ವಿಕ್ಟರ್
ಮೂಲ ಇಂಗ್ಲಿಷ್ ಕವಿತೆ: ಡಬ್ಲ್ಯೂ.ಎಚ್. ಆಡೆನ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಈ ಜಗತ್ತನ್ನು ಹೊಕ್ಕಾಗ
ವಿಕ್ಟರ್ ಎಂಬ ಪುಟ್ಟ ಮಗು ತೊಡೆಯ ಮೇಲಿಟ್ಟುಕೊಂಡು ಅಪ್ಪ ಅಂದಿದ್ದು:
"ಕುಲದ ಹೆಸರನ್ನು ಕೆಡಿಸದಿರು ಎಂದೂ"
ಅಪ್ಪನ ಕಡೆಗೆ ನೋಡಿದನು ವಿಕ್ಟರ್
ಪಿಳಿಪಿಳಿ ತನ್ನ ಕಣ್ಣುಗಳ ಅರಳಿಸಿ
ಅಪ್ಪನೆಂದ: "ನನ್ನ ಒಬ್ಬನೇ ಮಗ ವಿಕ್ಟರ್,
ಜೀವನದಲ್ಲಿ ಎಂದಿಗೂ ನುಡಿಯದಿರು ಹುಸಿ"
ಹೊರಟಾಗ ವಿಕ್ಟರ್ ಅಪ್ಪನ ಜೊತೆಗೆ
ವಾಯುವಿಹಾರಕ್ಕೆ ಕುದುರೆ ಬಂಡಿಯಲ್ಲಿ ಕುಳಿತು
ಅಪ್ಪ ಜೋಬಿನಿಂದ ತೆಗೆದು ಬೈಬಲ್ ಓದಿದ:
"ಶುದ್ಧಹೃದಯರಿಗೆ ಸಿಕ್ಕುವುದು ದೈವಾಶೀರ್ವಾದ"
ಅದೊಂದು ಕೊರೆವ ಡಿಸೆಂಬರ್ ತಿಂಗಳು
ವಿಕ್ಟರ್ ಗೆ ಇನ್ನೂ ಪ್ರಾಯ ಹದಿನೆಂಟು
ಮುದ್ದಾಗಿತ್ತು ಆದರೂ ಅವನ ಕೈಬರವಣಿಗೆ
ಮತ್ತು ಶುದ್ಧವಾಗಿದ್ದವು ಅವನ ಮಣಿಕಟ್ಟು
ದ ಪೆವೆರಿಲ್ ಎಂಬ ಮರ್ಯಾದಸ್ತರ ಲಾಡ್ಜ್
ಅಲ್ಲಿ ವಿಕ್ಟರ್ ಮಾಡಿಕೊಂಡಿದ್ದ ಪುಟ್ಟ ಕೋಣೆ
ಕಾಲವು ಅವನ ಮೇಲೆ ಕಣ್ಣಿಟ್ಟಿತ್ತು ಪ್ರತಿದಿನವೂ
ಬೆಕ್ಕು ಕಣ್ಣಿಟ್ಟಂತೆ ಇಲಿಯ ಮೇಲೆ
ಹೆಗಲ ಮೇಲೆ ಕೈಯಿಟ್ಟು ಸಹೋದ್ಯೋಗಿಗಳು "ವಿಕ್ಟರ್!
ಹೆಣ್ಣಿನ ಸಂಗ ಮಾಡಿರುವೆಯಾ ಎಂದಾದರೂ?
ನಡೆ ನಮ್ಮ ಜೊತೆ ಶನಿವಾರ ರಾತ್ರಿ ಪೇಟೆಗೆ!"
ಎಂದಾಗ ತಲೆ ಅಲ್ಲಾಡಿಸುತ್ತಿದ್ದ ಮುಗುಳ್ನಕ್ಕು
ಕೊರೋನಾ ಸಿಗಾರ್ ಸೇದುವ ಮ್ಯಾನೇಜರ್ ಎಂದ:
"ಅಯ್ಯೋ ಅವನೊಬ್ಬ ಸಾಧು ಪ್ರಾಣಿ!
ಅಷ್ಟೊಂದು ಮುಂದುವರೆವ ಎದೆಗಾರಿಕೆ
ಅವನಿಗಿದೆಯೇ! ಅಳ್ಳೆದೆಯ ಮಾಣಿ!"
