ಹೂರಣದ ಹೋಳಿಗೆ
ಮೂಲ: ಪಾದ್ರಾಗ್ ಡ್ಯಾಲಿ
ಭಾವಾನುವಾದ: ಸಿ ಪಿ ರವಿಕುಮಾರ್
ನಾವು ಏಳುವ ಮುನ್ನವೇ ನೀನು
ಕೆಳಗೆ ತಯಾರಿ ನಡೆಸುತ್ತಿದ್ದದ್ದು ಕೇಳಿಸುತ್ತಿತ್ತು.
ಕೆಳಗೆ ತಯಾರಿ ನಡೆಸುತ್ತಿದ್ದದ್ದು ಕೇಳಿಸುತ್ತಿತ್ತು.
ಇಡೀ ಬೆಳಗ್ಗೆ ನಾವು ನೋಡಿದೆವು
ನೀನು ಕಣಕ ನಾದುವುದನ್ನು
ಅದರೊಂದಿಗೆ ಪಿಸುಗುಟ್ಟುತ್ತಾ ಮಾತಾಡುವುದನ್ನು.
ನಾವು ಕೆಳಗೆ ಇಳಿದು ಬಂದಾಗ
ಎಲ್ಲಿ ನಿನ್ನ ಏಕಾಗ್ರತೆಗೆ ಭಂಗವಾದೀತೋ ಎಂದು
ಮೆಲ್ಲನೆ ನಡೆದು ಬಂದೆವು.
ನಂತರ ನೀನು ಹೂರಣ ತುಂಬಿದ ಉಂಡೆಗಳನ್ನು
ಲಟ್ಟಿಸುವುದು ಕಂಡಿತು
ಕಪ್ಪು ಕಲ್ಲಿನ ಮೇಲೆ ತೆಳ್ಳಗೆ.
ಅಂಚು ಬರಬಾರದು,
ತೆಳ್ಳಗೆ ಇರಬೇಕು
ಹರಿಯಬಾರದು, ನಾಜೂಕು.
ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಸಿದ್ಧವಾಯಿತು.
ತುಪ್ಪ, ಹಾಲು, ಸೀಕರಣೆ ಇತ್ಯಾದಿ
ಮೊದಲೇ ತಯಾರಾಗಿ ಕಾದಿದ್ದವು.
ನಿನ್ನ ಹೊಳೆಯುವ ಕಣ್ಣುಗಳ
ಬೆಳಕಿನಲ್ಲಿ ನಾವು ಮೌನವಾಗಿ ತಿನ್ನುತ್ತಾ ಕುಳಿತೆವು
ಎಲ್ಲೋ ಮಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿರುವಾಗ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