ಅಗೆದದ್ದು

#ಚಿತ್ರಕವಿತೆ


ಈ ಕವಿತೆಗೆ ಸ್ಫೂರ್ತಿ ನೀಡಿದ್ದು ಆಲ್ಫ್ರೆಡೋ ರಾಡ್ರಿಗ್ಸ್ ಅವರ ಚಿತ್ರ. ಮೇಲೆ ತೋರಿಸಿದ ಚಿತ್ರ ಬರೆದುಕೊಟ್ಟಿದ್ದು ಏಐ.

(https://www.reddit.com/r/Art/comments/asygu6/a_miner_frustration_alfredo_rodriguez_oil_on/l

ಋಷಿಯಂತೆ ಕಾಣುವ ಈ ಗಡ್ಡಧಾರಿ

ಹುಡುಕುತ್ತಿರುವುದು ಏನೆಂದು ಗೊತ್ತಾ? --

ಎಲ್ಲಿಂದ ಬಂದೆವು ನಾವು, ಹೋಗುವೆವು ಎಲ್ಲಿಗೆ,

ಏನು ಸಾವಿನ ಅರ್ಥ, ಯಾವುದು ಜೀವನಮಂತ್ರ,

ಇದೆಲ್ಲ ಪ್ರಶ್ನೆಗಳಿಗೆ ಉತ್ತರವನ್ನಲ್ಲ:

ಕಾಡುವುದಿಲ್ಲ ಇವನನ್ನು ಈ ಪ್ರಶ್ನೆಗಹನ;

ಮರಳಲ್ಲಿ ಮಿರುಗಿ ಮಿಂಚುವ ಕಣದಲ್ಲಿ

ಇವನ ಕಣ್ಣರಸುವುದು ಮಾರೀಚನ ಚಿನ್ನ.

ಅಗೆಯುತ್ತಾನೆ, ಬಾಚುತ್ತಾನೆ, ಜರಡಿ ಹಿಡಿಯುತ್ತಾನೆ,

ಜಾಲಾಡುತ್ತಾನೆ ಮಣ್ಣು, ಮೈಯೆಲ್ಲಾ ಕಣ್ಣು.

ಮಂಜಾಗುತ್ತಿರುವ ದೃಷ್ಟಿಯಲ್ಲೇ ಹುಡುಕುತ್ತಾನೆ

ಕೆಸರಾದ ಕೈಯಲ್ಲಿ ಕಸವರದ ಹೊನ್ನು.


ಪ್ರಶ್ನೆ ಕೇಳುವುದಲ್ಲ ಇವನ ಆಶಯ, ಏನಿದ್ದರೂ ಬದುಕು.

ಹೆಚ್ಚು ಪ್ರಶ್ನಿಸಿದರೆ ಸುಮ್ಮನಾಗಿಸುವುದು ಸೊಂಟದ ಬಂದೂಕು 

ಚಿತ್ರ: ಆಲ್ಫ್ರೆಡೋ ರಾಡ್ರಿಗ್ಸ್ (ಮೆಹಿಕೋ)

ಕವಿತೆ: ಸಿ. ಪಿ.. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)