ಭರವಸೆ
ಮೂಲ: ರೋಸ್ ಮೆರಿ ವಾಹ್ತೋಲಾ ಟ್ರಾಮರ್
ಅನುವಾದ: ಸಿ ಪಿ ರವಿಕುಮಾರ್
ಭರವಸೆಯ ಕಿಸೆಗಳಲ್ಲಿವೆ ಸಣ್ಣ ರಂಧ್ರಗಳು
ಕೆಳಗೆ ಉದುರುವ ತುಣುಕುಗಳು
ಮೂಡಿಸುತ್ತವೆ ನಮಗೆ ಆತಂಕವಾದಾಗ
ಅನುಸರಿಸಲು ದಾರಿ.
ಭರವಸೆಯ ಗುಟ್ಟು ಏನೆಂದರೆ
ಅದಕ್ಕೆ ಗೊತ್ತೇ ಇಲ್ಲ ಯಾವುದು ಗುರಿ.
ಕೆಳಗೆ ಉದುರುವ ತುಣುಕುಗಳು
ಮೂಡಿಸುತ್ತವೆ ನಮಗೆ ಆತಂಕವಾದಾಗ
ಅನುಸರಿಸಲು ದಾರಿ.
ಭರವಸೆಯ ಗುಟ್ಟು ಏನೆಂದರೆ
ಅದಕ್ಕೆ ಗೊತ್ತೇ ಇಲ್ಲ ಯಾವುದು ಗುರಿ.
ಅದಕ್ಕೆ ಗೊತ್ತಿರುವುದು ಇಷ್ಟೇ,
ಪ್ರತಿಯೊಂದು ದಾರಿಯ ಪ್ರಾರಂಭವೂ
ಒಂದು ಹೆಜ್ಜೆಯ ಮುಂದೆ
ಇನ್ನೊಂದನ್ನು ಇಟ್ಟಾಗ ಎಂದಷ್ಟೇ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