ತನ್ನ ಕೋಣೆಗೆ ಮರಳಿ ಕುಳಿತು ಮಂಚದ ಮೇಲೆ
ಅಲಾರಂ ಗಡಿಯಾರಕ್ಕೆ ಕೀಲಿ ಕೊಟ್ಟು
ದೀಪದ ಕೆಳಗಿದ್ದ ಬೈಬಲ್ ಕೈಗೆತ್ತಿ ಓದಿದ
ತನ್ನ ಪಾಪಕ್ಕೆ ಜೆಜೆಬೆಲ್ ಎದುರಿಸಿದ ವಿಪತ್ತು
ಪೆವೆರಿಲ್ ಲಾಡ್ಜಿಗೆ ಬಂದಿಳಿದಳು ಆನಾ
ಏಪ್ರಿಲ್ ಮೊದಲನೇ ತೇದಿ
ಅವಳ ಮೈಮಾಟಕ್ಕೆ, ಅವಳ ಕಣ್ ನೋಟಕ್ಕೆ
ಗಂಡಸರ ಎದೆಯಲ್ಲಿ ಹೊತ್ತಿ ಜ್ವಾಲಾಗ್ನಿ
ಹೈಸ್ಕೂಲ್ ಹುಡುಗಿಯ ಹಾಗಿದ್ದಳು ನೋಡಲು
ಚರ್ಚಿಗೆ ಬಂದ ತರುಣಿಯರ ಹಾಗೆ.
ಅವಳ ತುಟಿಗಳ ಮಧು ಸವಿದವರು ನಕ್ಕರು
ಬಲ್ಲವರೇ ಬಲ್ಲರು ಬೆಲ್ಲದ ಸವಿ ಎಂಬಂತೆ.
ಏಪ್ರಿಲ್ ಎರಡನೇ ತಾರೀಕು ಆನಾ
ಫರ್ ಕೋಟ್ ಧರಿಸಿ ಇಳಿವಾಗ ಮೆಟ್ಟಿಲು
ಎದುರು ಬಂದ ವಿಕ್ಟರ್ ಇವಳನ್ನು ಕಂಡಾಗ
ಕಣ್ ಕುಕ್ಕಿ ಒಂದು ಕ್ಷಣ ಉಂಟಾಯಿತು ಕತ್ತಲು.
ಪ್ರೇಮಪಾಶಕ್ಕೆ ಬಿದ್ದ ವಿಕ್ಟರ್ ಮೊದಲ ಸಲ ಅವಳನ್ನು
ಕೇಳಿದಾಗ "ನನ್ನನ್ನು ಮದುವೆಯಾಗುವೆಯಾ?"
ಗಹಗಹಿಸಿ "ಮದುವೆಯಾಗುವ ಹೆಣ್ಣಲ್ಲ" ಎಂದಳು;
ಸುಮ್ಮನೇ ತಲೆ ಕೊಡವಿದಳು ಎರಡನೇ ಸಲ ಆನಾ.
ತನ್ನ ಕೋಣೆಯ ಕನ್ನಡಿಯ ಮುಂದೆ ನಿಂತಾಗ ಅವಳಿಗೆ
ಪ್ರತಿಬಿಂಬದ ಕಡೆಗೆ ನೋಡುತ್ತಾ ಅನ್ನಿಸಿತು:
"ಮಳೆಗಾಲದ ಮಧ್ಯಾಹ್ನದಷ್ಟೇ ಅನಾಕರ್ಷಕ ವಿಕ್ಟರ್,
ಆದರೇನು? ಸಂಸಾರ ಹೂಡಬೇಡವೇ ನಾನೂ?"
ಕೆರೆಯ ಬದಿಯಲ್ಲಿ ಅವರು ನಡೆದು ಬರುವಾಗ
ಮೂರನೇ ಸಲ ಮಾಡಿದಾಗ ವಿಕ್ಟರ್ ಮದುವೆ ಪ್ರಸ್ತಾಪ
ಅವನ ಹಣೆಗೆ ಮುತ್ತಿಟ್ಟು ಅವಳೆಂದಳು ನಾಚುತ್ತ
"ನಿನ್ನ ಇಚ್ಛೆಯಂತಾಗಲಿ ನನ್ನ ಹೃದಯದ ರಾಜ!"
ಆಗಸ್ಟ್ ತಿಂಗಳಲ್ಲಿ ಮದುವೆಯಾಯಿತು ಇಬ್ಬರಿಗೂ
ಅವಳೆಂದಳು: "ನನ್ನನ್ನು ಚುಂಬಿಸು, ಪೆದ್ದು ಹುಡುಗ!"
