ಪೋಸ್ಟ್‌ಗಳು

ಡಿಸೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಲ್ಲಿ ಯಾರೂ ಮುಖ್ಯರಲ್ಲ

ಇಮೇಜ್
 ಸಿ ಪಿ ರವಿಕುಮಾರ್ ಇಲ್ಲಿ  ಯಾರೂ ಮುಖ್ಯರಲ್ಲ! ಯಾರೂ ಅಮುಖ್ಯರಲ್ಲ! ಯಾವುದೂ ಯ:ಕಶ್ಚಿತವಲ್ಲ! ಹೀಗೆ ಕುವೆಂಪು ಬರೆದಿದ್ದನ್ನು "ಇಲ್ಲಿ ಯಾರೂ ಮುಖ್ಯರಿಲ್ಲ, ಯಾರೂ ಅಮುಖ್ಯರಿಲ್ಲ, ಯಾವುದೂ ಯಃಕಶ್ಚಿತವಲ್ಲ" ಎಂದು ತಿದ್ದಿಕೊಂಡರೆ ಅದು ಟ್ವಿಟ್ಟರಿಗೆ ಅನ್ವಯವಾಗುತ್ತದೆ.  ನೋಡಿ, ಇಲಾನ್ ಮಸ್ಕ್ ಸುಮಾರು ನಲವತ್ತನಾಲ್ಕು ಬಿಲಿಯನ್ ಡಾಲರ್ ಕೊಟ್ಟು ಟ್ವಿಟ್ಟರನ್ನು ಕೊಂಡುಕೊಂಡರೂ ಅವರನ್ನು ಸೀಈಓ ಪದವಿಯಿಂದ ಕೆಳಗೆ ಇಳಿಸಿಯೇ ಬಿಟ್ಟರು. ಈಗ ಮುಂದಿನ ಸೀಈಓ ಯಾರು ಎಂಬುದಕ್ಕೆ ಎಲ್ಲರೂ ನಾಮುಂದು ತಾಮುಂದು ಎಂದು ನುಗ್ಗುತ್ತಿದ್ದಾರೆ. "ಇಲ್ಲಿ ಯಾರೂ ಅಮುಖ್ಯರಲ್ಲ" ಎಂದು ತಿಳಿದ ತಕ್ಷಣವೇ ನಾನೂ ಅರ್ಜಿ ಹಾಕಿದ್ದೇನೆ. ಇದನ್ನು ನಾನು ಎಷ್ಟೇ ಗುಟ್ಟಾಗಿ ಇಟ್ಟರೂ ಅವರಿಗೆ ಹೇಗೋ ಗೊತ್ತಾಗಿ ನನ್ನ ಫ್ರೆಂಡ್ಸ್ ವೆಂಕ, ಸೀನ ಮತ್ತು ನಾಣ ಕೂಡಾ ಅರ್ಜಿ ಕಳಿಸಿದ್ದಾರೆ. ಅರ್ಜಿ ಹಾಕುವುದು ಕೂಡಾ ಈಗ ಕಷ್ಟವಲ್ಲ. ಟ್ವೀಟ್ ಮಾಡಿ ಅಲ್ಲಿ ಅಟ್ ಇಲಾನ್ ಮಸ್ಕ್ ಅಂತ ಹಾಕಿಬಿಟ್ಟರೆ ಸಾಕು. ಇಲಾನ್ ಮಸ್ಕ್ ತಮಗೆ ಬಂದ ನಲವತ್ತನಾಲ್ಕು ಬಿಲಿಯನ್ ಅರ್ಜಿಗಳನ್ನು "ಇಲ್ಲಿ ಯಾವುದೂ ಯಃಕಶ್ಚಿತವಲ್ಲ" ಎಂದು ನೋಡುತ್ತಾ ದಿನವಿಡೀ ಕೂತಿರುತ್ತಾರೆ.  ಹೀಗಾಗಿ ಅವರು ತಮ್ಮ ಮಗು X Æ A-Xii ನೋಡಿಕೊಳ್ಳಲು ಏನೇನೂ ಸಹಾಯ ಮಾಡುತ್ತಿಲ್ಲ ಎಂದು ಅವರ ಹೆಂಡತಿ ಟ್ವೀಟ್ ಮಾಡಿದ್ದಾರೆ. ಇಲ್ಲಿ ಯಾವುದಕ್ಕೂ ಮೊದಲಿಲ್ಲ! ಯಾವುದಕ್ಕೂ ತುದಿಯಿಲ್ಲ! ಯಾವುದೂ ಎಲ್ಲ...

