ಗಡಿ

ಮೂಲ ಉರ್ದೂ : ಜಾಹೀದ್ ಇಮ್ರೋಜ್ (ಪಾಕೀಸ್ತಾನಿ ಯುವಕವಿ)
ಕನ್ನಡಕ್ಕೆ: ಸಿ. ಪಿ. ರವಿಕುಮಾರ್


Image result for fence border sharp
ಗಡಿಯ ಮೇಲೆ ಬರಿಹೊಟ್ಟೆಯಲ್ಲೇ
ನಮಗೆ ಕಟ್ಟಲಾಗದು ಬೇಲಿ.
ರಾತ್ರಿಗಳನ್ನು ಒಣಗಿಸಿಬಿಡುತ್ತದೆ ಹಸಿವು.
ದಾಹ ತೀರಿಸದು ನಮ್ಮ ಕಣ್ಣೀರು.

ಧಾರ್ಮಿಕ ಸಂಗೀತಕ್ಕೆ
ರಣಗೀತೆಯ ರಾಗ ದೊರೆತಾಗ
ಫಲವಂತಿಕೆಯಲ್ಲೂ ಬೆಳೆಯುತ್ತದೆ ಬರಗಾಲ.
ಮಕ್ಕಳು ತಾಯಿಎದೆಯಿಂದ
ರಕ್ತ ಹೀರತೊಡಗುತ್ತಾರೆ.

ಮುಖಗಳ ಮೇಲೆ ಯಾರೂ
ಬಾವುಟಗಳನ್ನು ತೊಡುವುದಿಲ್ಲ,
ಸ್ವಾತಂತ್ರ್ಯದಿನದಂದು ಜನ
ತಮ್ಮ ಸಂತೋಷವನ್ನು ಸುಡುತ್ತಾರೆ,
ನಕ್ಷತ್ರಕಡ್ಡಿಯನ್ನಲ್ಲ.

ಸಿಪಾಯಿಗಳು
ಹೊಲ ನಾಶಮಾಡುವ ಯಂತ್ರಗಳೆಂಬ ಹಾಡನ್ನು
ಸೇನೆಯು ಎಂದೂ ಗುಣುಗುಣಿಸುವುದಿಲ್ಲ.

ಹೂವುಗಳು ನವವಧುವಿನ ಹೆರಳಲ್ಲಿ ಮತ್ತು
ಮಕ್ಕಳ ಸಮವಸ್ತ್ರಗಳ ಮೇಲೆ ಮಾತ್ರ
ಭೂಷಣವಾಗುತ್ತವೆಯೇ?
ಗಡಿಗಳ ರೇಖೆಗಳನ್ನು ಗುರುತಿಸಲು
ಮುಳ್ಳುತಂತಿಯ ಬದಲು
ಹೂಗಿಡಗಳ ಸಾಲನ್ನು ಕಟ್ಟಲಾಗದೆ?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)