ಟೆಲಿಫೋನ್
ಮೂಲ: ಮೆಲ್ ಮೆಕ್ ಮಾಒನ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
೧
ಬೆಳ್ಳಗೆ, ಬೃಹದಾಕಾರ,
ಆನೆಯೊಂದು ನಿಲ್ಲಬಹುದಾದಷ್ಟು
ದೊಡ್ಡ ಸಂಖ್ಯೆಗಳುಳ್ಳ
ಅಪ್ಪನ ಕಡೆಯ ಫೋನ್.
ಬೆಳ್ಳಗೆ, ಬೃಹದಾಕಾರ,
ಆನೆಯೊಂದು ನಿಲ್ಲಬಹುದಾದಷ್ಟು
ದೊಡ್ಡ ಸಂಖ್ಯೆಗಳುಳ್ಳ
ಅಪ್ಪನ ಕಡೆಯ ಫೋನ್.
ಅದನ್ನು ಅವನು ಬಳಸಿದ್ದು ಅಷ್ಟಕ್ಕಷ್ಟೇ
ತಾನು ಮಾತಾಡಬೇಕಾದಾಗ
ಮನೆಗೇ ಹೋಗಿ ಮಾತಾಡುವುದು ಅವನ ಪದ್ಧತಿ.
ಯಾರೋ ಫೋನ್ ಮಾಡಿದಾಗ
ಟಿವಿ ಮೇಲೆ ಕುದುರೆ ರೇಸ್ ನೋಡುತ್ತಾ
ಕುಳಿತಿರುತ್ತಿದ್ದ.
ಅಥವಾ ಹೊರಗೆ ಹೊರಡಲು ನಡೆಸುತ್ತಿದ್ದ ಸಿದ್ಧತೆ.
ಫ್ರಾನ್ಸ್ ನಲ್ಲಿ ಒಂದು ಸಂಜೆ
ಇದೇ ಫೋನ್ ಬಳಸಿ
ಒಮ್ಮೆಲೇ ಕರೆ ಮಾಡಿದ
ಸಾಯುವ ಮೂರು ದಿವಸಗಳ ಮುನ್ನ.
ನಾನು ಬೇಸಗೆ ರಜಕ್ಕೆ ಬಂದಾಗ
ಎಲ್ಲೆಲ್ಲಿ ಹೋಗಬಹುದು ಎಂದೆಲ್ಲಾ
ಮಾತಾಡಿದ, ಮುಚ್ಚಿಡಲಾಗದೆ ಉತ್ಸಾಹವನ್ನ.
ಈಗ ಅದೇ ಫೋನಿನ ರಿಸೀವರ್ ಹಿಡಿದು
ಕೇಳಿಸಿಕೊಂಡಾಗ: ಸ್ಮಶಾನ ಮೌನ.
ಅವನು ಕೇಳಿಸಿಕೊಳ್ಳುತ್ತಿರಬಹುದೆಂಬ ಕಲ್ಪನಾಯಾನ.
ನಾನು ಕಲ್ಪಿಸಿಕೊಳ್ಳುತ್ತೇನೆ ಸಂಖ್ಯೆಗಳ ಸರಣಿ.
ನೀವು ಕರೆ ಮಾಡಿದ
ವ್ಯಕ್ತಿ ವ್ಯಾಪ್ತಿಯ ಹೊರಗಿದ್ದಾರೆ
ಎನ್ನುತ್ತದೆ ಅಶರೀರವಾಣಿ.
೨
ಎರಡು ನಿಮಿಷಕ್ಕಿಂತಲೂ ಹೆಚ್ಚು ಮಾತಾಡುವುದಿದ್ದರೆ
ಪತ್ರ ಬರೆಯುವುದೇ ಸರಿ
ಎಂದು ಸಿಡಿಮಿಡಿಗೊಳ್ಳುತ್ತಿದ್ದ.
ನಾವು ಹದಿಹರೆಯದಲ್ಲಿದ್ದಾಗ
ಅವನ ಸಿಡಿಮಿಡಿಗೆ ಹೆದರಿ
ಜಗಳವೇತಕ್ಕೆ ವ್ಯರ್ಥ
ಎಂದು ನಮ್ಮ ಫೋನ್ ಕರೆಗಳು
ಎಷ್ಟು ಬೇಕೋ ಅಷ್ಟು, ಸಂಕ್ಷಿಪ್ತ.
ಈಗ ಅವನೊಂದಿಗೆ ಮಾತಾಡಬೇಕೆಂಬ ಹಂಬಲವಾದಾಗ
ಟೆಲಿಪೋನ್ ಕಡೆಗೆ ದಿಟ್ಟಿಸಿ ನೋಡಿ
ಬೇರೆ ದಾರಿ ಕಾಣದೆ
ಮರುಕಲ್ಪಿಸಿಕೊಂಡು ಸಂಭಾಷಣೆ
ಬರೆಯುತ್ತೇನೆ ಕಾಗದದ ಮೇಲೆ ಒಕ್ಕಣೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