ತನ್ನ ತೋಳುಗಳಲ್ಲಿ ಅವಳನ್ನು ತುಂಬಿಕೊಳ್ಳುತ್ತ
ಅವನು ಸುಖಿಸಿದ ಹೊಗಳುತ್ತ ಅವಳ ಸೌಂದರ್ಯ
ಸೆಪ್ಟೆಂಬರ್ ಮಧ್ಯಾಂತರದಲ್ಲಿ ಒಂದು ದಿನ ವಿಕ್ಟರ್
ಆಫೀಸಿಗೆ ಬಂದಾಗ ಸಿಳ್ಳೆ ಹಾಕುತ್ತಾ
ಶರ್ಟ್ ಗುಂಡಿಗೆ ಸಿಕ್ಕಿಸಿದ ಕೆಂಗುಲಾಬಿಯ ಹೂವು,
ತಡವಾದರೂ ನಡೆಯಲ್ಲಿ ತುಂಬು ಉತ್ಸಾಹ
ಹರಟುತ್ತಿದ್ದರು ಸಹೋದೋಗಿಗಳು ಆನಾ ಕುರಿತು
ಗುಟ್ಟಾಗಿ ಅರೆತೆರೆದ ಬಾಗಿಲಿನ ಹಿಂದೆ
"ಪಾಪ ವಿಕ್ಟರ್! ಅವನಿಗೆ ಒಂದೂ ಗೊತ್ತಾಗದು!
ಮುಗ್ಧತೆಯೂ ಒಂದು ವರದಾನವೇ"
ಸ್ತಬ್ಧನಾಗಿ ನಿಂತ ವಿಕ್ಟರ್ ಕಲ್ಲುಮೂರ್ತಿಯ ಹಾಗೆ
ಮರೆಯಾಗಿ ಅರೆತೆರೆದ ಬಾಗಿಲಿನ ಹಿಂದೆ
ಇನ್ನೊಬ್ಬ: "ದೇವರೇ! ಬೇಬಿ ಆಸ್ಟಿನ್ ಕಾರಿನಲ್ಲಿ
ನಾನೂ ಅವಳೂ ಕಳೆದ ಸಂತೋಷದ ಘಳಿಗೆ!"
ಹೊರನಡೆದ ವಿಕ್ಟರ್ ಮುಖ್ಯರಸ್ತೆಯ ಮೇಲೆ
ನಡೆಯುತ್ತಾ ತಲುಪಿದನು ನಗರದಂಚು
ಊರಾಚೆಯ ಕೊಳಚೆಪ್ರದೇಶಕ್ಕೆ ಬಂದಾಗ
ಸುರಿಯುತ್ತಿತ್ತು ಕಣ್ಣಲ್ಲಿ ದಳದಳನೆ ನೀರು
ಒಬ್ಬಂಟಿ ನಿಂತಿದ್ದ ವಿಕ್ಟರ್ ಬಹುಹೊತ್ತು
ಮುಳುಗುಸೂರ್ಯನ ಕಡೆ ಮುಖವೆತ್ತಿಕೊಂಡು
"ಸ್ವರ್ಗದಲ್ಲಿ ಇರುವೆಯಾ ತಂದೆ?" ಎಂದು ಅತ್ತಾಗ ಬಿಕ್ಕಳಿಸಿ
ಆಕಾಶ "ವಿಳಾಸ ಗೊತ್ತಿಲ್ಲ" ಎಂದು ಉತ್ತರಿಸಿತು
ಪರ್ವತಗಳ ಕಡೆಗೆ ನೋಡಿದನು ವಿಕ್ಟರ್
ಮಂಜು ಮುಸುಕಿತ್ತು ಶಿಖರಗಳ ಮೇಲೆಲ್ಲಾ.
"ಸಂಪ್ರೀತನಾಗಿಲ್ಲವೇ ನನ್ನಿಂದ ತಂದೆ?"
ಎಂದು ಅತ್ತಾಗ ಬಂದ ಉತ್ತರವು "ಇಲ್ಲ"
ಕಾಡಿಗೆ ನಡೆದ ವಿಕ್ಟರ್ ಕಣ್ಣೀರು ಹಾಕುತ್ತಾ
"ತಂದೆ, ಅವಳು ನಿಷ್ಠಳಾಗಿರುವಳೇ ಮುಂದಾದರೂ?"
ಎತ್ತರದ ಮರಗಳು ತಲೆಯಲ್ಲಾಡಿಸಿದವು:
"ಅಯ್ಯೋ ಅವನೊಬ್ಬ ಸಾಧು ಪ್ರಾಣಿ!
ಅಷ್ಟೊಂದು ಮುಂದುವರೆವ ಎದೆಗಾರಿಕೆ
ಅವನಿಗಿದೆಯೇ! ಅಳ್ಳೆದೆಯ ಮಾಣಿ!"
