ಕೆಲವರಿಗೆ ಇಷ್ಟ ಕವಿತೆ
ಮೂಲ: ವಿಸ್ಲವಾ ಸಿಂಬೋರ್ಸ್ಕಾ
ಅನುವಾದ: ಸಿ ಪಿ ರವಿಕುಮಾರ್
ಕೆಲವರಿಗೆ -
ಅರ್ಥಾತ್ ಎಲ್ಲರಿಗೂ ಅಲ್ಲ,
ಬಹುಜನರಿಗೂ ಅಲ್ಲ,
ಅಲ್ಪ ಸಂಖ್ಯಾತರು.
ಶಾಲಾ ಮಕ್ಕಳನ್ನು ಹೊರತು ಪಡಿಸಿ
ಏಕೆಂದರೆ ಅವರಿಗೆ ಅದು ಕಡ್ಡಾಯ
ಕವಿಗಳನ್ನು ಎಣಿಸಬೇಡಿ,
ಹೆಚ್ಚೆಂದರೆ ಸಾವಿರದಲ್ಲಿ ಇಬ್ಬರು.
ಅರ್ಥಾತ್ ಎಲ್ಲರಿಗೂ ಅಲ್ಲ,
ಬಹುಜನರಿಗೂ ಅಲ್ಲ,
ಅಲ್ಪ ಸಂಖ್ಯಾತರು.
ಶಾಲಾ ಮಕ್ಕಳನ್ನು ಹೊರತು ಪಡಿಸಿ
ಏಕೆಂದರೆ ಅವರಿಗೆ ಅದು ಕಡ್ಡಾಯ
ಕವಿಗಳನ್ನು ಎಣಿಸಬೇಡಿ,
ಹೆಚ್ಚೆಂದರೆ ಸಾವಿರದಲ್ಲಿ ಇಬ್ಬರು.
ಇಷ್ಟ -
ಇಷ್ಟವೆಂದರೆ ಹೆಚ್ಚೇನೂ ಹೇಳಿದಂತಲ್ಲ
ಇಷ್ಟವಾಗುತ್ತದೆ ದಾಳಿಂಬೆ ಹಾಕಿದ ಮೊಸರನ್ನ
ಇಷ್ಟವಾಗುವುದು ಹೊಗಳಿಕೆ ಮತ್ತು ನೀಲಿ ಬಣ್ಣ
ಇಷ್ಟವಾಗುತ್ತದೆ ಹಳೆಯ ಕಾಲದ ಆಭರಣ
ಇಷ್ಟ ಪಡುತ್ತೇವೆ ಮೇಲುಗೈ ಪಡೆದ ಕ್ಷಣ
ಮತ್ತು ನಾಯಿಯ ತಲೆಯನ್ನು ನೇವರಿಸುವುದನ್ನ.
ಕವಿತೆ -
ಆದರೆ ಕವಿತೆ ಎಂದರೆ ಏನು?
ಈ ಪ್ರಶ್ನೆಗೆ ಸಿಕ್ಕಿವೆ
ಅನೇಕ ಅರೆಬೆಂದ ಉತ್ತರಗಳು
ನನಗೂ ಗೊತ್ತಿಲ್ಲ ಸರಿಯಾಗಿ
ಗೊತ್ತಿಲ್ಲ ಆದರೂ ಹಿಡಿದುಕೊಂಡಿದ್ದೇನೆ
ಹಿಡಿದುಕೊಳ್ಳುವರಲ್ಲ ಮುಗ್ಗರಿಸದ ಹಾಗೆ
ಕೈಪಿಡಿಯನ್ನು ಆಸರೆಯಾಗಿ, ಹಾಗೆ.
👌🏻👌🏻
ಪ್ರತ್ಯುತ್ತರಅಳಿಸಿ