ಪ್ರೇತನರ್ತನ

 ಈಗ ಮಾಧ್ಯಮದಲ್ಲಿ ಪ್ರತಿನಿತ್ಯ ಪ್ರೇತಗಳ ನರ್ತನ
ಎಪ್ಸ್ಟೀನ್ ಮಾಡಿದ ಪಾಪಗಳ ಪುನರಾವರ್ತನ

ಒಳ್ಳೆಯ ಕಾರ್ಯಗಳನ್ನು ನೆನಪಿಡಲಾರರು ಜನ
ಕೆಟ್ಟದ್ದನ್ನು ಕಾಪಾಡುವರು ನೆನೆಯುವರು ಅನುದಿನ

ಹೇಗೆ ವೃದ್ಧಿಸುವುದೋ ಬ್ಯಾಂಕಿನಲ್ಲಿಟ್ಟ ಹಣ
ಹಾಗೇ ಬಡ್ಡಿ ಗಳಿಸುವುದು ಕೂಡಿಟ್ಟ ಋಣ

ನೀವು ದೊಡ್ಡವರೆಂದು ನಂಬಿದ್ದ ವಿದ್ವಜ್ಜನ
ಮುಖವಾಡ ಕಳಚಿ ನೈಜದ ಅನಾವರಣ

ಕೊಟ್ಟುಬಿಟ್ಟಿದ್ದೇವೆ ಇವರಲ್ಲಿ ಹಲವರಿಗೆ ಪದ್ಮಭೂಷಣ 
ಅವಾರ್ಡ್ ವಾಪಸಿಗೆ ಈಗ ಅತ್ಯಂತ ಸೂಕ್ತ ಕ್ಷಣ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