ತನ್ನ ಕೋಣೆಗೆ ಮರಳಿ ಕುಳಿತು ಮಂಚದ ಮೇಲೆ
ಅಲಾರಂ ಗಡಿಯಾರಕ್ಕೆ ಕೀಲಿ ಕೊಟ್ಟು
ದೀಪದ ಕೆಳಗಿದ್ದ ಬೈಬಲ್ ಕೈಗೆತ್ತಿ ಓದಿದ
ತನ್ನ ಪಾಪಕ್ಕೆ ಜೆಜೆಬೆಲ್ ಎದುರಿಸಿದ ವಿಪತ್ತು
ಪೆವೆರಿಲ್ ಲಾಡ್ಜಿಗೆ ಬಂದಿಳಿದಳು ಆನಾ
ಏಪ್ರಿಲ್ ಮೊದಲನೇ ತೇದಿ
ಅವಳ ಮೈಮಾಟಕ್ಕೆ, ಅವಳ ಕಣ್ ನೋಟಕ್ಕೆ
ಗಂಡಸರ ಎದೆಯಲ್ಲಿ ಹೊತ್ತಿ ಜ್ವಾಲಾಗ್ನಿ
ಹೈಸ್ಕೂಲ್ ಹುಡುಗಿಯ ಹಾಗಿದ್ದಳು ನೋಡಲು
ಚರ್ಚಿಗೆ ಬಂದ ತರುಣಿಯರ ಹಾಗೆ.
ಅವಳ ತುಟಿಗಳ ಮಧು ಸವಿದವರು ನಕ್ಕರು
ಬಲ್ಲವರೇ ಬಲ್ಲರು ಬೆಲ್ಲದ ಸವಿ ಎಂಬಂತೆ.
ಏಪ್ರಿಲ್ ಎರಡನೇ ತಾರೀಕು ಆನಾ
ಫರ್ ಕೋಟ್ ಧರಿಸಿ ಇಳಿವಾಗ ಮೆಟ್ಟಿಲು
ಎದುರು ಬಂದ ವಿಕ್ಟರ್ ಇವಳನ್ನು ಕಂಡಾಗ
ಕಣ್ ಕುಕ್ಕಿ ಒಂದು ಕ್ಷಣ ಉಂಟಾಯಿತು ಕತ್ತಲು.
ಪ್ರೇಮಪಾಶಕ್ಕೆ ಬಿದ್ದ ವಿಕ್ಟರ್ ಮೊದಲ ಸಲ ಅವಳನ್ನು
ಕೇಳಿದಾಗ "ನನ್ನನ್ನು ಮದುವೆಯಾಗುವೆಯಾ?"
ಗಹಗಹಿಸಿ "ಮದುವೆಯಾಗುವ ಹೆಣ್ಣಲ್ಲ" ಎಂದಳು;
ಸುಮ್ಮನೇ ತಲೆ ಕೊಡವಿದಳು ಎರಡನೇ ಸಲ ಆನಾ.
ತನ್ನ ಕೋಣೆಯ ಕನ್ನಡಿಯ ಮುಂದೆ ನಿಂತಾಗ ಅವಳಿಗೆ
ಪ್ರತಿಬಿಂಬದ ಕಡೆಗೆ ನೋಡುತ್ತಾ ಅನ್ನಿಸಿತು:
"ಮಳೆಗಾಲದ ಮಧ್ಯಾಹ್ನದಷ್ಟೇ ಅನಾಕರ್ಷಕ ವಿಕ್ಟರ್,
ಆದರೇನು? ಸಂಸಾರ ಹೂಡಬೇಡವೇ ನಾನೂ?"
ಕೆರೆಯ ಬದಿಯಲ್ಲಿ ಅವರು ನಡೆದು ಬರುವಾಗ
ಮೂರನೇ ಸಲ ಮಾಡಿದಾಗ ವಿಕ್ಟರ್ ಮದುವೆ ಪ್ರಸ್ತಾಪ
ಅವನ ಹಣೆಗೆ ಮುತ್ತಿಟ್ಟು ಅವಳೆಂದಳು ನಾಚುತ್ತ
"ನಿನ್ನ ಇಚ್ಛೆಯಂತಾಗಲಿ ನನ್ನ ಹೃದಯದ ರಾಜ!"
ಆಗಸ್ಟ್ ತಿಂಗಳಲ್ಲಿ ಮದುವೆಯಾಯಿತು ಇಬ್ಬರಿಗೂ
ಅವಳೆಂದಳು: "ನನ್ನನ್ನು ಚುಂಬಿಸು, ಪೆದ್ದು ಹುಡುಗ!"
