ಸರ್ವಾಧಿಕಾರಿಯ ಮೃತ್ಯುಶಾಸನ
ಸರ್ವಾಧಿಕಾರಿಯ ಮೃತ್ಯುಶಾಸನ
ಅವನು ಹುಡುಕಾಡುತ್ತಿದ್ದ ವಸ್ತು: ಒಂದು ಬಗೆಯ ಪರಿಪೂರ್ಣತೆ
ನೇರವಾಗಿ ಮುಟ್ಟುವಂತಿತ್ತು ಅವನು ಹುಟ್ಟುಹಾಕಿದ ಕವಿತೆ
ಜನರು ಏನೇನು ಮಾಡಿಕೊಳ್ಳುತ್ತಾರೆ ಎಡವಟ್ಟು
ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು.
ಅವನಿಗೆ ಇದ್ದ ಪ್ರಮುಖ ಆಸಕ್ತಿ
ಸೈನ್ಯಗಳು, ನೌಕೆಗಳು, ಪರಮಾಣುಶಕ್ತಿ.
ಅವನು ನಕ್ಕಾಗ ಪಕ್ಕದಲ್ಲಿದ್ದ ಗೌರವಾನ್ವಿತ ನಾಯಕರ ಹಿಂಡು
ಕೇಕೆ ಹಾಕುತ್ತಾ ನಗುತ್ತಿತ್ತು ಪಕ್ಕೆ ಹಿಡಿದುಕೊಂಡು
ಅವನು ಅತ್ತಾಗ ಏನೆಂದರೆ ಉಂಟಾಗುತ್ತಿದ್ದ ಪರಿಣಾಮ
ಬೀದಿ ಬೀದಿಗಳಲ್ಲಿ ಬೀಳುವ ಪುಟ್ಟ ಮಕ್ಕಳ ಹೆಣ.
ಮೂಲ: ಡಬ್ಲ್ಯೂ ಎಚ್ ಆಡೆನ್
ಅನುವಾದ: ಸಿ ಪಿ ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