ಏನಾದರೂ ಬೀರುತ್ತಿರು ತಮ್ಮ
ಬೀರಬಲ್ ಎಂಬ ಹೆಸರಿನಲ್ಲಿ ಕೆಲವರಿಗೆ ಬಲ ಎಂಬುದು ದೊಡ್ಡದಾಗಿ ಕಂಡರೆ ಕೆಲವರಿಗೆ ಬೀರ್ ಎಂಬುದು ದೊಡ್ಡದಾಗಿ ಕೇಳಿಸಿ ಅದರ ಹೀರಬಲ್ಲ ಸೋದರ ಬಿಯರ್ ನೆನಪಾಗಿ ಅದಮ್ಯ ಬಾಯಾರಿಕೆ ಸೃಷ್ಟಿಸುತ್ತದೆ. ಬೀರು ಎಂಬುದು ಕನ್ನಡ ಪದವೇ. ಸಂಕ್ರಾಂತಿಯ ದಿನ ಎಳ್ಳುಬೀರುವ ನಾರಿಯರನ್ನೂ ಮತ್ತು ಕ್ರಾಂತಿಯ ವಿಭ್ರಾಂತಿಯಲ್ಲಿ ಕಲ್ಲು ಬೀರುವ ಬೀದಿಮಾರಿಯರನ್ನೂ ನೀವು ನೋಡಿಯೇ ಇರುತ್ತೀರಿ. ಎಳ್ಳು ಮತ್ತು ಕಲ್ಲು ಅಲ್ಲದೆ ಬೀರಬಲ್ (beerable, adj.) ವಸ್ತುಗಳು ಬಹಳ ಇವೆ. ಗಂಡುಬೀರಿ,ಹಲ್ಲುಬೀರಿ (ರ) ಇತ್ಯಾದಿಗಳು ನಿಮಗೆ ಪರಿಚಿತವಾದ ಜನರೇ. ಬೀರ ಎಂಬುದು ವೀರ ಎಂಬ ಪದದ ಇನ್ನೊಂದು ರೂಪ. ವೀರಬಲ ಎಂಬುದೇ ಬೀರಬಲ್ ಆಗಿದೆ ಎಂದಾದರೆ ಹಲ್ಲುಬೀರ ಎಂದರೆ ಯಾರು? ಹಲ್ಲನ್ನೇ ಆಯುಧವಾಗಿ ಬಳಸುವ ವೀರನೆ? ನೇಗಿಲನ್ನು ಆಯುಧವಾಗಿ ಬಳಸಿಕೊಂಡ ಬಲರಾಮ ಹೇಗೆ ಹಲಾಯುದನೋ ಹಾಗೆ ಹಲ್ಲಿನಿಂದ ಕಚ್ಚುವವನು ಹಲ್ಲಾಯುಧ. ಇನ್ನು ಗಂಡುಬೀರಿ ಎಂದರೆ ಗಂಡಿನಂತೆ ವೀರಯುದ್ಧ ಮಾಡಿದವಳೇ ಗಂಡುಬೀರಿ ಎಂದು ಅರ್ಥೈಸುವುದು ರೂಢಿ. ಇಂದಿನ ಮಹಿಳಾ ವಿಮೋಚನಾ ಯುಗದಲ್ಲಿ ಇದನ್ನು ಹೇಳುವುದು ಕಷ್ಟ. ಗಂಡಿನಂತೆ ವೀರ ಯುದ್ಧ ಮಾಡುವುದು ಎಂಬುದನ್ನು ಕೇಳುತ್ತಲೇ ಎಷ್ಟೋ ಜನ ವಿಮೋಚಕಿಯರು ವೀರಗಚ್ಚೆ ಹಾಕಿ ಯುದ್ಧಕ್ಕೆ ಸನ್ನದ್ಧರಾಗುವರು. ನಗೆ ಬೀರುವುದು ಎಂಬ ಪ್ರಯೋಗವೂ ಸಾಮಾನ್ಯ. ಆದರೆ ನಗೆಬೀರ ಎಂಬ ಪ್ರಯೋಗವನ್ನು ನಾನೆಂದೂ ಕೇಳಿಲ್ಲ. ಜೋಕಿಗೆ ನಗಬಲ್ಲ ವೀರರೇ ನಗೆವೀರರು ಎಂದಾದರೆ ಇಂಥ ನಗ