ತನ್ನ ತೋಳುಗಳಲ್ಲಿ ಅವಳನ್ನು ತುಂಬಿಕೊಳ್ಳುತ್ತ
ಅವನು ಸುಖಿಸಿದ ಹೊಗಳುತ್ತ ಅವಳ ಸೌಂದರ್ಯ
ಸೆಪ್ಟೆಂಬರ್ ಮಧ್ಯಾಂತರದಲ್ಲಿ ಒಂದು ದಿನ ವಿಕ್ಟರ್
ಆಫೀಸಿಗೆ ಬಂದಾಗ ಸಿಳ್ಳೆ ಹಾಕುತ್ತಾ
ಶರ್ಟ್ ಗುಂಡಿಗೆ ಸಿಕ್ಕಿಸಿದ ಕೆಂಗುಲಾಬಿಯ ಹೂವು,
ತಡವಾದರೂ ನಡೆಯಲ್ಲಿ ತುಂಬು ಉತ್ಸಾಹ
ಹರಟುತ್ತಿದ್ದರು ಸಹೋದೋಗಿಗಳು ಆನಾ ಕುರಿತು
ಗುಟ್ಟಾಗಿ ಅರೆತೆರೆದ ಬಾಗಿಲಿನ ಹಿಂದೆ
"ಪಾಪ ವಿಕ್ಟರ್! ಅವನಿಗೆ ಒಂದೂ ಗೊತ್ತಾಗದು!
ಮುಗ್ಧತೆಯೂ ಒಂದು ವರದಾನವೇ"
ಸ್ತಬ್ಧನಾಗಿ ನಿಂತ ವಿಕ್ಟರ್ ಕಲ್ಲುಮೂರ್ತಿಯ ಹಾಗೆ
ಮರೆಯಾಗಿ ಅರೆತೆರೆದ ಬಾಗಿಲಿನ ಹಿಂದೆ
ಇನ್ನೊಬ್ಬ: "ದೇವರೇ! ಬೇಬಿ ಆಸ್ಟಿನ್ ಕಾರಿನಲ್ಲಿ
ನಾನೂ ಅವಳೂ ಕಳೆದ ಸಂತೋಷದ ಘಳಿಗೆ!"
ಹೊರನಡೆದ ವಿಕ್ಟರ್ ಮುಖ್ಯರಸ್ತೆಯ ಮೇಲೆ
ನಡೆಯುತ್ತಾ ತಲುಪಿದನು ನಗರದಂಚು
ಊರಾಚೆಯ ಕೊಳಚೆಪ್ರದೇಶಕ್ಕೆ ಬಂದಾಗ
ಸುರಿಯುತ್ತಿತ್ತು ಕಣ್ಣಲ್ಲಿ ದಳದಳನೆ ನೀರು
ಒಬ್ಬಂಟಿ ನಿಂತಿದ್ದ ವಿಕ್ಟರ್ ಬಹುಹೊತ್ತು
ಮುಳುಗುಸೂರ್ಯನ ಕಡೆ ಮುಖವೆತ್ತಿಕೊಂಡು
"ಸ್ವರ್ಗದಲ್ಲಿ ಇರುವೆಯಾ ತಂದೆ?" ಎಂದು ಅತ್ತಾಗ ಬಿಕ್ಕಳಿಸಿ
ಆಕಾಶ "ವಿಳಾಸ ಗೊತ್ತಿಲ್ಲ" ಎಂದು ಉತ್ತರಿಸಿತು
ಪರ್ವತಗಳ ಕಡೆಗೆ ನೋಡಿದನು ವಿಕ್ಟರ್
ಮಂಜು ಮುಸುಕಿತ್ತು ಶಿಖರಗಳ ಮೇಲೆಲ್ಲಾ.
"ಸಂಪ್ರೀತನಾಗಿಲ್ಲವೇ ನನ್ನಿಂದ ತಂದೆ?"
ಎಂದು ಅತ್ತಾಗ ಬಂದ ಉತ್ತರವು "ಇಲ್ಲ"
ಕಾಡಿಗೆ ನಡೆದ ವಿಕ್ಟರ್ ಕಣ್ಣೀರು ಹಾಕುತ್ತಾ
"ತಂದೆ, ಅವಳು ನಿಷ್ಠಳಾಗಿರುವಳೇ ಮುಂದಾದರೂ?"