ಮಿದುಳು ತಿನ್ನುವ ಅಮೀಬಾ

ಇಮೇಜ್
 ಸಿ ಪಿ ರವಿಕುಮಾರ್ "ಕೇಳಿದಿರಾ? ಇನ್ನೊಂದು ಆಘಾತಕರ ಸುದ್ದಿ!" ಎಂದು ಮಿಸೆಸ್ ಶಾಂತಾ ಏದುಸಿರು ಬಿಡುತ್ತಾ ಮನೆಯನ್ನು ಪ್ರವೇಶಿಸಿದಾಗ ಮಿಸೆಸ್ ತಾರಾ ಅವರೆಕಾಯಿ ಬಿಡಿಸುತ್ತಾ ಕೂತಿದ್ದರು.  "ಏನಾಯ್ತು? ಈರುಳ್ಳಿ ಬೆಲೆ ಮತ್ತೆ ಹಂಡ್ರೆಡ್ ದಾಟಿತಾ?" ಎಂದು ಮಿಸೆಸ್ ತಾರಾ ಆತಂಕದಿಂದ ಕೇಳಿದರು. ಅಂದು ಈರುಳ್ಳಿ ಸಾಂಬಾರ್ ಮಾಡುವುದು ಎಂದು ತೀರ್ಮಾನ ಮಾಡಿದ್ದರಲ್ಲ? "ಇಲ್ಲಾ ಇಲ್ಲಾ ಈರುಳ್ಳಿ ಈಸ್ ಓಕೆ. ಪ್ರಾಬ್ಲಂ ಬಂದಿರೋದು ಅಮೀಬಾ ಇಂದ" "ಯಾರು ಅಮೀಬಾ ಅಂದರೆ? ಕಸ್ತೂರಿಬಾ ವಿನೋಬಾ ಕೇಳಿದೀನಿ. ಅಮೀಬಾ ಯಾರು, ಅಮೀರ್ ಖಾನ್ ಹೆಂಡ್ತಿ ಏನ್ರೀ?" "ಅಯ್ಯೋ ನೀವು ಬಯಾಲಜಿ ಓದಲಿಲ್ವಾ ತಾರಾ? ಅಮೀಬಾ, ದ ಸಿಂಗಲ್ ಸೆಲ್ಯುಲರ್ ಆರ್ಗಾನಿಸಂ." "ಓಹ್ ಹೌದಲ್ವಾ! ಈಗ ನೆನಪಿಗೆ ಬರ್ತಾ ಇದೆ. ಅದೇನೋ ನ್ಯೂಕ್ಲಿಯಸ್, ಪ್ಲಾಸ್ಮಾ ಅಂತ ಏನೋ ಚಿತ್ರ ಬರೆದು ಲೇಬಲ್ ಮಾಡಿದ್ದು." "ಪ್ಲಾಸ್ಮಾ ಅಲ್ಲ, ಸೈಟೋಪ್ಲಾಸಂ. ಅಯ್ಯೋ ಅದಿರಲಿ, ಸುದ್ದಿ ಕೇಳಿ. ಸೌತ್ ಕೊರಿಯಾದಲ್ಲಿ ಒಂದು ಭಯಂಕರ ಅಮೀಬಾ ಕಾಣಿಸಿಕೊಂಡಿದೆ ಕಣ್ರೀ." "ಅಯ್ಯ, ಈ ಕೊರೊನಾಗಿಂತಲೂ ಏನ್ರೀ? ನೀವು ಸುಮ್ಮನೆ ಹೆದರ್ತೀರಿ. ಮೊದಲು ಆ ಮಾಸ್ಕ್ ತೆಗೀರಿ. ಕಾಫಿ ಕೊಡ್ತೀನಿ." ಕಾಫಿ ಹೀರುತ್ತಾ ಮಿಸೆಸ್ ಶಾಂತಾ "ಸೌತ್ ಕೊರಿಯಾದಲ್ಲಿ ಈ ಅಮೀಬಾ ಸಿಕ್ಕಿದೆಯಂತೆ ಕಣ್ರೀ. ಅದು ಬ್ರೇನ್ ತಿಂದುಬಿಡತ್ತಂತೆ!...

