ಶುಭವಿದಾಯ

 



ಭದ್ರವಾಗಿದೆ ಮಂಜಿನಗಡ್ಡೆ ಎಂದರಲ್ಲ ಅವರು

ಹಾಗೆಂದು ನಾನಲ್ಲಿ ಹೋಗುವೆನು

ಜನರನ್ನು ನಂಬುವ ಸ್ವಭಾವಕ್ಕೆ ಕಟ್ಟುಬಿದ್ದು

ಅಲ್ಲಿ ಕಾಲಿಟ್ಟು ನಿಲ್ಲುವೆನು.


ಸಹಜವಾಗಿ ಅದು ಬಾಯಿ ಬಿಡುತ್ತದೆ

ಮತ್ತು ನಾನೋ ಕಟ್ಟುಬಿದ್ದು

ನನ್ನ ತೋರಿಕೆಯ ಅವಿಚಲ ಸ್ವಭಾವಕ್ಕೆ

ಏನೂ ಆಗಿಲ್ಲವೆಂಬಂತೆ ನಟಿಸುತ್ತ 

ನೇರವಾಗಿ ಜಾರುತ್ತೇನೆ ನೀರಿಗೆ

ತೊಟ್ಟು ಕಪ್ತಾನನ ಟೋಪಿ

ಮತ್ತು ಮುಖದ ಮೇಲೆ ದುಃಖದ ಮುಗುಳ್ನಗೆ,

"ಶುಭವಿದಾಯ ನನ್ನ ಪ್ರೀತಿಪಾತ್ರರೇ, ಶುಭವಿದಾಯ!"

ಮೇಲೆ ನನ್ನ ತಲೆಯ ಮೇಲೆ ಮಂಜಿನಗಡ್ಡೆ

ಕ್ಲಿಕ್ ಸದ್ದಿನೊಂದಿಗೆ ಮುಚ್ಚಳದಂತೆ ಮುಚ್ಚಿಕೊಳ್ಳುತ್ತದೆ.


ಮೂಲ: ಎಡ್ವರ್ಡ್ ಫೀಲ್ಡ್

ಅನುವಾದ: ಸಿ ಪಿ ರವಿಕುಮಾರ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)