ಗುಬ್ಬಚ್ಚಿಗೆ
ಎಲ್ಲಿ ಕಾಣಲೇ ಇಲ್ಲವಲ್ಲ ಬಹಳ ದಿನ
ಎಲ್ಲಿ ಹಾರಲು ಪ್ರೇರೇಪಿಸಿತು ಮನ!
ಎಲ್ಲಿ ಹಾರಲು ಪ್ರೇರೇಪಿಸಿತು ಮನ!
ಒಮ್ಮೊಮ್ಮೆಯಾದರೂ ಹಾಕುತ್ತಿರು ಸ್ವಂತಿ
ಲೈಕ್ ಹಾಕಲಿ ಬಿಡಲಿ ಜನರು! ಏನಂತೀ?
ಗೆಳೆಯರಾದ ಮೇಲೆ ಸ್ನೇಹ ಯಾಚಿಸಿ ಬಂದು
ಕಾಣೆಯಾಗುವರಲ್ಲ ಕೆಲವು ಫೇಸ್ಬುಕ್ ಬಂಧು
ಅವರಂತೆ ನೀನೂ ತಲೆ ಮರೆಸಿಕೊಂಡು
ಹೋಗಿಬಿಟ್ಟೆಯೋ ಏನೋ ಮಾಡಿ ಅನ್ಫ್ರೆಂಡು!
ಟ್ವೀಟ್ ಮಾಡುತ್ತಿರುವುದೆಲ್ಲ ಗೂಗೆ-ರಣಹದ್ದು
ಎಂದು ನಿಲ್ಲಿಸಿಬಿಟ್ಟೆಯಾ ನಿನ್ನ ಚಿಲಿಪಿಲಿ ಸದ್ದು!
ಯಾರೂ ಕಿವಿ ಮುಚ್ಚುವುದಿಲ್ಲ, ನಿನಗೇಕೆ ಚಿಂತೆ
ಕಾದಿರಬಹುದು ನಿನ್ನುಲಿಗೇ, ಗದ್ದಲದ ಸಂತೆ!
ಸಿ. ಪಿ. ರವಿಕುಮಾರ್
#ಕವಿತಾಸ್ಫೂರ್ತಿ
#ಕವಿತಾಸ್ಫೂರ್ತಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