ಒಂಟಿ ಪಯಣ

 

ಮೂಲ ಹಿಂದಿ ಕವಿತೆ: ಮಜರೂಹ್ ಸುಲ್ತಾನ್ ಪುರಿ

ಅನುವಾದ: ಸಿ.ಪಿ. ರವಿಕುಮಾರ್



ಗುರಿಯಿಲ್ಲ ಜೊತೆ ಯಾರಿಲ್ಲ

ಬಾ ಎಂದು ಕರೆವವರಿಲ್ಲ

ಒಂಟಿ ಒಬ್ಬನೇ ಹೊರಟಿರುವೆ, ತಿಳಿಯದೆಲ್ಲಿಗೆ!


ವಿರಹವಿದು ಕ್ರೂರ ವೇದನೆ

ಬರೆದಿಹನು ಭಾಗ್ಯ ದೇವನೇ

ಕೈಗೆ ನಿಲುಕದಾಗಿದೆ ಮುಗಿಲ ಮಲ್ಲಿಗೆ!


ನನ್ನೂರ ಹಾದಿ ಆದರೂ

ಗುರುತಿಸದೆ ದೂರ ನಿಂತವು

ದೂರು ಹೇಳಲೇನು ಈ ಮೈಲುಗಲ್ಲಿಗೆ!


ಎಲ್ಲರದೂ ಇಲ್ಲಿ ಕಲ್ಲೆದೆ!

ಗುಡಿಯಲ್ಲೂ ಕಲ್ಲಿನ ಶಿಲೆ!

ಗಾಜು ಹೃದಯ ನನ್ನದು, ಚೂರಾಗದೆ?


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)