ಹತ್ತು ಉರ್ದು ಶೇರ್
೧
ಏಕೆಂದರೆ ನೋಡಿ ಹೂವಿಗೆ ಬರಗಾಲ ಎಲ್ಲೆಲ್ಲೂ
(ಆಕೀಲ್ ಶಾದಾಬ್)
೨
ಹೇಗೆ ಬದುಕಿದ್ದೇನೆ ಭೂಮಿಯ ಮೇಲೆ ಗೊತ್ತೇ?
ಶತ್ರುವಿನ ಮನೆಯಲ್ಲಿ ಅತಿಥಿ ರಾತ್ರಿ ಕಳೆದಂತೆ
(ಭಗವಾನ್ ದಾಸ್ ಏಜಾಜ್)
೩
ಮನೆಯಲ್ಲೇ ಆಗುಬಹುದು ಭಗವಂತನ ದರ್ಶನ
ಮಕ್ಕಳೊಂದಿಗೆ ಮಗುವಾಗಿ ಆಡಿದರೆ ಎರಡು ಕ್ಷಣ
(ಬಿಸ್ಮಿಲ್ ನವಶ್ ಬಂದಿ )
೪
ಎಲ್ಲರ ಮನೆಗೆ ಹೋಗಿ ಕೊಚ್ಚುತ್ತಾರಲ್ಲ ಅವರಿವರ ಬಗ್ಗೆ ಹರಟೆ ಗಮ್ಮತ್ತು
ತಮ್ಮ ಮನೆಯಲ್ಲೇ ಅವರಿಗೆ ಸಿಕ್ಕುವುದಿಲ್ಲ ಸವಕಲು ಕಾಸಿನ ಕಿಮ್ಮತ್ತು
(ಅಸಿಮ್ ಶಹನಾಜ್ ಶಿಬ್ಲಿ)
೫
ಪ್ರತಿಯೊಂದು ವಿಷಯಕ್ಕೂ ಹಿಂದೂ ಮುಸ್ಲಿಂ ಎನ್ನುವೆಯಲ್ಲ ಕರ್ಮ!
ಗೊತ್ತಿಲ್ಲವೇ ನಿನಗೆ ಸುಂದರಿ, ಪ್ರೇಮವೆಂಬುದೇ ಬೇರೆ ಧರ್ಮ
(ಜಮಾಲುದ್ದೀನ್ ಆಲಿ)
೬
ಹೇಗೆ ಕೂಡಿಬಂದೀತು ಮಾತು? ಪ್ರತಿಯೊಂದೂ ಇಜ್ಜೋಡು
ಕಣ್ಣಿಗಿಂತಲೂ ದೊಡ್ಡದು ಕನಸು, ನಿದ್ದೆಗಿಂತ ರಾತ್ರಿಯೇ ದೊಡ್ಡದು
(ಶಾಹಿದ್ ಮೀರ್)
೭
ತೆರಳುವ ಮುನ್ನ ಕಾಲ ಉಳಿಸುವುದು ನೆನಪು ಮಾತ್ರ ಹಲವಾರು
ಹಾರಿಹೋದರೂ ಹಕ್ಕಿ ಉಳಿದಂತೆ ಪಂಜರದಲ್ಲದರ ನೆರಳು
(ನರೇಶ್)
೮
ಕಿಸೆ ಖಾಲಿಯಾದಾಗ ಹೇಗೆ ತೆಪ್ಪಗಾಗುತ್ತಾನೆ ಮನುಷ್ಯ
ನೀರಿಲ್ಲದೇ ಹೋದಾಗ ಹೇಗೆ ತೆಪ್ಪಗಾಗುತ್ತದೋ ಮತ್ಸ್ಯ
(ಜಹೀರ್ ಆತಿಶ್)
೯
ಬದುಕಿನುದ್ದಕ್ಕೂ ದೊಡ್ಡ ಮರಗಳನ್ನೇ ಹುಡುಕುತ್ತ ಹಾರಾಡಿದ ಹಕ್ಕಿ
ಯಾವುದೋ ಬಳ್ಳಿಯ ತೊಡರಿನಲ್ಲಿ ನೆನ್ನೆ ಅದರ ಮೃತದೇಹ ಸಿಕ್ಕಿ
(ಅಖ್ತರ್ ನಜ್ಮಿ)
೧೦
ಬದುಕಿನ ಓಟ ಜಂಜಾಟದಲ್ಲಿ ಉಳಿದುಕೊಂಡಿದ್ದ ಈ ಎರಡು ಸಾಲು
ಅದನ್ನೂ ತೊಗೊಂಡು ಹೋಗಿ ಸಂತೋಷವಾಗಿರು ಎಲ್ಲಾದರೂ
(ಜಮೀಲುದ್ದೀನ್ ಆಲಿ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