ನಿನ್ನ ಗುರುತು

ಇಮೇಜ್
 ನಿನ್ನ ಗುರುತು ಮೂಲ : ಎರಿನ್ ಹ್ಯಾನ್ಸನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಿನ್ನ ವ್ಯಾಖ್ಯಾನವಾಗದು ನಿನ್ನ ವಯೋಮಾನ ಅಥವಾ ನೀ ತೊಟ್ಟ ಬಟ್ಟೆಗಳ ಅಳತೆ  ನೀನಲ್ಲ ನಿನ್ನ ತಲೆಗೂದಲಿನ ಬಣ್ಣ  ಅಥವಾ ತೂಕದ ಯಂತ್ರ ತೋರುವ ಸಂಖ್ಯೆ. "ನೀನು" ಎನ್ನಲಾಗದು ನಿನ್ನ ಹೆಸರನ್ನು ನೀನಲ್ಲ ನಿನ್ನ ಕೆನ್ನೆಯಲ್ಲಿ ಬೀಳುವ ಗುಳಿ ನೀನೆಂದರೆ ನೀನು ಓದುವ ಪುಸ್ತಕ ಮತ್ತು ನಿತ್ಯವೂ ನೀನು ಬಳಸುವ ಪದಾವಳಿ. ಬೆಳಗಿನ ನಿನ್ನ ಗೊಗ್ಗರು ಧ್ವನಿ ನಿನ್ನ ಗುರುತು ನಿನ್ನ ಪರಿಚಯ ನೀನು ಮರೆಮಾಚುವ ನಗೆಮುಗುಳು ನೀನು ನಿನ್ನ ನಗೆಯಲ್ಲಿರುವ ಮಧುರ ಧಾತು ನೀನೇ ನೀನು ಸುರಿಸಿದ ಕಣ್ಣೀರ ಹನಿಗಳು ಒಬ್ಬನೇ ಇದ್ದಾಗ ಹಾಡಿಕೊಳ್ಳುವೆಯಲ್ಲ, ಗಟ್ಟಿ ದನಿಯಲ್ಲಿ, ಆ ಹಾಡು ನೀನು. ನೀನಲೆದಾಡಿದ ಗುಡ್ಡಗಾಡುಗಳು ನೀನು ಮನೆಯೆಂಬ ಹೆಸರಿಟ್ಟ ಗೂಡು ನೀನು. ನಿನ್ನ ನಂಬಿಕೆಗಳು ನೀನು ನಿನ್ನ ಆತ್ಮೀಯರು ನೀನು ನಿನ್ನ ಕೋಣೆಯ ತೂಗುಚಿತ್ರಗಳು ನೀನು ನಿನ್ನಾಸೆ, ಕನಸು, ಆಕಾಂಕ್ಷೆ ನೀನು. ನಿನ್ನನ್ನು ನೀನಾಗಿಸಿದೆ ಎಷ್ಟೊಂದು ಚೆಲುವು ಎಂಬುದನ್ನು ನೀನು ಹೋದಂತಿದೆ ಮರೆತು. ನೀನಲ್ಲದ ವಸ್ತುಗಳಲ್ಲಿ ಯಾವಾಗ ನೀನು ಹುಡುಕಿಕೊಳ್ಳತೊಡಗಿದೆಯೋ ನಿನ್ನ ಗುರುತು.

