ನಡುಗುವ ಜನರಿಗೆ


ಕವಿಗಳು ಅತ್ಯಂತ ಧೈರ್ಯಶಾಲಿಗಳ ಸಾಲಿನಲ್ಲಿ ನಿಲ್ಲುತ್ತೇವೆ.
ಬೇರೆಯವರು ಮುಚ್ಚಿಡುವುದನ್ನು ನಾವು ಬಿಚ್ಚಿ ತೋರುತ್ತೇವೆ
ನಾಜೂಕಾದದ್ದನ್ನು ಮೇಲೆತ್ತಿ ಅದರ ಮೇಲೆ ಬೆಳಕು ಚೆಲ್ಲಿ
ಪಿಸುಗುಡುತ್ತೇವೆ "ನೋಡಿ, ಅನುಭವಿಸುವುದು ಎಂದರೆ ಇದೇ."

ಹೃದಯ ಛಿದ್ರವಾದಾಗಲೂ ಅದಕ್ಕೆ ನೀಡುತ್ತೇವೆ  ಭಾಷೆಯ ಬ್ಯಾಂಡೇಜು ಹತ್ತಿ
ಎಷ್ಟೇ ಉರಿಯಾದರೂ ಮಸಿಯು ಔಷಧವೆಂಬ ನಂಬಿಕೆ ಬಿತ್ತಿ 
ಬರವಣಿಗೆ ಮುಂದುವರೆಸುತ್ತೇವೆ,  ಏಕೆಂದರೆ ಎಲ್ಲಾದರೂ ಇದ್ದಾರು ಜನ
ಯಾರಿಗೆ ಬೇಕೋ ತಮ್ಮಂತೆ ನಡುಗುವವರು ಇನ್ನೂ ಇದ್ದಾರೆಂಬ ಸಾಂತ್ವನ.

ಮೂಲ: ತಾಲಿಯಾ ಕ್ಲೆಮ್ 
ಕನ್ನಡಕ್ಕೆ: ಸಿ ಪಿ ರವಿಕುಮಾರ್


ಕಾಮೆಂಟ್‌ಗಳು