ವ್ಯೋಮದಲ್ಲೊಂದು ಹಾಡು

 ವ್ಯೋಮದಲ್ಲೊಂದು ಹಾಡು



ಮೂಲ:  ಏಡ್ರಿಯನ್ ಮಿಚೆಲ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್


ಮಾನವನು ಹಾರಿ ಆಕಾಶದಾಚೆಗೆ ಹೋದ ಘಳಿಗೆ
ಹಿಂತಿರುಗಿ ನೋಡಿದನು ಭೂಮಿಯ ನೀಲ ಕಣ್ಣೊಳಗೆ
ನಿನ್ನ ಕಣ್ಣುಗಳೇಕೆ ಕಡುನೀಲಿ ಎಂದು ಕೇಳಲು
ಉತ್ತರ ಬಂತು: ಕಣ್ಣೀರು ತುಂಬಿರುವ ಕಡಲು 
ಕಡಲಿನಲ್ಲಿ ಏಕಿದೆ ಅಷ್ಟೊಂದು ಕಣ್ಣೀರು?
ನಾನು ಅತ್ತಿದ್ದೇನೆ ಸಂವತ್ಸರ ಸಹಸ್ರಾರು.
ವ್ಯೋಮದಲ್ಲಿ ಸಾಗುತ್ತಾ ಏಕೆ ಕಣ್ಣೀರು ಹಾಕುವೆ?
ಏಕೆಂದರೆ ನಾನು ಮಾನವಕುಲಕ್ಕೆ ತಾಯಾಗಿರುವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)