ಮಾಗಿ

 (ಜ್ಯಾಕ್ ಸೊರೆನ್ಸನ್ ಅವರ ತೈಲವರ್ಣ ಚಿತ್ರಕ್ಕೆ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ)


ಮಾಗಿ
ಕಷ್ಟದಲ್ಲಿ ಕಳೆಯುತ್ತಿದೆ ಚಳಿಗಾಲ
ಇಷ್ಟೆತ್ತರ ಹಿಮ ಗುಡಿಸದಿದ್ದರೆ ಪ್ರತಿದಿನ
ಗಟ್ಟಿ ಮಂಜಿನಗಡ್ಡೆಯಾಗಿ ಜಾರಿಕೆ.
ಕೆಲಸ ಹುಡುಕಿ ಹೊರಟ ಮನೆಯೊಡೆಯ
ವಲಸೆ ಹೊರಟುಹೋದನೋ ಎಂಬ ಭಯ
ಬಲವಂತದ ನಗು ನೆರೆಯವರಿಗೆ ತೋರಿಕೆ.
ಮಕ್ಕಳು ಕೇಳುತ್ತಾರೆ ಅಪ್ಪ ಬರುವುದು ಎಂದು
ಬಿಕ್ಕಳಿಸಿ ಮರೆಯಲ್ಲಿ ಕಣ್ಣಂಚಿನ ಬಿಂದು
ಸಕ್ಕರೆಯ ನಗೆ ನಕ್ಕು ಅನ್ನುವಳು : ಹಬ್ಬಕ್ಕೆ.
ಹಬ್ಬಕ್ಕೆ ಸಿಹಿ ಮಾಡಲೇ ಬೇಕಲ್ಲ ಮಕ್ಕಳಿಗಾಗಿ
ಮಬ್ಬುಗತ್ತಲೆಯಲ್ಲೆದ್ದು ಒಲೆ ಹಚ್ಚಿ ದೀಪ ಬೆಳಗಿ
ಎಬ್ಬಿಸಲು ಹೋದಾಗ ಕೇಳುತ್ತದೆ ನಗೆಕೇಕೆ.
ಇಣುಕಿ ನೋಡಿದ ಕಣ್ಣು ಅರಳುತ್ತದೆ ಒಮ್ಮೆಲೇ
ಕೆನೆಯುತ್ತಿದೆ ಮನೆಗೆ ಹಿಂದಿರುಗಿದ ಕುದುರೆ -
ಕೊನೆಗೂ ಬೆಳಕಾಗಿದೆ ಹೊರಗೆ  ನಿಶ್ಶಂಕೆ.

ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)