ಕಾಡುದಾರಿಯ ಹಾಡು

 (ಆಸ್ಕರ್ ಫಿಗುವರ್ಡೋ ಅವರ ಒಂದು ವರ್ಣ ಚಿತ್ರ ನೋಡಿ ಬರೆದ ಕವಿತೆ. ಇಲ್ಲಿ ಕೊಟ್ಟಿರುವ ಚಿತ್ರವನ್ನು ಬರೆದಿದ್ದು ಏಐ)




ಎಷ್ಟೋ ಜನ ತುಳಿದು ಹೋದ ಹಾದಿಯನ್ನೇ ನೀನೂ ತುಳಿ

ಕಷ್ಟವೆನ್ನಿಸಿದಾಗ ಮೇಲೇರುವಾಗ ಏದುಬ್ಬಸ ಪಡುವಾಗ

ಅಷ್ಟು ಹೊತ್ತು ನಿಂತು ನೋಡು ಇಕ್ಕೆಲದಲ್ಲೂ ಹಬ್ಬಿ

ಸುಸ್ತಾದ ಪಯಣಿಗನಿಗೆ ನೆರಳು ಕೊಡುವ ವನರಾಜಿ.

ಮತ್ತೆ ಬರುವೆಯೋ ಇಲ್ಲವೋ ಈ ದಾರಿಯಲ್ಲಿ!

ಸುತ್ತಲೂ ನೋಡು,ಪಕ್ಕದಲ್ಲಿಟ್ಟು ನಿನ್ನ ಸಂವಹನ ಸಾಧನ!

ಗುಟ್ಟುಗಳೆಷ್ಟೋ ಒಳಗಿಟ್ಟುಕೊಂಡು ಹೊರಗೆ ನಗುತ್ತಾ

ನಿತ್ಯವೂ ವಾಟ್ಸಾಪ್ ಇತ್ಯಾದಿಗಳಲ್ಲಿ ನಡೆಸುವ ಸಂಭಾಷಣೆ

ವ್ಯರ್ಥ! ಅಗೋ ಕೇಳು.  ಕಿವಿಗೊಟ್ಟು ಏನು ಹೇಳುತ್ತಿದೆ 

ಎತ್ತರದ ಮರ! ಅದೆಷ್ಟು ಹಕ್ಕಿ ಹುಳಹುಪ್ಪಟೆಗಳ ಆಗರ!

ಎಷ್ಟು ಗಿಳಿ ಗಿಡುಗ ಸಂಸಾರ ಹೂಡಿವೆಯೋ ಇದರೊಳಗೆ

ಹುಟ್ಟಿವೆಯೋ ಎಷ್ಟು ಮರಿ, ಜೀವಗಳೆಷ್ಟು ಸತ್ತಿವೆಯೋ!

ಅತ್ತ ನೋಡು ಸಂಭ್ರಮಿಸುತ್ತಿದೆ  ಹೂ ಮುಡಿದ ಬಳ್ಳಿ

ಉತ್ತರವಿಲ್ಲ ಏನು ಕಾರಣವೆಂಬ ಪ್ರಶ್ನೆಗೆ ಯಾರಲ್ಲಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)