ಮಾಗಿ

ಇಮೇಜ್
 (ಜ್ಯಾಕ್ ಸೊರೆನ್ಸನ್ ಅವರ ತೈಲವರ್ಣ ಚಿತ್ರಕ್ಕೆ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ) ಮಾಗಿ ಕಷ್ಟದಲ್ಲಿ ಕಳೆಯುತ್ತಿದೆ ಚಳಿಗಾಲ ಇಷ್ಟೆತ್ತರ ಹಿಮ ಗುಡಿಸದಿದ್ದರೆ ಪ್ರತಿದಿನ ಗಟ್ಟಿ ಮಂಜಿನಗಡ್ಡೆಯಾಗಿ ಜಾರಿಕೆ. ಕೆಲಸ ಹುಡುಕಿ ಹೊರಟ ಮನೆಯೊಡೆಯ ವಲಸೆ ಹೊರಟುಹೋದನೋ ಎಂಬ ಭಯ ಬಲವಂತದ ನಗು ನೆರೆಯವರಿಗೆ ತೋರಿಕೆ. ಮಕ್ಕಳು ಕೇಳುತ್ತಾರೆ ಅಪ್ಪ ಬರುವುದು ಎಂದು ಬಿಕ್ಕಳಿಸಿ ಮರೆಯಲ್ಲಿ ಕಣ್ಣಂಚಿನ ಬಿಂದು ಸಕ್ಕರೆಯ ನಗೆ ನಕ್ಕು ಅನ್ನುವಳು : ಹಬ್ಬಕ್ಕೆ. ಹಬ್ಬಕ್ಕೆ ಸಿಹಿ ಮಾಡಲೇ ಬೇಕಲ್ಲ ಮಕ್ಕಳಿಗಾಗಿ ಮಬ್ಬುಗತ್ತಲೆಯಲ್ಲೆದ್ದು ಒಲೆ ಹಚ್ಚಿ ದೀಪ ಬೆಳಗಿ ಎಬ್ಬಿಸಲು ಹೋದಾಗ ಕೇಳುತ್ತದೆ ನಗೆಕೇಕೆ. ಇಣುಕಿ ನೋಡಿದ ಕಣ್ಣು ಅರಳುತ್ತದೆ ಒಮ್ಮೆಲೇ ಕೆನೆಯುತ್ತಿದೆ ಮನೆಗೆ ಹಿಂದಿರುಗಿದ ಕುದುರೆ - ಕೊನೆಗೂ ಬೆಳಕಾಗಿದೆ ಹೊರಗೆ  ನಿಶ್ಶಂಕೆ. ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಯುಕ್ರೇನಿನಲ್ಲಿ ಕ್ರಿಸ್ಮಸ್ ೨೦೨೨

