ಮ್ಯೂಸಿಯಮ್ಮಿನಲ್ಲಿ ಚಂದ್ರಗುಪ್ತ

 ಚಿನ್ನದ ನಾಣ್ಯದ ಮೇಲಿದೆ
ಎರಡನೇ ಚಂದ್ರಗುಪ್ತನ ಚಿತ್ರ
ಕುದುರೆ ಏರಿ ಹೊರಟ ನಾಗಾಲೋಟಕ್ಕೆ
ಹಾರಾಡುತ್ತಿದೆ ಗುಂಗುರು ಕೂದಲು
ಮತ್ತು ಸೊಂಟಕ್ಕೆ ಕಟ್ಟಿದ ವಸ್ತ್ರ.

ತೋಳಿಗೆ ತೋಳುಬಂದಿ ಕಾಲಿಗೆ ಕಾಲುಬಂದಿ,
ಸೊಂಟಕ್ಕೆ ಕಮರ್ ಬಂದು
ಕಿವಿಯಲ್ಲಿ ಕಡುಕು, ಕೊರಳಲ್ಲಿ ಹಾರ,
ಕೈಯಲ್ಲಿ ಬಿಲ್ಲು ಹಿಡಿದ ಸರದಾರ.
ಏರಿದ ಕುದುರೆಗೂ  ಸರ್ವಶೃಂಗಾರ.

ಯಾರ ಕೈಗೂ ಸಿಕ್ಕದ ರಾಜ ಈಗ 
ತಾನೇ ಆಗಿದ್ದಾನೆ ಒಂದು ಒಡವೆ.
ಬಂದಿಯಾಗಿದ್ದಾನೆ
ಬ್ರಿಟಿಷ್ ಮ್ಯೂಸಿಯಂನಲ್ಲಿ 
ಮೂರು ಪಿನ್ನುಗಳ ನಡುವೆ.

ಸಿ. ಪಿ.ರವಿಕುಮಾರ್



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)