ಕೆಟ್ಟ ಹವಾಮಾನದ ಕಾವ್ಯ



ಕ್ಲಾಸ್ ರೂಮಿನ ಬಾಗಿಲ ಬಳಿಯಲ್ಲೇ ಯಾರೋ

ಗೋಡೆಗೆ ಆನಿಸಿ ಇಟ್ಟಿದ್ದಾರೆ ಸ್ಕೇಟ್ ಬೋರ್ಡ್:

ಗಂಟೆ ಬಾರಿಸಿದ ಕ್ಷಣವೇ ಪರಾರಿಯಾಗಲು ಹೊರಗೆ.


ಆಗ ಫೆಬ್ರುವರಿಯ ತಿಂಗಳು ಫ್ಲಾರಿಡಾದಲ್ಲಿ

ತರಗತಿಗಳ ಪಾಠದಲ್ಲಿ ಬರುತ್ತಿತ್ತು 

ಟ್ಯಾನಿಂಗ್ ಮುಲಾಮಿನ ಘಮ.

ನನ್ನ ವಿದ್ಯಾರ್ಥಿಗಳು ಯೋಚಿಸುವರು ಅದೇಕೆ


ಎಲ್ಲ ಶ್ರೇಷ್ಠ ಕವಿಗಳೂ ಬದುಕಿದರು ನಮ್ಮ ಉತ್ತರದಲ್ಲಿ?

ಅಲ್ಲಿ ಬೇರೇನೂ ಇರಲಿಲ್ಲವೇ ಅವರಿಗೆ ಕೆಲಸ

ಒಳ್ಳೆಯ ಹವಾಮಾನಕ್ಕೆ ಪ್ರಾರ್ಥಿಸುವುದರ ಹೊರತು?


ತರಗತಿಯಲ್ಲಿ ಇದ್ದಿದ್ದರೆ ಒಂದು ಕಿಟಕಿ, ಎಲ್ಲರೂ

ಇತ್ತ ಗಡಿಯಾರದ ಮೇಲೆ ಒಂದು ಕಣ್ಣಿಟ್ಟುಕೊಂಡೇ,

ನಿರುಕಿಸುತ್ತಿದ್ದರು ಎಳೆಯರಲ್ಲಿರದ ನಯನಾಜೂಕಿನಿಂದ

ಕಾಡುನೇರಳೆ ತಲೆದೂಗುವುದನ್ನು.


ಪಕಳೆಗಳು ಉದುರಿ ಹರಡುವುದನ್ನು ಮಾಡಬಹುದಾಗಿತ್ತು

ಅಧ್ಯಯನ ನಾವು, ಅದರಲ್ಲೇ ಕಾಣಬಹುದಾಗಿತ್ತು

ಹಿಮಪಾತದ ಸಂಭ್ರಮ. ಕೋಣೆ ತುಂಬಿಕೊಳ್ಳತೊಡಗಿತು

ಮೌನದಿಂದ ಒಂದೊಂದೇ ಕಣಕಣ.


ಜೀವನವನ್ನು ಬಂಧನದಲ್ಲೇ ಕಳೆಯುವ ನಿರ್ಬಂಧಕ್ಕೆ

ಕಟ್ಟುಬಿದ್ದ ಗಾಳಿಯ ಕ್ಷೀಣ ಗರ್ಜನೆಯ ವಿನಾ ಬೇರೇನೂ

ಸದ್ದಿಲ್ಲ. ಸೆಲ್ ಫೋನಿನಲ್ಲಿ ಉಲಿಯುವ ಹಕ್ಕಿಯ 

ಹಾಡೂ ಕೇಳಿಸದು. ಮನೆಗೆ ಹೋಗು


ಎನ್ನೋಣ ಎಂದುಕೊಂಡೆ ಪುಟದಲ್ಲಿದ್ದ ಕುದುರೆಗೆ.

ನಿನಗೆ ಗೊತ್ತಲ್ಲ ದಾರಿ, ಚಳಿಯಲ್ಲಿ ನೀಲಿ 

ಬಣ್ಣಕ್ಕೆ ತಿರುಗಿದ ಹಿಮಪಾತದಲ್ಲೂ.


ಮೂಲ: ಡೆಬೊರಾ ಗ್ರೆಗರ್

ಅನುವಾದ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)