ಇಮೇಜ್
 ( ಐವಾನ್ ಯರ್ಚಕ್ (ಯುಕ್ರೇನ್) ಅವರ ಕ್ರಿಸ್ಮಸ್ ೨೦೨೨ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ) ಯುದ್ಧಕಾಲದ ಆಕಾಶದಲ್ಲಿ ಹೊಳೆಯುವುದು ತಾರೆಯಲ್ಲ ಬಿದ್ದ ಕ್ಷಿಪಣಿಗೆ ಇಂಥದ್ದೆಂಬ ಯಾವ ಗುರಿಯಿಲ್ಲ ಸದ್ದಾದರೆ ಈಗೀಗ ಬೆಚ್ಚುತ್ತಿಲ್ಲ ಮಕ್ಕಳು; ಹೆದರುವರು ಶುದ್ಧ ಶಾಂತಿಯು ನೆಲೆಸಿದಾಗ, ನಡುಗದೆ ಇದ್ದಾಗ ಬಂಕರು. ಚಳಿಯಲ್ಲಿ ನಡುಗುತ್ತಾ ಅಮ್ಮನ ಬಳಿ ಕೂತ ಮಗು ಕೇಳುವುದು ಕ್ರಿಸ್ಮಸ್ ಯಾವಾಗ ಎಂದು; ಪಾಳು ನಗರದ ನಡುವೆ ವಿಲಕ್ಷಣ ವಿಷಲ್ ಕೂಗು, ಬೀಳುತ್ತಿದೆ ಎಲ್ಲೋ ಭದ್ರ ಕಟ್ಟಡ ಇನ್ನೊಂದು. ಇಂದು ನಡೆದಿದೆ ನೆಲಮಾಳಿಗೆಯಲ್ಲಿ ಒಂದು ಪವಾಡ ಅಂಧಕಾರದ ನಡುವೆ ಹಚ್ಚಿಟ್ಟ ಹಾಗೊಂದು ದೀವಿಗೆ ಬಂದಿದೆ ಧರೆಗೊಂದು  ಮಗು, ನುಡಿದಂತೆ ಪ್ರವಾದ - ನಂದಿದ್ದ ಹಣತೆ ಮತ್ತೊಮ್ಮೆ ಹತ್ತಿಕೊಂಡಂತೆ ಕಾವಿಗೆ. ಪ್ರಶ್ನೆ ಕೇಳಿದ ಮಗುವಿನ ತಲೆ ನೇವರಿಸಿ ತಾಯಿ ಕ್ರಿಸ್ಮಸ್ ಬರುತ್ತದೆ ಮಗು, ಭರವಸೆಯಿಂದ ಕಾಯಿ. ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಮಂಜಪ್ಪನ ಕೋಳಿ

ಇಮೇಜ್
(ರಾಜಕುಮಾರ್ ಸ್ಥಬತಿ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ಕೊಟ್ಟಿರುವ ಚಿತ್ರ ಬರೆದಿದ್ದು ಏಐ) ಮೂಳೆ ಕೊರೆಯುವ ಚಳಿಗಾಲದ ರಾತ್ರಿ  ಮಂಜಪ್ಪ ತೊಟ್ಟು ತನ್ನ ಹಸಿರು ಟೋಪಿ ನಿದ್ದೆ ಬಾರದೆ ಎದ್ದು ಕೊಟ್ಟಿಗೆಗೆ ಬಂದು ನೋಡುವನು ಕೋಳಿ ಮಲಗಿದೆಯೇ ಎಂದು ಪ್ರೀತಿಯಿಂದ ಸಾಕಿದ್ದಾನೆ ಹಾಕಿ ಕಾಳು ನೀರು ಇನ್ನೇನು ತಿಂಗಳು ಕಳೆದರೆ ಮಾರಮ್ಮನ ತೇರು ಮೊಟ್ಟೆ ಇಟ್ಟು ಮರಿ ಮಾಡುವ ತನ್ನ ಧನಮೂಲ ಸಮೀಪಿಸುತ್ತಿದೆ ಮಾರಮ್ಮನಿಗೆ ಒಪ್ಪಿಸುವ ಕಾಲ ಇಲ್ಲ ಎನ್ನಲಾಗದು ಊರಲ್ಲಿ ಎಲ್ಲರಿಗೂ ಸರತಿ ಬಂದಾಗ ಕೋಳಿ ಒಪ್ಪಿಸುವುದೇ ರೀತಿ ಕೈಗೆತ್ತಿಕೊಂಡಾಗ ಕೋಳಿಯನ್ನು ಕಂದನ ಹಾಗೆ ಮಂಜಪ್ಪನ ಕಣ್ಣು ಮಂಜಾದದ್ದು ಯಾಕೆ ಹೀಗೇ ಎತ್ತಿಕೊಳ್ಳುತ್ತಿದ್ದ ಮಗಳ ನೆನಪಾಗಿ ಮತ್ತಷ್ಟು ಕ್ರೂರ ಎನಿಸುತ್ತದೆ ಮಾಗಿ ಮಾತು ಬಾರದ ಮೌನಿ, ಮನೆಗೆಲಸದಲ್ಲಿ ಜಾಣಿ ಹೆಗಲಿನ ಮೇಲೆ ಹೊತ್ತು ಬೆಳೆಸಿದ ರಾಣಿ ಜಾತ್ರೆಯಲ್ಲೇ ನಡೆದಿದ್ದಲ್ಲವೇ ಅವಳ ಮದುವೆ ಹರಕೆ ಹೊತ್ತಿದ್ದ ಮಾರಮ್ಮನಿಗೆ ಕೋಳಿ ಕೊಡುವೆ ಅವನ ಕಣ್ಣಂಚಲ್ಲಿ ನೆನಪು ತರಿಸುತ್ತದೆ ತೇವ ತಬ್ಬಿಕೊಳ್ಳುವನು ತನ್ನದೆಂಬ ಏಕೈಕ ಜೀವ ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಯುದ್ಧದ ನೆನಪು