ಎತ್ತರದ ಮರಗಳು ತಲೆಯಲ್ಲಾಡಿಸಿದವು:
"ನಿನ್ನೊಂದಿಗಂತೂ ಇಲ್ಲ ಎಂದೆಂದಿಗೂ"
ಬಯಲಿನಲ್ಲಿ ಬಂದು ನಿಂತ ವಿಕ್ಟರ್
ಬೀಸುತ್ತಿತ್ತು ಅಲ್ಲಿ ಬಲವಾದ ಗಾಳಿ
ಬಯಲಿನಲ್ಲಿ ಬಂದು ನಿಂತ ವಿಕ್ಟರ್
ಬೀಸುತ್ತಿತ್ತು ಅಲ್ಲಿ ಬಲವಾದ ಗಾಳಿ
"ತಂದೆ! ನಾನವಳನ್ನೆಷ್ಟು ಪ್ರೀತಿಸುತ್ತೇನೆ" ಎಂದಾಗ
ಗಾಳಿ ಉತ್ತರಿಸಿದ್ದು "ಅವಳಿಗೆ ಮರಣವೇ ಶಾಸ್ತಿ"
ನದಿಯ ತೀರಕ್ಕೆ ಬಂದು ನಿಂತ ವಿಕ್ಟರ್
ಆಳಗಾಂಭೀರ್ಯದಿಂದ ಹರಿಯುತ್ತಿತ್ತು ಹೊಳೆ
"ತಂದೆ! ನಾನೇನು ಮಾಡಲಿ ಈಗ?" ಎಂದಾಗ
ನದಿಯ ಕಲರವದಲ್ಲಿದ್ದ ಉತ್ತರವು "ಹತ್ಯೆ"
ಮೇಜಿನ ಮುಂದೆ ಕುಳಿತಿದ್ದಳು ಆನಾ
ಕಲಸುತ್ತಾ ಇಸ್ಪೀಟ್ ಎಲೆ ಮತ್ತೊಂದು ಬಾರಿ
ಮೇಜಿನ ಮುಂದೆ ಕುಳಿತಿದ್ದಳು ಆನಾ
ಎದುರುನೋಡುತ್ತಾ ಗಂಡನ ದಾರಿ
ಮೇಲೆ ಬಂದ ಎಲೆ ಡೈಮಂಡ್ ಜ್ಯಾಕ್ ಅಲ್ಲ
ಜೋಕರ್ ಅಲ್ಲ, ರಾಜನಲ್ಲ, ರಾಣಿಯೂ ಅಲ್ಲ
ತಳಪಳಕ ಸನಿಕೆಯ ಏಸ್ ಕಾರ್ಡು
ಮೇಲೆ ಬಂದ ಎಲೆಯಲ್ಲಿದ್ದ ಚಿತ್ರ
ಬಾಗಿಲಲ್ಲಿ ನಿಂತಿದ್ದ ವಿಕ್ಟರ್
ತುಟಿಪಿಟಕ್ಕೆನ್ನದೆ ಅವಳನ್ನೇ ಗಮನಿಸುತ್ತ
ಏನಾಯಿತು ಡಾರ್ಲಿಂಗ್ ಎಂದರೂ ಅವಳು
ಕೇಳಿಸಿಕೊಳ್ಳದಂತಿತ್ತು ಅವನ ಚಿತ್ತ
ಅವನ ಎಡಗಿವಿಯಲ್ಲಿ ದನಿಯೊಂದು ಉಸುರಿತು
ಬಲಗಿವಿಯಲ್ಲಿ ಪಿಸುಗುಟ್ಟಿತು ಮತ್ತೊಂದು ದನಿ
ತಲೆಬುರುಡೆಯ ಅಡಿಯಲ್ಲಿ ಮತ್ತೊಂದು ನುಡಿಯಿತು:
"ಈ ರಾತ್ರಿಯೇ ಅವಳ ಕೊನೆಯ ರಾತ್ರಿ"
ಕೈಯಲ್ಲೆತ್ತಿಕೊಂಡು ಹಣ್ಣು ಹೆಚ್ಚುವ ಚಾಕು
ಮುನ್ನಡೆದ ನಿರ್ಭಾವ ಮುಖವನ್ನು ಹೊತ್ತು
ಪರಕೀಯನಂತಿತ್ತು ಅವನ ದನಿ: "ಆನಾ,
ನೀನು ಹುಟ್ಟದೇ ಇದ್ದರೆ ಮೇಲಾಗುತ್ತಿತ್ತು"
ಮೇಜನ್ನು ಸರಿಸಿ ಮೇಲೆದ್ದ ಆನಾ
ಚೀರಿದಳು ಜೋರಾಗಿ ಶಕ್ತಿಮೀರಿ
ಕನಸಿನಲ್ಲಿ ಭಯಾನಕವು ಮುಂದುವರೆದಂತೆ
ವಿಕ್ಟರ್ ಮುಂದುವರೆದ ನಿಧಾನವಾಗಿ
ಸೋಫಾ ಹಿಂದೆ ಅಡಗಿಕೊಂಡಳು ಅವಳು
ಪರದೆ ಹಿಡಿದೆಳೆದು ಕೋಲು ಕೆಳಕ್ಕೆ ಉರುಳಿಸಿದರೂ
ವಿಕ್ಟರ್ ಮಾತ್ರ ಮುಂದುವರೆಯುತ್ತಲೇ ಇದ್ದ:
"ದೈವದೊಂದಿಗೆ ಒಂದಾಗಲು ಇಗೋ ಸಿದ್ಧಳಾಗು."
