ಯುಕ್ರೇನಿನಲ್ಲಿ ಕ್ರಿಸ್ಮಸ್ ೨೦೨೨

 ( ಐವಾನ್ ಯರ್ಚಕ್ (ಯುಕ್ರೇನ್) ಅವರ ಕ್ರಿಸ್ಮಸ್ ೨೦೨೨ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ)



ಯುದ್ಧಕಾಲದ ಆಕಾಶದಲ್ಲಿ ಹೊಳೆಯುವುದು ತಾರೆಯಲ್ಲ

ಬಿದ್ದ ಕ್ಷಿಪಣಿಗೆ ಇಂಥದ್ದೆಂಬ ಯಾವ ಗುರಿಯಿಲ್ಲ

ಸದ್ದಾದರೆ ಈಗೀಗ ಬೆಚ್ಚುತ್ತಿಲ್ಲ ಮಕ್ಕಳು; ಹೆದರುವರು

ಶುದ್ಧ ಶಾಂತಿಯು ನೆಲೆಸಿದಾಗ, ನಡುಗದೆ ಇದ್ದಾಗ ಬಂಕರು.


ಚಳಿಯಲ್ಲಿ ನಡುಗುತ್ತಾ ಅಮ್ಮನ ಬಳಿ ಕೂತ ಮಗು

ಕೇಳುವುದು ಕ್ರಿಸ್ಮಸ್ ಯಾವಾಗ ಎಂದು;

ಪಾಳು ನಗರದ ನಡುವೆ ವಿಲಕ್ಷಣ ವಿಷಲ್ ಕೂಗು,

ಬೀಳುತ್ತಿದೆ ಎಲ್ಲೋ ಭದ್ರ ಕಟ್ಟಡ ಇನ್ನೊಂದು.


ಇಂದು ನಡೆದಿದೆ ನೆಲಮಾಳಿಗೆಯಲ್ಲಿ ಒಂದು ಪವಾಡ

ಅಂಧಕಾರದ ನಡುವೆ ಹಚ್ಚಿಟ್ಟ ಹಾಗೊಂದು ದೀವಿಗೆ

ಬಂದಿದೆ ಧರೆಗೊಂದು  ಮಗು, ನುಡಿದಂತೆ ಪ್ರವಾದ -

ನಂದಿದ್ದ ಹಣತೆ ಮತ್ತೊಮ್ಮೆ ಹತ್ತಿಕೊಂಡಂತೆ ಕಾವಿಗೆ.


ಪ್ರಶ್ನೆ ಕೇಳಿದ ಮಗುವಿನ ತಲೆ ನೇವರಿಸಿ ತಾಯಿ

ಕ್ರಿಸ್ಮಸ್ ಬರುತ್ತದೆ ಮಗು, ಭರವಸೆಯಿಂದ ಕಾಯಿ.


ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)