 ನಾನಾಗ ದೆಹಲಿ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ. ಒಮ್ಮೆಲೇ ಬಾಂಗ್ಲಾದೇಶದ ವಿಮೋಚನೆಗಾಗಿ ಯುದ್ಧಘೋಷಣೆಯಾಯಿತು.  ಯಾರಿಗೂ ಈ ಕುರಿತು ಸುಳಿವೂ ಇರಲಿಲ್ಲ. ಯುದ್ಧಘೋಷಣೆಯಾದ ಸಂದರ್ಭವನ್ನು ನಾನು ಮರೆಯಲಾರೆ. ನಮ್ಮ ತಂದೆ ಸ್ಥಳೀಯ ಪತ್ರಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಮರ್ಶೆ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ ಇವುಗಳನ್ನು ಬರೆಯುತ್ತಿದ್ದರು. ಕನ್ನಡದ ಅನೇಕಾನೇಕ ಕಲಾವಿದರು, ಲೇಖಕರು ಮತ್ತು ಪರಿಣಾಮಿ ವ್ಯಕ್ತಿಗಳನ್ನು ಕುರಿತು ಅವರು ದ ಹಿಂದೂಸ್ತಾನ್ ಟೈಮ್ಸ್, ದ ಈವನಿಂಗ್ ನ್ಯೂಸ್, ದ ಇಂಡಿಯನ್ ಎಕ್ಸ್ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ವಿಪುಲವಾಗಿ ಬರೆದರು. ಅವರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿತ್ತು. ಕೆಲವು ಕಾರ್ಯಕ್ರಮಗಳಿಗೆ ನಮ್ಮನ್ನೂ ಕರೆದುಕೊಂಡುಹೋಗುತ್ತಿದ್ದರು. ಇಂಥದೇ ಒಂದು ಸಂದರ್ಭ. ಅವತ್ತು ಪೂರಬ್ ಔರ್ ಪಶ್ಚಿಮ್ ಎಂಬ ಹಿಂದಿ ಚಿತ್ರದ ಸ್ಕ್ರೀನಿಂಗ್ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಸಿನಿಮಾ ಸ್ಕ್ರೀನಿಂಗ್ ಆದ ಕಾರಣ ನಾನು ಮತ್ತು ನನ್ನ ಅಣ್ಣ ಮರುಮಾತಿಲ್ಲದೆ ನಮ್ಮ ತಾಯಿತಂದೆಯರೊಂದಿಗೆ ಹೋಗಲು ಒಪ್ಪಿದೆವು.  ಬೇರೆ ಸಂಗೀತ, ನ್ಯತ್ಯ ಕಾರ್ಯ ಕ್ರಮಗಳಿಗೆ ಹೋಗಲು ನಾವು ಮೂಗು ಮುರಿಯುತ್ತಿದ್ದೆವು.  ಹೀಗಾಗಿ ಅನೇಕ ಅದ್ಭುತ ಕಲಾವಿದರ ಕಾರ್ಯಕ್ರಮಗಳನ್ನು ನೋಡುವ ಅವಕಾಶದಿಂದ ತಪ್ಪಿಸಿಕೊಂಡ ನನ್ನ ಪೆದ್ದುತನಕ್ಕೆ ಈಗಲೂ ಬೇಸರವಾಗುತ್ತದೆ.  ದೆಹಲಿಯ ಚಳಿಗಾಲದಲ್...

