕೋ ಅಷ್ಟೇ ಕೊಡುವುದು ಒಳಿತು. ಮುಂದಕ್ಕೆ ಹೋಗೋಣ. ಇದು ಮಕ್ಕಳ ಭವಿಷ್ಯದ ಪ್ರಶ್ನೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವರಿಗೆ ಜಾತಿ ಖಂಡಿತ ನೆರವಾಗುವುದಿಲ್ಲ. ನಿಮಗೆ ಅವರು ಹೇಳುತ್ತಿರುವುದು ಕೇಳಲು ಕಷ್ಟವಾಗುತ್ತಿದೆಯೇ? ಚಾನೆಲ್ ಬದಲಾಯಿಸಿ. ಹಿಂದೂ ದೇವತೆಗಳ ಬಗ್ಗೆ ಯಾರೋ ಕೀಳಾಗಿ ಮಾತಾಡಿದರೆ? ನೀವು ಒಳ್ಳೆಯ ದೇವರನಾಮವನ್ನು ಕೇಳಿ - ಇತರರೊಂದಿಗೂ ಹಂಚಿಕೊಳ್ಳಿ. ಸಿಗ್ನಲ್ ಮತ್ತು ನಾಯ್ಸ್ ಎಂಬ ಎರಡು ವಿಧಗಳಿವೆ - ನಾವು ಯಾಕೆ ಸದ್ದನ್ನು ದೊಡ್ಡದು ಮಾಡುತ್ತಿದ್ದೇವೆ? ನಮಗೆ ಬೇಕಾದ್ದನ್ನು ತಾನೇ ನಾವು ದೊಡ್ಡದು ಮಾಡಬೇಕು?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)