ಹೇಗೋ ಬಾಗಿಲನ್ನು ತೆಗೆದು ಹೊರಗೋಡಿದಳು
ಹಿಂತಿರುಗಿ ನೋಡದೆ, ನಿಲ್ಲದೇ ಎಲ್ಲೂ
ವಿಕ್ಟರ್ ಹಿಂಬಾಲಿಸಿ ಬಂದ ಮೆಟ್ಟಿಲನ್ನೇರಿ
ಬಿಸಿಲುಮಚ್ಚಿನ ಬಳಿ ಹಿಡಿದುಕೊಂಡ ಅವಳನ್ನು
ಕೈಯಲ್ಲಿ ಚಾಕು ಹಿಡಿದು ನಿಂತಿದ್ದ ವಿಕ್ಟರ್
ಕೆಳಗೆ ಬಿದ್ದಿತ್ತು ರಕ್ತಸಿಕ್ತ ದೇಹ
ಹಾಡಿತು ಮೆಟ್ಟಿಲಮೇಲೆ ಹರಿದ ನೆತ್ತರುಧಾರೆ:
"ನಾನೇ ಪುನರ್ಜನ್ಮ ಮತ್ತು ನಾನೇ ಜೀವನ"
ಅವರು ಬಂದು ಇವನ ಭುಜತಟ್ಟಿದರು
ಕರೆದೊಯ್ದರು ವ್ಯಾನಿನಲ್ಲಿ ಕೂಡಿಸಿ
ಹುಲ್ಲಿನ ಬಣವೆಯಂತೆ ಕೂತಿದ್ದ ವಿಕ್ಟರ್
"ಮಾನವನ ಮಗ ನಾನು" ಎಂದು ಬಡಬಡಿಸಿ
ಒಂದು ಮೂಲೆಯಲ್ಲಿ ಕುಳಿತಿದ್ದಾನೆ ವಿಕ್ಟರ್
ಮಣ್ಣಿನಿಂದ ಮಾಡುತ್ತಾ ಹೆಣ್ಣಿನ ಆಕಾರ,
"ನಾನೇ ಆದಿ ಮತ್ತು ನಾನೇ ಅಂತ್ಯ" ಎಂದು ಹಾಡುತ್ತಾನೆ,
"ನ್ಯಾಯ ಮಾಡಲು ತಾಳುತ್ತೇನೆ ಭೂಮಿ ಮೇಲೆ ಅವತಾರ."
ಗಾಳಿ ಉತ್ತರಿಸಿದ್ದು "ಅವಳಿಗೆ ಮರಣವೇ ಶಾಸ್ತಿ"
ನದಿಯ ತೀರಕ್ಕೆ ಬಂದು ನಿಂತ ವಿಕ್ಟರ್
ಆಳಗಾಂಭೀರ್ಯದಿಂದ ಹರಿಯುತ್ತಿತ್ತು ಹೊಳೆ
"ತಂದೆ! ನಾನೇನು ಮಾಡಲಿ ಈಗ?" ಎಂದಾಗ
ನದಿಯ ಕಲರವದಲ್ಲಿದ್ದ ಉತ್ತರವು "ಹತ್ಯೆ"
ಮೇಜಿನ ಮುಂದೆ ಕುಳಿತಿದ್ದಳು ಆನಾ
ಕಲಸುತ್ತಾ ಇಸ್ಪೀಟ್ ಎಲೆ ಮತ್ತೊಂದು ಬಾರಿ
ಮೇಜಿನ ಮುಂದೆ ಕುಳಿತಿದ್ದಳು ಆನಾ
ಎದುರುನೋಡುತ್ತಾ ಗಂಡನ ದಾರಿ
ಮೇಲೆ ಬಂದ ಎಲೆ ಡೈಮಂಡ್ ಜ್ಯಾಕ್ ಅಲ್ಲ
ಜೋಕರ್ ಅಲ್ಲ, ರಾಜನಲ್ಲ, ರಾಣಿಯೂ ಅಲ್ಲ
ತಳಪಳಕ ಸನಿಕೆಯ ಏಸ್ ಕಾರ್ಡು
ಮೇಲೆ ಬಂದ ಎಲೆಯಲ್ಲಿದ್ದ ಚಿತ್ರ
ಬಾಗಿಲಲ್ಲಿ ನಿಂತಿದ್ದ ವಿಕ್ಟರ್
ತುಟಿಪಿಟಕ್ಕೆನ್ನದೆ ಅವಳನ್ನೇ ಗಮನಿಸುತ್ತ
ಏನಾಯಿತು ಡಾರ್ಲಿಂಗ್ ಎಂದರೂ ಅವಳು
ಕೇಳಿಸಿಕೊಳ್ಳದಂತಿತ್ತು ಅವನ ಚಿತ್ತ
ಅವನ ಎಡಗಿವಿಯಲ್ಲಿ ದನಿಯೊಂದು ಉಸುರಿತು