ಕೊನೆಯ ಎಲೆ

ಇಮೇಜ್
 ಕೊನೆಯ ಎಲೆ ಹೊರಗೆ ಹಿಮಪಾತ, ಕೆಟ್ಟ ಚಳಿ ; ಬೆಳಗಿನಲ್ಲೂ ಹಾಕಿದ ಪರದೆ. ಮಲಗಿದಲ್ಲೇ ನಿಟ್ಟಿಸುವನು ಬರಿದೇ  ಕಿಟಕಿಯ ಹೊರಗೆ ಹಬ್ಬಿದ ಬಳ್ಳಿ ರೋಗಿಯು ಕಲಾವಿದ; ಅವನ ಕಣ್ಣು ಕಾಣುವುದು ಬಳ್ಳಿಯಲ್ಲಿ ಬದುಕಿನ ಸಂಕೇತ; ಮೊನ್ನೆ ಬೀಸಿದ ಝಂಝಾವಾತ ಅಲ್ಲಾಡಿಸಿದೆ ನಿರ್ಬಲ ಬಳ್ಳಿಯನ್ನು. ಉದುರಿಹೋದವು ಬಹುಮಟ್ಟಿಗೆ ಎಲೆ ತನ್ನ ಬಾಳಿನ ವರ್ಷಗಳು ಉದುರಿದಂತೆ; ಬಾರಿಸುತ್ತಿದೆ ಅಪಾಯದ ಗಂಟೆ ಬತ್ತಿ ಹೋಗುತ್ತಿದೆ ಬಾಳ ಬಳ್ಳಿಯಲ್ಲಿ ಸೆಲೆ. ಕಲಾವಿದ ಮಲಗಿದ್ದಾನೆ, ತಪಿಸುವ ಜ್ವರದಲ್ಲಿ; ಬಡಬಡಿಸುತ್ತಾನೆ ಕನವರಿಕೆಯಲ್ಲಿ ಕೊನೆಯ ಎಲೆ ಉದುರಿಸಿದಾಗ ಬಳ್ಳಿ ವಿಲೀನವಾಗುವುದು ಪ್ರಾಣ ಕಾಲ ನಿರಂತರದಲ್ಲಿ...  ಹಣೆಯ ಮೇಲೆ ತಣ್ಣೀರು ಪಟ್ಟಿ ಇಟ್ಟು ಅವನ ಶಿಷ್ಯೆ ಹೊದ್ದಿಸುತ್ತಾಳೆ ಬೆಚ್ಚನೆ ಹೊದಿಕೆ; ಏನೂ ಆಗದು ಬಳ್ಳಿಗೆ, ಯಾತಕ್ಕೆ ಹೆದರಿಕೆ! ಎಂದು ಶಾಂತ ಸ್ವರದಲ್ಲಿ ಆಶ್ವಾಸನೆ ಕೊಟ್ಟು. ಬಣ್ಣ ಕುಂಚಗಳನ್ನು ಹೊತ್ತು ಕಿಟಕಿಯ ಹೊರಗಡೆ  ಚಜ್ಜದ ಮೇಲೆ ಹತ್ತಿ ಹಿಮವಂತ ಕುಳಿರ್ಗಾಳಿಯ ರಾತ್ರಿ ಬೆಳಕು ಬೀರುವ ಲಾಂದ್ರದ ದುರ್ಬಲ ಬತ್ತಿ: ಬಿಡಿಸುತ್ತಾಳೆ ಹಸಿರೆಲೆ ಉದುರಿದ ಎಲೆ ಇದ್ದೆಡೆ. ಬೆಳಕು ಹರಿದಾಗ ಕಲಾವಿದನು ಮೆಲ್ಲನೆ ತೆರೆದು ಕಣ್ಣು ಹರಿಸುತ್ತಾನೆ ಕಿಟಕಿಯ ಕಡೆಗೆ ದೃಷ್ಟಿ: ಉಳಿದುಕೊಂಡಿದೆ ಇನ್ನೂ! ಹಿಮವೃಷ್ಟಿ ವಿನಾಶಗೊಳಿಸಲಿಲ್ಲ ಬಳ್ಳಿಯ ಕೊನೆಯ ಹಸಿರನ್ನು! ಹಾಸಿಗೆಯಲ್ಲಿ ಮೆಲ್ಲನೆ ಮೇಲೆದ್ದು ಕುಳಿತ, ಜ್ವರ ಬಿಟ್ಟಿತ್ತು, ಮೈಯಲ್ಲಿ ...

