ಕರುಣಿಸು ಅರೋಚಕ ಕಾಲಮಾನವನ್ನು
ಕರುಣಿಸು ಪ್ರಭೂ ಒಂದು ನಿಧಾನ ಸುದ್ದಿಯ ದಿನವ,
ಕಾಲ ಸರಿಯುವುದನ್ನು ಹೊರತು
ಕಾಫಿ ಕುಡಿಯುವುದನ್ನು ಬಿಟ್ಟು
ಟಿವಿಯಲ್ಲಿ ಯಾವುದೋ ಹಳೆಯ ಧಾರಾವಾಹಿ
ನೋಡುವುದನ್ನು ಹೊರತಾಗಿ
ಹೆಚ್ಚೇನೂ ನಡೆಯದ ನಿಶ್ಶಬ್ದ ನಿರಾಡಂಬರ ದಿವಸವೊಂದನ್ನು.
ಕಾಲ ಸರಿಯುವುದನ್ನು ಹೊರತು
ಕಾಫಿ ಕುಡಿಯುವುದನ್ನು ಬಿಟ್ಟು
ಟಿವಿಯಲ್ಲಿ ಯಾವುದೋ ಹಳೆಯ ಧಾರಾವಾಹಿ
ನೋಡುವುದನ್ನು ಹೊರತಾಗಿ
ಹೆಚ್ಚೇನೂ ನಡೆಯದ ನಿಶ್ಶಬ್ದ ನಿರಾಡಂಬರ ದಿವಸವೊಂದನ್ನು.
ಕರುಣಿಸು ಸುದ್ದಿಗಳಿಲ್ಲದ ಒಂದು ದಿನವ,
ತಲೆಗೊಂದು ಹರಟೆ ಬುಡವಿಲ್ಲದ ಅಭಿಪ್ರಾಯ
ಐರುಗೈರುಗಳಿಂದ ಕೇಳಬೇಕಾದ ದಿನವ.
ಏನೂ ಜರುಗಲೇ ಬಾರದು ಅಂಥ ದಿವಸ,
ಹೆಚ್ಚೆಂದರೆ ಒಂದೆರಡು ಗಂಟೆ ಒಡನಾಟ,
ಸ್ಥಳೀಯ ಹವಾಮಾನದ ಕಡೆ ಕಣ್ಣೋಟ,
ನೆನಪಿನಲ್ಲಿಡಲು ಪ್ರಯಾಸ ಪಡಬೇಕಾದ ದಿವಸ.
ತಲೆಗೊಂದು ಹರಟೆ ಬುಡವಿಲ್ಲದ ಅಭಿಪ್ರಾಯ
ಐರುಗೈರುಗಳಿಂದ ಕೇಳಬೇಕಾದ ದಿನವ.
ಏನೂ ಜರುಗಲೇ ಬಾರದು ಅಂಥ ದಿವಸ,
ಹೆಚ್ಚೆಂದರೆ ಒಂದೆರಡು ಗಂಟೆ ಒಡನಾಟ,
ಸ್ಥಳೀಯ ಹವಾಮಾನದ ಕಡೆ ಕಣ್ಣೋಟ,
ನೆನಪಿನಲ್ಲಿಡಲು ಪ್ರಯಾಸ ಪಡಬೇಕಾದ ದಿವಸ.
ಮೂಲ: ಬ್ರಯಾನ್ ಬಿಲ್ಸ್ಟನ್
ಕನ್ನಡಕ್ಕೆ : ಸಿ ಪಿ ರವಿಕುಮಾರ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