ಬಲಗಿವಿಯಲ್ಲಿ ಪಿಸುಗುಟ್ಟಿತು ಮತ್ತೊಂದು ದನಿ
ತಲೆಬುರುಡೆಯ ಅಡಿಯಲ್ಲಿ ಮತ್ತೊಂದು ನುಡಿಯಿತು:
"ಈ ರಾತ್ರಿಯೇ ಅವಳ ಕೊನೆಯ ರಾತ್ರಿ"
ಕೈಯಲ್ಲೆತ್ತಿಕೊಂಡು ಹಣ್ಣು ಹೆಚ್ಚುವ ಚಾಕು
ಮುನ್ನಡೆದ ನಿರ್ಭಾವ ಮುಖವನ್ನು ಹೊತ್ತು
ಪರಕೀಯನಂತಿತ್ತು ಅವನ ದನಿ: "ಆನಾ,
ನೀನು ಹುಟ್ಟದೇ ಇದ್ದರೆ ಮೇಲಾಗುತ್ತಿತ್ತು"
ಮೇಜನ್ನು ಸರಿಸಿ ಮೇಲೆದ್ದ ಆನಾ
ಚೀರಿದಳು ಜೋರಾಗಿ ಶಕ್ತಿಮೀರಿ
ಕನಸಿನಲ್ಲಿ ಭಯಾನಕವು ಮುಂದುವರೆದಂತೆ
ವಿಕ್ಟರ್ ಮುಂದುವರೆದ ನಿಧಾನವಾಗಿ
ಸೋಫಾ ಹಿಂದೆ ಅಡಗಿಕೊಂಡಳು ಅವಳು
ಪರದೆ ಹಿಡಿದೆಳೆದು ಕೋಲು ಕೆಳಕ್ಕೆ ಉರುಳಿಸಿದರೂ
ವಿಕ್ಟರ್ ಮಾತ್ರ ಮುಂದುವರೆಯುತ್ತಲೇ ಇದ್ದ:
"ದೈವದೊಂದಿಗೆ ಒಂದಾಗಲು ಇಗೋ ಸಿದ್ಧಳಾಗು."
ಹೇಗೋ ಬಾಗಿಲನ್ನು ತೆಗೆದು ಹೊರಗೋಡಿದಳು
ಹಿಂತಿರುಗಿ ನೋಡದೆ, ನಿಲ್ಲದೇ ಎಲ್ಲೂ
ವಿಕ್ಟರ್ ಹಿಂಬಾಲಿಸಿ ಬಂದ ಮೆಟ್ಟಿಲನ್ನೇರಿ
ಬಿಸಿಲುಮಚ್ಚಿನ ಬಳಿ ಹಿಡಿದುಕೊಂಡ ಅವಳನ್ನು
ಕೈಯಲ್ಲಿ ಚಾಕು ಹಿಡಿದು ನಿಂತಿದ್ದ ವಿಕ್ಟರ್
ಕೆಳಗೆ ಬಿದ್ದಿತ್ತು ರಕ್ತಸಿಕ್ತ ದೇಹ
ಹಾಡಿತು ಮೆಟ್ಟಿಲಮೇಲೆ ಹರಿದ ನೆತ್ತರುಧಾರೆ:
"ನಾನೇ ಪುನರ್ಜನ್ಮ ಮತ್ತು ನಾನೇ ಜೀವನ"
ಅವರು ಬಂದು ಇವನ ಭುಜತಟ್ಟಿದರು
ಕರೆದೊಯ್ದರು ವ್ಯಾನಿನಲ್ಲಿ ಕೂಡಿಸಿ
ಹುಲ್ಲಿನ ಬಣವೆಯಂತೆ ಕೂತಿದ್ದ ವಿಕ್ಟರ್
"ಮಾನವನ ಮಗ ನಾನು" ಎಂದು ಬಡಬಡಿಸಿ
ಒಂದು ಮೂಲೆಯಲ್ಲಿ ಕುಳಿತಿದ್ದಾನೆ ವಿಕ್ಟರ್
ಮಣ್ಣಿನಿಂದ ಮಾಡುತ್ತಾ ಹೆಣ್ಣಿನ ಆಕಾರ,
"ನಾನೇ ಆದಿ ಮತ್ತು ನಾನೇ ಅಂತ್ಯ" ಎಂದು ಹಾಡುತ್ತಾನೆ,
"ನ್ಯಾಯ ಮಾಡಲು ತಾಳುತ್ತೇನೆ ಭೂಮಿ ಮೇಲೆ ಅವತಾರ."

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