ಅಗೆದದ್ದು

ಇಮೇಜ್
#ಚಿತ್ರಕವಿತೆ ಈ ಕವಿತೆಗೆ ಸ್ಫೂರ್ತಿ ನೀಡಿದ್ದು ಆಲ್ಫ್ರೆಡೋ ರಾಡ್ರಿಗ್ಸ್ ಅವರ ಚಿತ್ರ. ಮೇಲೆ ತೋರಿಸಿದ ಚಿತ್ರ ಬರೆದುಕೊಟ್ಟಿದ್ದು ಏಐ. (https://www.reddit.com/r/Art/comments/asygu6/a_miner_frustration_alfredo_rodriguez_oil_on/l ಋಷಿಯಂತೆ ಕಾಣುವ ಈ ಗಡ್ಡಧಾರಿ ಹುಡುಕುತ್ತಿರುವುದು ಏನೆಂದು ಗೊತ್ತಾ? -- ಎಲ್ಲಿಂದ ಬಂದೆವು ನಾವು, ಹೋಗುವೆವು ಎಲ್ಲಿಗೆ, ಏನು ಸಾವಿನ ಅರ್ಥ, ಯಾವುದು ಜೀವನಮಂತ್ರ, ಇದೆಲ್ಲ ಪ್ರಶ್ನೆಗಳಿಗೆ ಉತ್ತರವನ್ನಲ್ಲ: ಕಾಡುವುದಿಲ್ಲ ಇವನನ್ನು ಈ ಪ್ರಶ್ನೆಗಹನ; ಮರಳಲ್ಲಿ ಮಿರುಗಿ ಮಿಂಚುವ ಕಣದಲ್ಲಿ ಇವನ ಕಣ್ಣರಸುವುದು ಮಾರೀಚನ ಚಿನ್ನ. ಅಗೆಯುತ್ತಾನೆ, ಬಾಚುತ್ತಾನೆ, ಜರಡಿ ಹಿಡಿಯುತ್ತಾನೆ, ಜಾಲಾಡುತ್ತಾನೆ ಮಣ್ಣು, ಮೈಯೆಲ್ಲಾ ಕಣ್ಣು. ಮಂಜಾಗುತ್ತಿರುವ ದೃಷ್ಟಿಯಲ್ಲೇ ಹುಡುಕುತ್ತಾನೆ ಕೆಸರಾದ ಕೈಯಲ್ಲಿ ಕಸವರದ ಹೊನ್ನು. ಪ್ರಶ್ನೆ ಕೇಳುವುದಲ್ಲ ಇವನ ಆಶಯ, ಏನಿದ್ದರೂ ಬದುಕು. ಹೆಚ್ಚು ಪ್ರಶ್ನಿಸಿದರೆ ಸುಮ್ಮನಾಗಿಸುವುದು ಸೊಂಟದ ಬಂದೂಕು  ಚಿತ್ರ: ಆಲ್ಫ್ರೆಡೋ ರಾಡ್ರಿಗ್ಸ್ (ಮೆಹಿಕೋ) ಕವಿತೆ: ಸಿ. ಪಿ.. ರವಿಕುಮಾರ್